Alvas Virasat: ಶಿಕ್ಷಣ ಕಾಶಿಯಲ್ಲಿ ಒಸ್ಮಾನ್‌ ಮೀರ್‌ ಬಳಗದ ಗಾನ ವೈಭವ

ಗಝಲ್‌, ಹಿಂದಿ, ಗುಜರಾತಿ ಹಾಡುಗಳ ಮೂಲಕ ಮೋಡಿ, ಎರಡು ತಾಸು ಕಾಲ ಪ್ರೇಕ್ಷಕರ ಸೆಳೆಯುವಲ್ಲಿ ಯಶಸ್ವಿ

Team Udayavani, Dec 13, 2024, 3:57 AM IST

Alvas-virast

ಮೂಡುಬಿದಿರೆ: ಪಡು ವಣದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಶಿಕ್ಷಣಕಾಶಿ ಮೂಡುಬಿದಿರೆಯಲ್ಲಿ ಗಾನ ಸುಧೆ ಆನಾವರಣಗೊಂಡಿತು. ಸುಮಾರು ಎರಡು ಗಂಟೆ ಕಾಲ ನಡೆದ ಸಂಗೀತ ಲಹರಿ ಪ್ರೇಕ್ಷಕರ ಕರತಾಡನಕ್ಕೆ ಕಾರಣವಾಯಿತು.

ಶಿಕ್ಷಣಕಾಶಿ ಮೂಡುಬಿದಿರೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಬಯಲು ರಂಗಮಂದಿರದಲ್ಲಿ ಗುರುವಾರ ಸಂಜೆ 6 ಗಂಟೆಗೆ ಗುಜರಾತ್‌ನ ಒಸ್ಮಾನ್‌ ಮೀರ್‌ ಮತ್ತು ಬಳಗದಿಂದ ನಡೆದ “ಸಂಗೀತ ಲಹರಿ’ ಕಾರ್ಯಕ್ರಮ ಎರಡು ತಾಸು ಕಾಲ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಗಝಲ್‌, ಹಿಂದಿ, ಗುಜರಾತಿ ಹಾಡುಗಳ ಮೂಲಕ ಮೋಡಿ ಮಾಡುವ ಒಸ್ಮಾನ್‌ ಮೀರ್‌ ಮತ್ತು ಅವರ ತಂಡ ವೇದಿಕೆ ಹಂಚಿಕೊಳ್ಳುತಿದ್ದಂತೆಯೇ ಚಪ್ಪಾಳೆ ಮೂಲಕ ಸಂಗೀತಾಸಕ್ತರು ಸ್ವಾಗತಿಸಿದರು.

ಆರಂಭದಲ್ಲಿ “ತುಜ್‌ ಸೇ ಮೇರಾ ಜೀನಾ ಮರ್ನಾ… ಮೈ ಮುಸಾಫಿರ್‌ ತು ಮುಸಾಫಿರ್‌’ ಎಂದು ಅವರ ಪುತ್ರ ಆಮಿರ್‌ ಮೀರ್‌ ವೈರಲ್‌ ಆದ ತಮ್ಮ ಆಲ್ಬಂನ ಗಾನಸುಧೆ ಹರಿಸಿದರು. ತೇರೆ ಬಿನಾ ಸೋನ ಹೀ ಸಕ್ತೇ ಹಾಡು ಹಾಡಿಗೆ ನೆರೆದಿದ್ದ ಪ್ರೇಕ್ಷಕರು ಕರತಾಡನದ ಸ್ವಾಗತ ನೀಡಿದರು. ಆಮಿರ್‌ ಮೀರ್‌ ಅವರು ಸಂತ್‌ … ಸಜ್‌ ನಾ ತೇರೆ ಬಿನಾ… ಎಂದು ಹಾಡಿದಾಗ ತಂದೆ ಒಸ್ಮಾನ್‌ ಗಾಯನದಲ್ಲಿ ಜತೆಯಾದರು. ಪಾರತಿ ವ್ಯಾಸಿ ಸಾಥ್‌ ನೀಡಿದರು.

