Ali Trophy: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ: ಮುಂಬಯಿಗೆ ಪ್ರಶಸ್ತಿ ಸಂಭ್ರಮ
ಮಧ್ಯಪ್ರದೇಶ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿದ ಮುಂಬಯಿ
Team Udayavani, Dec 16, 2024, 4:30 AM IST
ಬೆಂಗಳೂರು: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಮುಂಬಯಿ ತಂಡವು ರವಿವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗಾಗಿ ನಡೆದ ಕ್ರಿಕೆಟ್ ಕೂಟದ ಫೈನಲ್‌ನಲ್ಲಿ ಮಧ್ಯಪ್ರದೇಶ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಮುಂಬಯಿ ತಂಡವು ಈ ಪ್ರಶಸ್ತಿಯನ್ನು ಎರಡನೇ ಬಾರಿ ಜಯಿಸಿದೆ. ಈ ಹಿಂದೆ 2022ರಲ್ಲಿ ಈ ಪ್ರಶಸ್ತಿ ಜಯಿಸಿತ್ತು.
ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮಧ್ಯ ಪ್ರದೇಶ ತಂಡವು ರಜತ್ ಪಟಿದಾರ್ ಅವರ ಆಕರ್ಷಕ ಆಟದಿಂದಾಗಿ 8 ವಿಕೆಟಿಗೆ 174 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸಿತು. ಇದು ಈ ಕೂಟದಲ್ಲಿ ಪಟಿದಾರ್ ಅವರ ಐದನೇ ಅರ್ಧ ಶತಕವಾಗಿದೆ. 40 ಎಸೆತ ಎದುರಿಸಿದ ಅವರು 6 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 81 ರನ್ ಹೊಡೆ ದರು. ಇದಕ್ಕುತ್ತರವಾಗಿ ಭಾರತ ತಂಡ ದಲ್ಲಿ ಆಡಿದ ಅನುಭವವಿರುವ ಆಟ ಗಾರರನ್ನು ಒಳಗೊಂಡ ಮುಂಬೈ ತಂಡವು 17.5 ಓವರ್‌ಗಳಲ್ಲಿ ಐದು ವಿಕೆಟಿಗೆ 180 ರನ್ ಪೇರಿಸಿ ವಿಜಯಿಯಾಯಿತು.
ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್ ಅವರ ಸಮಯೋಚಿತ ಆಟದಿಂದ ಮುಂಬಯಿ ಸುಲಭವಾಗಿ ಜಯ ಸಾಧಿಸು ವಂತಾಯಿತು. ರಹಾನೆ 30 ಎಸೆತಗಳಿಂದ 37 ಹಾಗೂ ಸೂರ್ಯಕುಮಾರ್ ಯಾದವ್ 35 ಎಸೆತಗಳಿಂದ 48 ರನ್ ಹೊಡೆದರು. 4 ಬೌಂಡರಿ ಮತ್ತು 3 ಸಿಕ್ಸರ್ ಬಾರಿಸಿದರು. ಅಂತಿಮ ಹಂತದಲ್ಲಿ ಸುರ್ಯಾನ್ಸ್ ಶೆಡೆj 15 ಎಸೆತಗಳಿಂದ 36 ರನ್ ಗಳಿಸಿ ಅಜೇಯರಾಗಿ ಉಳಿದರು. ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಬಾರಿಸಿದರು.
ಸಂಕ್ಷಿಪ್ತ ಸ್ಕೋರು: ಮಧ್ಯ ಪ್ರದೇಶ 8 ವಿಕೆಟಿಗೆ 174 (ರಜತ್ ಪಟಿದಾರ್ 81, ಸುಭಾಂಶು ಸೇನಾಪತಿ 23, ಶಾದೂìಲ್ ಠಾಕೂರ್ 41ಕ್ಕೆ 2, ರಾಯ್‌ಸ್ಟನ್ ಡಯಾಸ್ 32ಕ್ಕೆ 2), ಮುಂಬಯಿ 17.5 ಓವರ್‌ಗಳಲ್ಲಿ 5 ವಿಕೆಟಿಗೆ 180 (ಅಜಿಂಕ್ಯ ರಹಾನೆ 37, ಸೂರ್ಯಕುಮಾರ್ ಯಾದವ್ 48, ಸುರ್ಯಾನ್ಸ್ ಶೆಡೆj 36 ಔಟಾಗದೆ, ತ್ರಿಪುರೇಶ್ ಸಿಂಗ್ 34ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್ ಆಫ್ ಸ್ಪಿನ್ನರ್ ಎಂಟ್ರಿ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್ ಫೈನಲ್‌ಗೆ
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.