Agriculture: ಗ್ರಾಮೀಣ ಬದುಕಿನ ಚಾವಡಿ ಚರ್ಚೆ; ಕೇವಲ ನೆನಪು


Team Udayavani, Jul 5, 2024, 7:28 AM IST

Agri

ಮಳೆಗಾಲ ಆರಂಭವಾಯಿತೆಂದರೆ ಗ್ರಾಮೀ ಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ. ಭತ್ತದ ಕೃಷಿ ಇನ್ನೂ ಬತ್ತದ ದಿನಗಳು. ಗದ್ದೆಯ ಸುತ್ತ ಮನೆಯ ಮಂದಿ. ಬೀಜದ ಬಿತ್ತನೆ, ಉಳುಮೆ, ನಾಟಿ ಹೀಗೆ ಭತ್ತದ ಕೃಷಿ ಕೆಲಸ. ಯಂತ್ರಗಳಿನ್ನೂ ಬಾರದ ದಿನಗಳಲ್ಲಿ ಉಳುಮೆಗೆ ಎತ್ತು, ಕೋಣಗಳ ಬಳಕೆಯೇ ಜಾಸ್ತಿ. ಅಂತೂ ಮಳೆಗಾಲ ಎಂದರೆ ಕೃಷಿಕರಿಗೆ ವಿರಾಮವಿಲ್ಲದ ಕಾಲ. ಹಿಂದೆ ಗ್ರಾಮೀಣ ಬದುಕು ಎಂದರೆ ಕೃಷಿ ಆಧಾರಿತ ಬದುಕು. ಅಂದಿನ ಕೃಷಿಕುಟುಂಬಗಳೂ ಅವಿಭಕ್ತ. ಹಾಗಾಗಿ ಮನೆ ತುಂಬಾ ಮಂದಿ. ಸೂರ್ಯ ಮುಳುಗುವ ತನಕ ಕೃಷಿಕಾಯಕ. ಸಂಜೆ ಸ್ವಲ್ಪ ವಿರಾಮ. ಕೃಷಿ ಕೆಲಸದ ನಡುವೆ ಸ್ವಲ್ಪ ಬಿಡುವು.

ದೂರದರ್ಶನ, ಮೊಬೈಲ್‌ಗ‌ಳಿಲ್ಲದ ಕಾಲ. ಮಾತೇ ಮಾಣಿಕ್ಯ. ಹಾಗಾಗಿ ಸುತ್ತ ಮುತ್ತಲಿನ ಮನೆಯವರು ಒಂದೆಡೆ ಕುಳಿತು ಹರಟೆ ಹೊಡೆಯುವ ಕಾಲ. ಮನೆಯ ಮುಂದಿರುವ ವಿಶಾಲವಾದ ಚಾವಡಿಯೇ ಮಾತಿನ ಮಂಟಪಕ್ಕೆ ವೇದಿಕೆ. ಚಾವಡಿಯ ಚರ್ಚೆಯಲ್ಲಿ ಕೆಲಸದ ಆಯಾಸವನ್ನು ಕಳೆಯಲು ಮಾತಿನ ನಡುವೆ ಒಂದಿಷ್ಟು ಹಾಸ್ಯ. ನಡು ನಡುವೆ ಒಗಟು, ಗಾದೆಗಳ ವರಸೆ. ಮುದ್ದಣ ಹೇಳುವಂತೆ “ಕರ್ಮಣಿ ಸರದೊಳ್‌ ಚೆಂಬವಳಮಂ ಕೋದಂತೆ’. ಆಗಾಗ ಪುರಾಣ ಪ್ರವಚನ. ಅಪರೂಪಕ್ಕೊಮ್ಮೆ ಕರಾವಳಿ ಹಾಗೂ ಮಲೆನಾಡ ಭಾಗದಲ್ಲಿ ತಾಳಮದ್ದಲೆ. ಇವುಗಳೆಲ್ಲ ಮನೋರಂಜನೆಯ ಒಂದು ಸಾಧನ. ಈ ಮೂಲಕ ಮನಸ್ಸಿಗೆ ಮುದ. ಮುಕ್ತವಾಗಿ ಬೆರೆತು ಆಹ್ಲಾದಗೊಳ್ಳುವ ಸಮಯ. ಇವುಗಳಿಗಿಂತ ಮುಖ್ಯವಾದುದು ಇಲ್ಲಿ ನಡೆಯುವ ಕಾಯಕದ ಕುರಿತ ವಿಶಿಷ್ಟ ಚರ್ಚೆಗಳು. ಈ ಚರ್ಚೆಯಲ್ಲಿ ಭಾಗವಹಿಸುವವರೂ ಸುತ್ತಲಿನ ಮನೆಗಳ ಕೃಷಿಕರು.}