ಮೌತ್‌ ನಾ ಆಯಿ.. ಲಂಬೀ ಜುದಾಯಿ, ಸಜ್‌ ದಾ ತೆರಾ ಸಜ್‌ ದಾ ಸಾಲಿನ “ಮೈ ನೇಮ್‌ ಈಸ್‌ ಖಾನ್‌ ಸಿನೆಮಾದ ಹಾಡು, ತೇರೇ ಸಖೀ, ತೇರೆ ನಾಮ್‌ ಸೇ ಜೀಲು, ಇಷ್ಕ್‌  ಜುನೂನ್‌ ಜಬ್‌ ಹಾತ್‌ ಸೇ ಬಡ್‌ ಜಾಯೇ ಶಾಯರಿ ಹಾಡಿದಾಗ ಪ್ರೇಕ್ಷಕರೆಲ್ಲ ವ್ಹಾಹ್‌ .. ವ್ಹಾಹ್‌ ಎಂದರು. ಬಳಿಕ ಒಸ್ಮಾನ್‌ ತಂಡದ ಇಷ್‌ ಸಚ್ಚಾ ಹೋ ತೋ ಖುದಾ ಮಿಲ್‌ ತಾ ಹೇ’ “ಮರ್‌ ಮನ್‌ ಮೋಹಿ ಘರ್‌’, “ಜೋಗಾಡಾ ತಾರಾ…ರಂಗೀಲಾ ತಾರಾ… ಹೇ…’ ಹಾಡಿ ಉದ್ಘಾರ ಹೆಚ್ಚಿಸಿದರು.
“ಮನ್‌ ಮೋರ್‌ ಬನಿ ತಾಂಗಟ್‌ಕರೇ, ಮನ್‌ ಮೋರ್‌ ಬನಿ ತಾಂಗಟ್‌ಕರೇ. ಡೋಲ್‌ ಬಾಜೆ…’ ಸಡಗರ. “ಬಂ ಬಂ ಬಂ, ಓ ತೂ ಮಾನೆ ಯ ಮಾನೆ ದಿಲ್‌ ದಾರಾ…ಆಸಾನ್‌ ತೇನು ರಬ್‌ ಮಾನಿಯಾ. ಖಾಲಿ ಖಾಲಿ ಜುಲೊಧೀಂಕಿ ಫಂದೇ ನಾ ಡಾಲೋ….ತುಮಾರಿ ಜವಾನಿ ತುಮ್‌ ಕೋ ಮುಬಾರಕ್‌, ಮಸ್ತ್ ಖಲಂದರ್‌… ಲಾಲ್‌ ಖಲಂದರ್‌..’ ಗಾಯನ ರಸದೌತಣ ನೀಡಿತು. ಕೊನೆಯಲ್ಲಿ ಹಾಡಿದ ಮಾ ತುಜೇ ಸಲಾಂ, ವಂದೇ ಮಾತರಂ ಹಾಡಿದಾಗ ಪ್ರೇಕ್ಷಕರೆಲ್ಲ ಮೊಬೈ ಲ್‌ನಲ್ಲಿ ಟಾರ್ಚ್‌ ಬೆಳಗಿದರು.

