ಲಸಿಕೆ ಸ್ಲಾಟ್ ಪಡೆಯಲು ಅಲರ್ಟ್ ಮೆಸೇಜ್ ಪಡೆಯಿರಿ
Team Udayavani, May 14, 2021, 6:55 AM IST
ಹೊಸದಿಲ್ಲಿ: ದೇಶದಲ್ಲಿ ಲಸಿಕೆಗಾಗಿ ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿಗೆ ಇಂಟರ್‌ನೆಟ್ ಲಭ್ಯವಿಲ್ಲದ ಸ್ಥಳದಲ್ಲಿ ಅಡಚಣೆ ಉಂಟಾಗುತ್ತಿದೆ. ಅದಕ್ಕಾಗಿ ಚೆನ್ನೈಯಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ವೃತ್ತಿಯಲ್ಲಿರುವ ಬ್ರೆಟಿ ಥಾಮಸ್ (35) ಎಂಬುವರು ಲಸಿಕೆ ಹಾಕಿಸಲು ಸ್ಲಾಟ್‌ಗಳು ಯಾವಾಗ ಲಭ್ಯವಾಗುತ್ತವೆ ಎಂಬ ಬಗ್ಗೆ ಹೊಸ ತಂತ್ರಾಂಶ ಕಂಡುಹಿಡಿದಿದ್ದಾರೆ.
ಅದಕ್ಕೆ ಟೆಲಿಗ್ರಾಂ ಮೂಲಕ ಸದಸ್ಯತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅದರಲ್ಲಿ ಸುಮಾರು 4 ಲಕ್ಷ ಮಂದಿ ಸದಸ್ಯರು ಈಗ ಇದ್ದಾರೆ. “ಹೆಚ್ಚಿನ ನಗರ ಮತ್ತು ಪಟ್ಟಣಗಳನ್ನು ಕೇಂದ್ರೀಕರಿಸಿ ಈ ವ್ಯವಸ್ಥೆ ರೂಪಿಸಿದ್ದೇನೆ. ಕೋವಿನ್ ವೆಬ್‌ಸೈಟ್‌ನಲ್ಲಿ ಲಸಿಕೆಯ ಸ್ಲಾಟ್ ಮುಕ್ತವಾಗುತ್ತಿ ದ್ದಂತೆ ಸದಸ್ಯರಿಗೆ ಅಲರ್ಟ್ ಮೆಸೇಜ್ ರವಾನೆಯಾಗುತ್ತದೆ. ಹೀಗಾಗಿ ಇಂಟರ್‌ನೆಟ್ ವ್ಯವಸ್ಥೆ ಇರುವವರು ಅಂಥವರಿಗೆ ನೆರವು ನೀಡಬೇಕು’ ಎಂದು “ಎಎಫ್ಪಿ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆದರೆ ದೇಶದ ಇತರ ಸ್ಥಳಗಳಲ್ಲಿ ಇಂಟರ್‌ನೆಟ್ ಲಭ್ಯವಿಲ್ಲದ, ಸ್ಮಾರ್ಟ್‌ಫೋನ್ ಬಳಕೆ ಅರಿವು ಇಲ್ಲದವರಿಗೆ ನೋಂದಣಿಗೆ ಅಡ್ಡಿಯಾಗುತ್ತಿರುವುದರ ಬಗ್ಗೆ ಸುದ್ದಿಸಂಸ್ಥೆ ವರದಿ ಮಾಡಿದೆ. ಕೇಂದ್ರ ಸರಕಾರ ಮೇ 1ರಿಂದ 18-44 ವರ್ಷ ವಯೋಮಿತಿ ಯವರಿಗೂ ಲಸಿಕೆ ನೀಡುವ ಬಗ್ಗೆ ಘೋಷಣೆ ಮಾಡಿತು.
ಆದರೆ ವಿವಿಧ ರಾಜ್ಯಗಳಲ್ಲಿ ದಾಸ್ತಾನು ಕೊರತೆಯೂ ಎದುರಾಯಿತು. ಹೀಗಾಗಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ 18-44 ವರ್ಷ ವಯೋಮಿತಿ ಯವರಿಗೆ ಲಸಿಕೆ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.
ಈವರೆಗೆ ದೇಶದಲ್ಲಿ, ಶೇ. 3ರಷ್ಟು ಜನರಿಗೆ ಲಸಿಕೆ ಪೂರ್ಣಪ್ರಮಾಣದಲ್ಲಿ ಸಿಕ್ಕಿದೆ. ಇದಕ್ಕೆ ಹೆಚ್ಚುವರಿಯಾಗಿ ಶೇ. 10.6ರಷ್ಟು ಜನರು ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.