ಕೋವಿಡ್‌ನಿಂದ ರದ್ದಾದ ವಿಮಾನದ ಟಿಕೆಟ್ ರೀಫಂಡ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ
Team Udayavani, Oct 1, 2020, 6:34 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಹೇರಿದಾಗ ರದ್ದಾದ ವಿಮಾನದ ಟಿಕೆಟ್‌ಗಳ ಹಣವನ್ನು ಯಾವುದೇ ಕ್ಯಾನ್ಸಲ್ ಶುಲ್ಕ ಮುರಿದುಕೊಳ್ಳದೆ ವಾಪಸ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ಈ ತೀರ್ಪನ್ನು ನೀಡಿದೆ. ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಶಿಫಾರಸನ್ನು ಪರಿಗಣಿಸಲಾಗಿದೆ.
ಟಿಕೆಟ್ ಹಣ ಮರುಪಾವತಿಸಲು ಹಾಗೂ ಕ್ರೆಡಿಟ್ ಶೆಲ್ ಯೋಜನೆಗೆ (ಈಗಿನ ಟಿಕೆಟ್ ಹಣವನ್ನು ಮುಂದೆ ಪ್ರಯಾಣಕ್ಕೆ ಬಳಸಬಹುದು) ಮುಂದಿನ ವರ್ಷದ ಮಾರ್ಚ್ 31ರ ತನಕ ಅವಕಾಶ ಇದೆ. ಈ ತೀರ್ಪು ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಟಿಕೆಟ್‌ಗೆ ಅನ್ವಯವಾಗುತ್ತದೆ.
ಟ್ರಾವೆಲ್ ಏಜೆಂಟ್‌ಗಳ ಮೂಲಕ ಹಣ ಪಡೆಯುವುದು ಹೇಗೆ?
ಯಾರು ಟ್ರಾವೆಲ್ ಏಜೆಂಟ್‌ಗಳ ಮೂಲಕ ಟಿಕೆಟ್ ಖರೀದಿ ಮಾಡಿರುತ್ತಾರೋ ಅಂಥವರು ಆ ಏಜೆಂಟ್ ಖಾತೆಗೆ ಹಣ ಜಮೆ ಆದ ಮೇಲೆ ವಾಪಸ್ ಪಡೆಯಬಹುದು ಎಂದು ಕೋರ್ಟ್ ಹೇಳಿದೆ. ಮುಂದಿನ ವರ್ಷದ ಮಾರ್ಚ್ 31ರ ಒಳಗೆ ಪ್ರಯಾಣಿಕರಿಗೆ ಹಣವನ್ನು ಹಿಂತಿರುಗಿಸಬೇಕು ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
Supreme Court accepts DGCA’s recommendations on airfare refund, travel agents to get refund only for tickets booked by them [Read full story] #Airfare #SupremeCourt @DGCAIndia #Airlines @goairlinesindia @IndiGo6E https://t.co/vyYT5EYSEB
— Bar & Bench (@barandbench) October 1, 2020
ಲಾಕ್ ಡೌನ್ ಅವಧಿಯಲ್ಲಿ ಪ್ರಯಾಣ ಮಾಡುವುದಕ್ಕೆ ಅದೇ ಲಾಕ್‌ಡೌನ್ ಸಮಯದಲ್ಲಿ ಟಿಕೆಟ್ ಬುಕ್ ಮಾಡಿದ್ದಲ್ಲಿ ತತ್‌ಕ್ಷಣವೇ ಹಿಂತಿರುಗಿಸಬೇಕು. ಏರ್‌ಲೈನ್ಸ್‌ಗಳು ಅಂಥ ಟಿಕೆಟ್‌ಗಳನ್ನು ಬುಕ್ ಮಾಡುವಂತೆಯೇ ಇರಲಿಲ್ಲ, ಬುಕಿಂಗ್ ರದ್ದುಪಡಿಸಿದ್ದಕ್ಕಾಗಿ ವಿಮಾನಯಾನ ಸಂಸ್ಥೆಗಳು ಆದೇಶದ 15 ದಿನಗಳಲ್ಲಿ ಮರುಪಾವತಿ ನೀಡಬೇಕು ಎಂದು ಕೋರ್ಟ್ ಹೇಳಿದೆ.
ಹಣಕಾಸಿನ ತೊಂದರೆಯಿಂದಾಗಿ ಯಾವುದೇ ವಿಮಾನಯಾನ ಸಂಸ್ಥೆಗಳು ಇದನ್ನು ಪಾಲಿಸಲು ಸಾಧ್ಯವಾಗದಿದ್ದರೆ, ಪ್ರಯಾಣಿಕರಿಂದ ನೇರವಾಗಿ ಬುಕಿಂಗ್ ಮಾಡುವಾಗ ಪ್ರಯಾಣಿಕರ ಹೆಸರಿನಲ್ಲಿ ಅವರು ಸಂಗ್ರಹಿಸಿದ ಶುಲ್ಕದ ಮೊತ್ತಕ್ಕೆ ಸಮನಾದ ಕ್ರೆಡಿಟ್ ಶೆಲ್ ಅನ್ನು ಒದಗಿಸಬೇಕು. ಅಥವಾ 2021ರ ಮಾರ್ಚ್ 31ರಂದು ಅಥವಾ ಅದಕ್ಕೂ ಮೊದಲು ಅದನ್ನು ಬಳಸಲು ನೆರವಾಗಬೇಕು ಎಂದು ಹೇಳಿದೆ.
ಅಂತಹ ಕ್ರೆಡಿಟ್ ಶೆಲ್ ಅನ್ನು 2021ರ ಮಾರ್ಚ್ 31ರ ವರೆಗೆ ತನ್ನ ಆಯ್ಕೆಯ ಯಾವುದೇ ಮಾರ್ಗದಲ್ಲಿ ಬಳಸಿಕೊಳ್ಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕ್ರೆಡಿಟ್ ಶೆಲ್ ಅನ್ನು ಟಿಕೆಟ್ ಖರೀದಿಸಿದ ಸಂಬಂಧಪಟ್ಟ ಏಜೆಂಟರು ಮೂರನೇ ವ್ಯಕ್ತಿಯ ಪ್ರಯಾಣಕ್ಕಾಗಿ ಬಳಸಿಕೊಳ್ಳಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.