ಅಂಬರ್‌ಗ್ರೀಸ್ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?
Team Udayavani, Jun 18, 2021, 10:51 PM IST
ಬೆಂಗಳೂರು: ಎಂಟು ಕೋಟಿ ರೂ. ಮೌಲ್ಯದ ತಿಮಿಂಗಲದ ಅಂಬರ್‌ಗ್ರೀಸ್ ವೀರ್ಯ ಅನ್ನು ಮಾರಾಟಕ್ಕೆ ಯತ್ನಿಸಿದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಗೆ ಅಂಬರ್ ಗ್ರೀಸ್ ಅನ್ನು ಕೊಟ್ಟ ಕೋಲಾರ ಮೂಲದ ಆರೋಪಿ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಕಣದಲ್ಲಿ ಈಗಾಗಲೇ ಮಾಗಡಿ ಮುಖ್ಯರಸ್ತೆಯ ಸೈಯದ್ ತಜ್ಮುಲ್ ಪಷಾ(54), ಪ್ಯಾಲೇಸ್ ಗುಟ್ಟಹಳ್ಳಿಯ ಸಲೀಂ ಪಾಷಾ (48), ನಾಸೀ ಪಾಷಾ(34) ಮತ್ತು ಜೆ.ಪಿ.ನಗರದ ರಫೀ ಉಲ್ಲಾ ಶರೀಫ್ (45) ಅವರನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಕೋಲಾರದ ಸಲ್ಮಾನ್ ಎಂಬಾತ ಅಂಬರ್ ಗ್ರೀಸ್ ಕೊಟ್ಟಿರುವುದಾಗಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಕೆ.ಜಿ.ಹಳ್ಳಿ ಠಾಣೆ ಇನ್‌ಸ್ವೆಕ್ಟರ್ ಸಂತೋಷ್ ನೇತೃತ್ವದ ತಂಡ ಆರೋಪಿಗಾಗಿ ಶೋಧಿಸಿದಾಗ ಆತ ಹೊರರಾಜ್ಯದಲ್ಲಿ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮೃತಪಟ್ಟಿರುವ ಬಗ್ಗೆ ಖಚಿತಪಡಿಸಲು ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡುವಂತೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಕೋಲಾರ ಮೂಲದ ಸಲ್ಮಾನ್ ವಿರುದ್ಧ ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ವಂಚನೆ, ಡ್ರಗ್ಸ್ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವುದು ಗೊತ್ತಾಗಿದೆ. ನೆರೆ ರಾಜ್ಯಗಳಲ್ಲಿ ಮೃತಪಟ್ಟಿರುವುದಾಗಿ ಶಂಕೆಯಿದ್ದು ಈ ಬಗ್ಗೆ ಖಚಿತಪಡಿಸಿಕೊಳ್ಳಲು ಆಯಾ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಇದನ್ನೂ ಓದಿ : ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು
ಅಂಬರ್‌ಗ್ರೀಸ್ ತಿಮಿಂಗಲದ ವೀರ್ಯ ವಿಶೇಷತೆ
ಅಂಬರ್‌ಗ್ರೀಸ್ ಎಂಬುದು ತಿಮಿಂಗಿಲದ ಪಡೆದ ವೀರ್ಯವಾಗಿದ್ದು, ಘನ ಮೇಣದ ವಾಸನೆಯಿಂದ ಕೂಡಿರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯ ಮತ್ತು ಔಷಧಿ ತಯಾರಿಕೆಯಲ್ಲಿ ಬಳಸಲಾಗುತ್ತಿದೆ. ಅದಕ್ಕೆ ಅರಬ್, ಚೀನಾ ಮತ್ತು ಪಾಶ್ಚಿಮಾತ್ಯ ದೇಶಗಳಲ್ಲಿ ಅಪಾರ ಬೇಡಿಕೆ ಇದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ಸುಮಾರು ಒಂದೂವರೆ ಕೋಟಿ ರೂ. ಮೌಲ್ಯಯುಳ್ಳದಾಗಿದೆ. ಆರೋಪಿಗಳು ಯಾರಿಗೆ ಮಾರಾಟಕ್ಕೆ ಮುಂದಾಗಿದ್ದರು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಅಂಬರ್‌ಗ್ರೀಸ್ ಅನ್ನು ವನ್ಯಜೀವಿ ಕಾಯ್ದೆ ಅಡಿಯಲ್ಲಿ ನಿಷೇಧಿಸಲಾಗಿದೆ. ಮಾರುಕಟ್ಟೆಯಲ್ಲಿ ಇದನ್ನು ಮಾರಾಟ ಮಾಡುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Congress Government: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಮುಹೂರ್ತ ನಿಗದಿ: ವಿಜಯೇಂದ್ರ
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
MUST WATCH
ಹೊಸ ಸೇರ್ಪಡೆ
Daily Horoscope; ಇಷ್ಟಾರ್ಥ ಸಿದ್ಧಿಯ ದಿನ..ಉದ್ಯೋಗ ಸ್ಥಾನದಲ್ಲಿ ಸದ್ಯಕ್ಕೆ ನಿಶ್ಚಿಂತೆ
Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.