ಕಾಯಕಜೀವಿಗಳು. ಬಹಳ ಓದಿದವರಲ್ಲ. ಪದವಿಗಾಗಿ ಕಾಲೇಜು ಮೆಟ್ಟಿಲೇ ರಿದವರೂ ಅಲ್ಲ. ಕೃಷಿಯೇ ಕಾರ್ಯಕ್ಷೇತ್ರ. ಅದೇ ಕಲಿಕೆಯ ತಾಣ. ಪ್ರಯೋಗಶಾಲೆ. ಅದರೊಂದಿಗೆ ಸುತ್ತಲು ಹಬ್ಬಿರುವ ಕಾಡುಗಳು. ಕಾಡಿನ ಪ್ರಾಣಿ ಹಾಗೂ ಪಕ್ಷಿಗಳು. ಹಿರಿಯರಿಂದ ಹರಿದು ಬಂದ ಅನುಭವವೇ ಅವರ ಪ್ರಧಾನ ಜ್ಞಾನಸಂಪತ್ತು. ಹಿರಿಯರ ಜ್ಞಾನದ ಆಧಾರದ ಮೇಲೆ ನೂತನ ಪ್ರಯೋಗ. ಹೊಸ ಆವಿಷ್ಕಾರ. ಈ ಮೂಲಕ ದೊರೆತ ಅನುಭವಗಳು. ಹೀಗೆ ಸೇರಿದಾಗ ಈ ಅನುಭವಗಳ ಮಂಥನ ನಡೆಯುತ್ತಿತ್ತು. ಕೃಷಿಗೆ ಸಂಬಂಧಿಸಿದಂತೆ ಅವರವರ ಅನುಭವಗಳ ವಿನಿಮಯ ನಡೆಯುತ್ತಿತ್ತು. ಬೆಳೆ ಹಾನಿ, ಅಧಿಕ ಇಳುವರಿ, ಕಡಿಮೆ ಇಳುವರಿ, ಕೃಷಿಗೆ ಹಾನಿಕಾರಕವಾದ ರೋಗಗಳು, ಕ್ರಿಮಿಕೀಟಗಳ ಬಾಧೆ, ಅದಕ್ಕೆ ಪರಿಹಾರ ಹೀಗೆ ಹಲವು ವಿಚಾರಗಳ ಸುತ್ತ ಚರ್ಚೆ ಸಾಗುತ್ತಿತ್ತು. ಹೊಸ ಬೆಳೆಯ ಮೂಲಕ ಅಧಿಕ ಲಾಭ ಗಳಿಸಿದ ರೈತರ ಕುರಿತೂ ವಿಷಯ ಪ್ರಸ್ತಾವವಾಗುತ್ತಿತ್ತು.

ಕೃಷಿಯಲ್ಲಿ ಅಧಿಕ ಲಾಭ ತರಲು ಕೈಗೊಂಡ ಕ್ರಮಗಳ ಕುರಿತೂ ಕೆಲವರು ತಮ್ಮ ಅನುಭವಗಳನ್ನು ಹಂಚಿ ಕೊಳ್ಳುತ್ತಿದ್ದರು. ಕೃಷಿಯನ್ನು ಬಾಧಿಸುವ ವಿವಿಧ ರೋಗಗಳ ನಿಯಂತ್ರಣಕ್ಕೆ ತಮ್ಮ ಅನುಭವದ ಆಧಾರದಲ್ಲಿ ಕೈಗೊಂಡ ಕ್ರಮಗಳು ಮತ್ತು ಅದರ ಪರಿಣಾಮ. ಹೀಗೆ ಅನುಷ್ಠಾನ ಯೋಗ್ಯ ಅನು ಭವಾಧಾರಿತ ಜ್ಞಾನ. ಈ ಅನುಭವಗಳು ಯಾವುದೇ ಪುಸ್ತಕಗಳಲ್ಲಿ ಸಿಗದು. ಮಸ್ತಕವೇ ಈ ಅನುಭವಗಳ ಭಂಡಾರ. ಇಲ್ಲಿನ ಪ್ರಯೋಗ ಹಾಗೂ ಫ‌ಲಿತಾಂಶಗಳೂ ಕೃಷಿ ಅಧಾರಿತ ದುಡಿಮೆಯನ್ನು ಆಧರಿಸಿ ಬೆಳೆದು ಬಂದವುಗಳು. ಕೇವಲ ಓದಿನಿಂದ ಬಂದ ಯಾರದ್ದೋ ಅನುಭವಗಳು ಇವುಗಳಲ್ಲ. ಈ ಅನುಭವಗಳ ಹಿಂದೆ ವ್ಯಾಪಕವಾದ ಪ್ರಯೋಗಶೀಲತೆ ಇದೆ. ಕೃಷಿ ಭೂಮಿಯಲ್ಲಿ ಕೃಷಿಯೊಂದಿಗೆ ಹೋರಾಟ ನಡೆಸಿದ ಕಥನಗಳಿವೆ. ಸುತ್ತಲಿನ ಕಾಡು ಮತ್ತು ಪ್ರಾಣಿ, ಪಕ್ಷಿಗಳ ಒಡನಾಟದಲ್ಲಿ ಕಂಡುಕೊಂಡ ಅನುಭವಗಳಿವೆ. ಅವುಗಳ ಕುರಿತು ನೂರಾರು ನಂಬಿಕೆಗಳೂ ಇವೆ.

