20 ವರ್ಷದ ನಂತರ ಬಗ್ರಾಮ್ ತೊರೆಯಲಿದೆ ಅಮೆರಿಕ ಸೇನೆ!
ಅಲ್‌ಖೈದಾ, ತಾಲಿಬಾನ್ ಉಗ್ರರನ್ನು ಮಟ್ಟ ಹಾಕಲು ಇದೇ ನೆಲೆಯಿಂದ ಸೆಣೆಸಿದ್ದ ಅಮೆರಿಕನ್ನರು
Team Udayavani, Jun 29, 2021, 9:03 PM IST
ಬಗ್ರಾಮ್ (ಅಫ್ಘಾನಿಸ್ತಾನ): 2001ರಲ್ಲಿ ಅಮೆರಿಕದ ಅತ್ಯುನ್ನತ ಕಟ್ಟಡಗಳಾದ ಪೆಂಟಗನ್ ಮತ್ತು ಡಬ್ಲೂಟಿಒಗಳು, ಅಲ್‌ಖೈದಾ ಉಗ್ರರ ಆತ್ಮಾಹುತಿ ದಾಳಿಯಿಂದ ಧರೆಗುರುಳಿದ್ದವು. ಅಲ್ಲಿಂದ ಅಫ್ಘಾನಿಸ್ತಾನದ ತಾಲಿಬಾನ್ ಉಗ್ರರ ಸ್ಥಿತಿ ಬಿಗಡಾಯಿಸಿತು. ಆ ದೇಶಾದ್ಯಂತ ಸೇನಾನೆಲೆಗಳನ್ನು ಸ್ಥಾಪಿಸಿದ ಅಮೆರಿಕ ಎರಡು ದಶಕಗಳ ಕಾಲ ದೇಶವನ್ನು ಹಿಡಿತಕ್ಕೆ ಪಡೆದಿತ್ತು. ಇದೀಗ ಅಮೆರಿಕ ಸೇನೆ ವಾಪಸ್ ಹೊರಟಿದೆ. ಜು.4ರಂದು ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ತೊರೆಯಲಿದೆ. ಈ ಪೈಕಿ ಅಮೆರಿಕ ಸೇನೆಗೆ ಆಶ್ರಯ ನೀಡಿದ ಪ್ರಮುಖ ನೆಲೆ ಬಗ್ರಾಮ್. ಇದು ಬಗ್ರಾಮ್ ಏರ್‌ಫೀಲ್ಡ್ ಎಂದೇ ಖ್ಯಾತವಾಗಿದೆ.
ಕಾಬೂಲ್‌ನ ಉತ್ತರ ಭಾಗದಲ್ಲಿ ಒಂದು ಗಂಟೆ ಪ್ರಯಾಣಿಸಿದರೆ, ಈ ಸಣ್ಣ ನಗರ ಸಿಗುತ್ತದೆ. ಬೇಲಿ ಮತ್ತು ಬೃಹತ್ ಗೋಡೆಗಳ ನಡುವೆ ಇದುವರೆಗೆ ಬಂಧಿಯಾಗಿತ್ತು! ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ವಿಮಾನಗಳನ್ನು ಇಲ್ಲಿ ಅಮೆರಿಕ ನೆಲೆಗೊಳಿಸಿತ್ತು.
ಇದನ್ನೂ ಓದಿ :Online ಬೆಟ್ಟಿಂಗ್ ನಿಷೇಧ ವಿಚಾರ : ಸರ್ಕಾರದ ವಿಳಂಬ ನೀತಿಗೆ ಹೈಕೋರ್ಟ್ ಅಸಮಧಾನ
ಇದೀಗ ಬಗ್ರಾಮನ್ನು ಬಿಟ್ಟು ಅಮೆರಿಕ ಯೋಧರು ಹೊರಹೊರಟಿದ್ದಾರೆ. ಮುಂದಿನ ದಿನಗಳಲ್ಲಿ ಭಾರೀ ಸೇನಾ ಕಾರ್ಯಾಚರಣೆಯ ಕೇಂದ್ರಬಿಂದುವಾಗಿ ಇದು ಉಳಿದುಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.