ಅಫ್ಘಾನಿಸ್ಥಾನದಲ್ಲಿ ಶುರುವಾಯಿತು ಪೈಶಾಚಿಕತೆ : ಶರಣಾದ 22 ಯೋಧರ ಹತ್ಯೆ
Team Udayavani, Jul 14, 2021, 6:40 AM IST
ಕಾಬೂಲ್: ಅಫ್ಘಾನಿಸ್ಥಾನದ ಕಂದಹಾರ್ ಸಹಿತ ಶೇ.85ಕ್ಕಿಂತ ಅಧಿಕ ಪ್ರದೇಶಗಳು ತಾಲಿಬಾನ್ ಉಗ್ರರ ವಶಕ್ಕೆ ಬರುತ್ತಿದ್ದಂತೆಯೇ, ಅವರ ಪೈಶಾಚಿಕ ಕೃತ್ಯ ಅನಾವರಣಗೊಳ್ಳಲು ಆರಂಭವಾಗಿದೆ.
ಯುದ್ಧಗ್ರಸ್ಥ ರಾಷ್ಟ್ರದಲ್ಲಿ ಶರಣಾಗತರಾದ ಅಫ್ಘಾನಿಸ್ಥಾನದ ಸೇನೆಯ 22 ಯೋಧರನ್ನು ಉಗ್ರರು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ತುರ್ಕ್‌ಮೇನಿಸ್ಥಾನಕ್ಕೆ ಹೊಂದಿಕೊಂಡಿರುವ ಗಡಿ ಪ್ರದೇಶದ ಪ್ರಾಂತ್ಯ ಫರ್ಯಾಬ್‌ನಲ್ಲಿ ಈ ಕೃತ್ಯವನ್ನು ಎಸಗಲಾಗಿದೆ. ಜೂ.16ರಂದೇ ಈ ದುರಂತ ನಡೆದಿದೆ. ಈ ಬಗ್ಗೆ ವೀಡಿಯೋ ಒಂದು ಮಂಗಳವಾರ ಬಿಡುಗಡೆಯಾಗಿದೆ.
ಫರ್ಯಾಬ್‌ನಲ್ಲಿ ಸೇನಾಪಡೆಗಳು ಮತ್ತು ಉಗ್ರರ ನಡುವೆ ಬಿರುಸಿನ ಗುಂಡಿನ ಕಾಳಗ ನಡೆಯಿತು. ಅಂತಿಮವಾಗಿ ಸೈನಿಕರ ಬಳಿ ಇದ್ದ ಗುಂಡುಗಳು ಬರಿದಾದವು. ಒಟ್ಟು 22 ಮಂದಿಯನ್ನು ತಾಲಿಬಾನ್ ಉಗ್ರರು ಸೆರೆಹಿಡಿದರು. ಅವರನ್ನು ಹತ್ಯೆ ಮಾಡಿದ ಬಳಿಕ ಮೃತದೇಹಗಳನ್ನು ಊರ ಹೊರಗೆ ಎಸೆಯಲಾಯಿತು ಎಂದು ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖೀಸಿ “ಸಿಎನ್‌ಎನ್’ ವರದಿ ಮಾಡಿದೆ.
ರೆಡ್‌ಕ್ರಾಸ್ ಕೂಡ ಮೃತದೇಹ ಯೋಧರದ್ದೇ ಎಂದು ಖಚಿತಪಡಿಸಿದೆ. ಆದರೆ ತಾಲಿಬಾನ್ ಸಂಘಟನೆ ವೀಡಿಯೋ ನಕಲಿ ಎಂದು ಹೇಳಿಕೊಂಡಿದೆ.
ನಗರಗಳಲ್ಲಿ ಕದನ ಬೇಡ: ನಗರಗಳ ಒಳಭಾಗದಲ್ಲಿ ಕದನ ಬೇಡ ಎಂದು ಉಗ್ರರು ಪ್ರತಿಪಾದಿಸಿದ್ದಾರೆ. ಅದಕ್ಕೆ ಪೂರಕವಾಗಿ ಟರ್ಕಿ ಸರಕಾರಕ್ಕೆ ಎಚ್ಚರಿಕೆ ನೀಡಿ, “ಅಫ್ಘಾನಿಸ್ಥಾನಕ್ಕೆ ನಿಮ್ಮ ಸೇನೆ ಕಳುಹಿಸಬೇಡಿ’ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಗುಡ್ಡ, ಪರ್ವತ, ಮರುಭೂಮಿಯಲ್ಲಿ ನಡೆಯು ತ್ತಿದ್ದ ಹೋರಾಟ ಮನೆಯ ಬಾಗಿಲಿಗೆ ಬಂದಿದೆ. ಇದೇ ವೇಳೆ, ಆ ದೇಶದಲ್ಲಿ ಉಗ್ರರ ಪ್ರಾಬಲ್ಯ ಹೆಚ್ಚುತ್ತಿದ್ದು ಯೋಧರು ಸಿಕ್ಕ ಸಿಕ್ಕಲ್ಲಿ ಪರಾರಿಯಾಗುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.