ಸ್ವಾತಂತ್ರ್ಯಕ್ಕೆ ದಿನಗಣನೆ : ಅಮೃತ್ ಸರ್ ಬಳಿ ಸ್ಫೋಟಕಗಳನ್ನಳವಡಿಸಿದ ಟಿಫಿನ್ ಬಾಕ್ಸ್ ಪತ್ತೆ
Team Udayavani, Aug 9, 2021, 5:33 PM IST
ನವ ದೆಹಲಿ : ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲ ದಿನಗಳು ಇರುವಾಗಲೇ ಪಂಜಾಬ್ ನ ಅಮೃತ್ ಸರ್ ಬಳಿಯ ಹಳ್ಳಿಯೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಅಳವಡಿಸಲಾದ ಟಿಫಿನ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ, ಈ ಟಿಫಿನ್ ಬಾಕ್ಸ್ ಗಳನ್ನು ಡ್ರೋನ್ ಮೂಲಕ ಇರಿಸಲಾಗಿದೆ. ಟಿಫಿನ್ ಬಾಕ್ಸ್ ಹೊಂದಿರುವ ಬ್ಯಾಗಿನಿಂದ ಇತರ ಕೆಲವು ಸ್ಫೋಟಕಗಳು ಕೂಡ ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾರ್ಕಳ : ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಹೊರಕ್ಕೆ ಕಳುಹಿಸಿದ ಇಂಧನ ಸಚಿವ
“ನಿನ್ನೆ (ಭಾನುವಾರ) ಅಮೃತಸರ ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ಪತ್ತೆ ಕಾರ್ಯಾಚರಣೆಯನ್ನು ಮಾಡಿದ್ದೇವೆ. ಕೆಲವು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಕಾರ್ಟ್ರಿಡ್ಜ್ ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ.
ಎನ್ ಎಸ್ ಜಿ ತಂಡ ಈ ಟಿಫಿನ್ ಬಾಕ್ಸ್ ಗಳನ್ನು ಪರಿಶೀಲಿಸಿದ್ದು, ಸ್ಫೋಟಕ ಸಾಧನಗಳನ್ನು ಪತ್ತೆ ಮಾಡಲಾಗಿದ್ದು, 2-3 ಕಿ. ಜಿ ಆಗುವಷ್ಟು ಆರ್ ಡಿ ಎಕ್ಸ್ ಸ್ಫೋಟಕ ಗಳನ್ನು ಹೊಂದಿದ್ದವರು ಎಂದು ವರದಿ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ಏತನ್ಮಧ್ಯೆ, ಕೆಲವು ತಿಂಗಳ ಹಿಂದೆ, ಪಂಜಾಬ್ ನ ಗುರುದಾಸಪುರ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಮೂಲದ ಡ್ರೋನ್ ನಿಂದ ಇರಿಸಲಾಗಿದ್ದ 11 ಹ್ಯಾಂಡ್ ಗ್ರೆನೇಡ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಪಾಕಿಸ್ತಾನದಿಂದ ಡ್ರೋನ್ ಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಇರಿಸಿದ ಮೊದಲ ಘಟನೆ 2019 ರ ಸೆಪ್ಟೆಂಬರ್ ನಲ್ಲಿ ಪಂಜಾಬಿನಲ್ಲಿ ಬೆಳಕಿಗೆ ಬಂದಿತ್ತು. ಪೋಲಿಸ್ ಎಕೆ -47 ರೈಫಲ್ ಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್ ಗಳು, ನಕಲಿ ಕರೆನ್ಸಿ ಮತ್ತು ಇತರ ವಸ್ತುಗಳನ್ನು ತರ್ನ್ ತರನ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿತ್ತು.
ಇದನ್ನೂ ಓದಿ : ಕಾರ್ಕಳ : ಸಭೆಗೆ ತಡವಾಗಿ ಬಂದ ಅಧಿಕಾರಿಯನ್ನು ಹೊರಕ್ಕೆ ಕಳುಹಿಸಿದ ಇಂಧನ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.