ತಬಲಾದಲ್ಲಿ ಅಬ್ದುಲ್‌ ಮೀರ್‌ ಮತ್ತು ಅಯ್ಯುಬ್‌ ಮೀರ್‌, ಡೋಲಕ್‌ ನಲ್ಲಿ ಹಾರೂನ್‌ ಮೀರ್‌, ಒಕ್ಟೊವಾದಲ್ಲಿ ಸಾಫಿಲ್‌ ಮೀರ್‌, ಬಂಜೋದಲ್ಲಿ ನಜೀರ್‌ ಮೀರ್‌, ವಯೋಲಿನ್‌ ಪಿಂಟು ಭಾಯಿ, ಗಿಟಾರ್‌ ನಲ್ಲಿ ಉತ್ಕರ್ಷ್‌, ಕೀ ಬೋರ್ಡ್‌ ನಲ್ಲಿ ಚಂದನ್‌ ವಘೇಲಾ ಸಾಥ್‌ ನೀಡಿದರು. ಹೀರಂ ಖಾನ್‌ ಕಾರ್ಯಕ್ರಮ ನಿರೂಪಿಸಿದರು.
ಕಲಾವಿದರನ್ನು ಡಾ| ಎಂ.ಮೋಹನ್‌ ಆಳ್ವ, ಮುಸ್ತಫಾ, ಪಾರ್ಥಿವ್‌ ವಾಸ್‌, ಶ್ರೀಪತಿ ಭಟ್‌, ಕ್ಯಾ| ಗಣೇಶ್‌ ಕಾರ್ಣಿಕ್‌ ಸ್ವಾಗತಿಸಿದರು.
ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಡಾ| ಮೋಹನ್‌ ಆಳ್ವ ರು ಗೌರವಿಸಿದರು.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳು
ಮೂಡುಬಿದಿರೆ: ಆಳ್ವಾಸ್‌ ವಿರಾಸತ್‌ನಲ್ಲಿ ಡಿ.13ರಂದು ಸಂಜೆ 5.45ಕ್ಕೆ ದೀಪ ಪ್ರಜ್ವಲನ ನಡೆದು, 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ. ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್‌ ಮತ್ತು ತಂಡದಿಂದ “ಸೌಂಡ್‌ ಆಫ್‌ ಇಂಡಿಯ’, ರಾತ್ರಿ 8.15ರಿಂದ 9 ಗಂಟೆಯ ವರೆಗೆ ಅಶೀಮ್‌ ಬಂಧು ಭಟ್ಟಾಚಾರ್ಜಿ ಕೋಲ್ಕತಾ ಸಂಯೋಜನೆಯಲ್ಲಿ ತ್ರಿಪರ್ಣ – ಭರತನಾಟ್ಯ, ಒಡಿಸ್ಸಿ, ಕಥಕ್‌ ನೃತ್ಯ ಸಂಗಮ, 9 ಗಂಟೆಯಿಂದ ಕಾರ್ತಿಕ್‌ ಪರ್‌ಫಾರ್ಮಿಂಗ್‌ ಆರ್ಟ್ಸ್ ಬೆಂಗಳೂರಿನಿಂದ ನೃತ್ಯೋಲ್ಲಾಸ, ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ, 9.25ರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ.

ಟಾಪ್ ನ್ಯೂಸ್

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Udupi: ದಿಲ್ಲಿಯ ಗಣರಾಜ್ಯೋತ್ಸವಕ್ಕೆ 80 ಬಡಗಬೆಟ್ಟು ಗ್ರಾ.ಪಂ.ಅಧ್ಯಕ್ಷರು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

Mangaluru: ಸಮಕಾಲೀನ ಬರಹಗಾರರಲ್ಲಿ ಅಧ್ಯಯನ ಕೊರತೆ: ಡಾ| ಭೈರಪ್ಪ

ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Sullia ಬೆಳ್ಳಾರೆ: ಯುವಕನ ಮೇಲೆ ಹಲ್ಲೆ; ಆರೋಪ

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

Mangaluru ಮರವೂರು: ಆಕಸ್ಮಿಕವಾಗಿ ನದಿಗೆ ಬಿದ್ದು ಮಹಿಳೆ ಮೃತ್ಯು: ಪ್ರಕರಣ ದಾಖಲು

1-mukund

Mukund MGM Realty: ಶೀಘ್ರದಲ್ಲೇ ಮತ್ತೆರಡು ಬ್ಯುಸಿನೆಸ್ ಸೆಂಟರ್‌ಗಳು ಪ್ರಾರಂಭ

8(1

Mangaluru ಲಿಟ್‌ ಫೆಸ್ಟ್‌: ಸಾಹಿತ್ಯದ ಹಬ್ಬದಲ್ಲಿ ಬದುಕಿನ ನಾನಾ ಮುಖಗಳ ಅನಾವರಣ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

shivakumar

Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್‌

BJP-Cow-Assult

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ

SABARIMALE

ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.