ಇಂದು ಗ್ರಾಮೀಣ ಬದುಕೂ ಹೊಸತನಕ್ಕೆ ತೆರೆದುಕೊಂಡಿದೆ. ಗ್ರಾಮೀಣ ಬದುಕಿನ ಮೇಲೂ ನಗರ ಸಂಸ್ಕೃತಿಯು ತನ್ನ ಪ್ರಭಾವ ಬೀರಿದೆ. ಅಭಿವೃದ್ಧಿ ಎಂಬ ಪದವೂ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಿದೆ. ದೂರದರ್ಶನ ಹಾಗೂ ಮೊಬೈಲ್‌ ಅತ್ಯಗತ್ಯ ಉಪಕರಣಗಳಾಗಿವೆ. ಅವುಗಳ ಬಳಕೆ ಅಗತ್ಯಕ್ಕಿಂತ ಅಧಿಕವಾಗುತ್ತಿದೆ. ಯಂತ್ರಗಳ ಆಗಮನದಿಂದ ಅಭಿವೃದ್ಧಿಯಾಗಿದೆ. ಆದರೆ ಮನುಷ್ಯರ ನಡುವಿನ ಮಾತಿನ ಸಂಭ್ರಮ ಹಾಗೂ ಸಂಬಂಧಗಳು ಯಾಂತ್ರಿಕವಾಗಿವೆ. ಭಾವನಾತ್ಮಕ ಸಂಬಂಧಗಳಿಗಿತ ವ್ಯಾವಹಾರಿಕ ಸಂಬಂಧಗಳಿಗೆ ಪ್ರಾಶಸ್ತ್ಯ  ಬಂದಿದೆ. ಮನೆಯಲ್ಲಿರುವ ಮಂದಿಗಳ ನಡುವೆಯೇ ಮಾತುಕತೆಗಳು ವಿರಳವಾಗುತ್ತಿರುವಾಗ ಅಕ್ಕಪಕ್ಕದ ಮನೆಯವರು ಮಾತಿಗೆಲ್ಲಿ ಸಿಗುತ್ತಾರೆ? ಹಾಗಾಗಿ ಚಾವಡಿ ಚರ್ಚೆ ಇಂದು ಕೇವಲ ನೆನಪು.

ಪ್ರಕೃತಿ ಅಥವಾ ಗ್ರಾಮೀಣ ಬದುಕಿನಿಂದ ದೂರವಾದಂತೆ ಪ್ರಕೃತಿಯಿಂದ ಮನುಷ್ಯ ಕಲಿಯುವ ಪಾಠವೂ ಕಡಿಮೆಯಾಗುತ್ತಿದೆ. ಎಷ್ಟೋ ನಂಬಿಕೆಗಳು, ಆಚರಣೆಗಳು ನಶಿಸಿ ಹೋಗುತ್ತಿವೆ. ಕೃಷಿ, ಪ್ರಕೃತಿಯೊಂದಿಗಿನ ಒಡನಾಟದಲ್ಲಿ ಹುಟ್ಟಿಕೊಂಡ ಅನೇಕ ಅನುಭವ ಅಧಾರಿತ ವಿಚಾರಗಳು ಇಂದು ಅರ್ಥ ಕಳೆದುಕೊಳ್ಳುತ್ತಿವೆ. ಕೆಲವೇ ಹಿರಿಯರು ಹಳ್ಳಿಗಳಲ್ಲಿ ಕೃಷಿಯಲ್ಲಿ ತೊಡಗಿಸಿಕೊಂಡು ಕಷ್ಟಪಟ್ಟು ಅದನ್ನು ಉಳಿಸುವ ಕಾಯಕದಲ್ಲಿ¨ªಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಚಾವಡಿ ಚರ್ಚೆಯನ್ನು ನಿರೀಕ್ಷಿಸುವುದೂ ಕಷ್ಟ. ಚಾವಡಿ ಚರ್ಚೆಯಲ್ಲಿ ಭಾಗವಹಿಸಿದ ನಮ್ಮ ನಡುವೆ ಬದುಕಿರುವ ಹಿರಿಯರೊಂದಿಗೆ ಚರ್ಚಿಸಿ ಅವರ ಅನು ಭವಗಳನ್ನು ಸಂಗ್ರಹಿಸುವ ಮತ್ತು ವಿಜ್ಞಾನದ ಹಿನ್ನೆಲೆಯಲ್ಲಿ ಅವುಗಳ ಅಧ್ಯಯನ ಇಂದು ಹೆಚ್ಚು ಪ್ರಸ್ತುತ.

– ಡಾ. ಶ್ರೀಕಾಂತ್‌, ಸಿದ್ದಾಪುರ

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.