Adani issue: ಕೇಂದ್ರ ಸರಕಾರ ಅದಾನಿಯನ್ನು ರಕ್ಷಿಸುತ್ತಿದೆ, ಕೂಡಲೇ ಬಂಧಿಸಿ: ರಾಹುಲ್ ಗಾಂಧಿ
ಕೋಟ್ಯಂತರ ರೂ. ವಂಚನೆ ಕೇಸಲ್ಲಿ ಅದಾನಿ ಆರೋಪಿ: ವಿಪಕ್ಷ ನಾಯಕ
Team Udayavani, Nov 28, 2024, 5:21 AM IST
ಹೊಸದಿಲ್ಲಿ: ಅಮೆರಿಕದಲ್ಲಿ ಲಂಚ ಮತ್ತು ವಂಚನೆಯ ಆರೋಪ ಎದುರಿಸುತ್ತಿರುವ ಗೌತಮ್ ಅದಾನಿ ಅವರನ್ನು ಕೇಂದ್ರ ಸರಕಾರ ರಕ್ಷಿಸುತ್ತಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಸತ್ ಕಲಾಪ ಆರಂಭಕ್ಕೂ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ರಾಹುಲ್, “ದೇಶದಲ್ಲಿ ಸಣ್ಣ ಸಣ್ಣ ಆರೋಪಿಗಳಿಗೂ ಜನರನ್ನು ಬಂಧಿಸುತ್ತಿರುವಾಗ, ಅದಾನಿ ಯನ್ನು ಏಕೆ ಬಂಧಿಸುತ್ತಿಲ್ಲ. ಅದಾನಿ ಸಾವಿ ರಾರು ಕೋಟಿ ರೂ. ಪ್ರಕರಣದಲ್ಲಿ ಆರೋಪಿ ಯಾಗಿದ್ದಾರೆ. ಹೀಗಾಗಿ ಬಂಧಿಸಬೇಕು’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಆರೋಪ ತಿರಸ್ಕರಿಸಿದ ಅದಾನಿ ಗ್ರೂಪ್
ಗೌತಮ್ ಅದಾನಿ, ಸಾಗರ್ ಅದಾನಿ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿರುವ ಅದಾನಿ ಗ್ರೂಪ್ ಎಲ್ಲ ಆರೋಪಗಳನ್ನು ತಿರಸ್ಕರಿಸಿದೆ. ಈ ಬಗ್ಗೆ ಬಾಂಬೆ ಷೇರು ಪೇಟೆಗೆ ಲಿಖೀತ ಉತ್ತರ ನೀಡಿರುವ ಗ್ರೂಪ್ ಗೌತಮ್ ಮತ್ತು ಸಾಗರ್ ವಿರುದ್ಧ ಅಮೆರಿಕದ ಭ್ರಷ್ಟಾಚಾರ ಕಾಯ್ದೆಯ ಅನ್ವಯ ಕೇಸು ದಾಖಲಾಗಿಲ್ಲ ಎಂದಿದೆ.
ಅದಾನಿ ಪರ ರೋಹ್ಟಗಿ, ಜೇಠ್ಮಲಾನಿ ವಾದ
ಅದಾನಿ ಗ್ರೂಪ್ ಪರ ಖ್ಯಾತ ವಕೀಲರಾ ಗಿರುವ ಮುಕುಲ್ ರೋಹ್ಟಗಿ, ಮಹೇಶ್ ಜೇಠ್ಮಲಾನಿ ವಾದ ಮಂಡಿಸ ಲಿದ್ದಾರೆ. ಅದಾನಿ ವಿರುದ್ಧ 5 ಪ್ರಕರಣಗ ಳನ್ನು ದಾಖಲಿಸಲಾಗಿದೆ. ಇದರಲ್ಲಿ ಪ್ರಮುಖ ಎನಿಸಕೊಂಡಿರುವ ಮೊದಲ ಮತ್ತು 5ನೇ ಪ್ರಕರಣಗಳಲ್ಲಿ ಗೌತಮ್ ಹಾಗೂ ಸಾಗರ್ ಅದಾನಿ ಹೆಸರಿಲ್ಲ ಎಂದು ರೋಹrಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.