ಕಾಬೂಲ್ ದಾಳಿಕೋರನ ಹತ್ಯೆ : ಸೇಡು ತೀರಿಸಿಕೊಂಡ ಅಮೆರಿಕ
ಶುಕ್ರವಾರ ನಡುರಾತ್ರಿ ಡ್ರೋನ್ ದಾಳಿ
Team Udayavani, Aug 29, 2021, 7:20 AM IST
ಕಾಬೂಲ್ : ಹಮೀದ್ ಕರ್ಜಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಐಸಿಸ್-ಕೆ ನಡೆಸಿದ ಬಾಂಬ್ ದಾಳಿಗೆ ಅಮೆರಿಕ ಪ್ರತೀಕಾರ ತೀರಿಸಿಕೊಂಡಿದೆ. ಅಫ್ಘಾನಿಸ್ಥಾನದ ನಂಗಾಹಾರ್ ಪ್ರಾಂತ್ಯದಲ್ಲಿ ಅಮೆರಿಕ ಸೇನೆಯು ಡ್ರೋನ್ ದಾಳಿ ನಡೆಸಿದ್ದು, ಬಾಂಬ್ ದಾಳಿಯ ಪ್ರಮುಖ ಸಂಚುಕೋರನನ್ನು ಹತ್ಯೆ ಮಾಡಲಾಗಿದೆ.
ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರು ದಾಳಿ ನಡೆಸಿದವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಮಧ್ಯರಾತ್ರಿ ಐಎಸ್-ಕೆ ಉಗ್ರರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಕಾರಿನಲ್ಲಿ ತೆರಳುತ್ತಿದ್ದ ಐಎಸ್ ಉಗ್ರ ಮತ್ತು ದಾಳಿಕೋರನನ್ನು ಕೊಲ್ಲಲಾಗಿದೆ ಎಂದು ಪೆಂಟಗಾನ್ ತಿಳಿಸಿದೆ.
ಉಗ್ರರ ನೆಲೆಗಳನ್ನು ಹುಡುಕಿ, 12ಕ್ಕೂ ಹೆಚ್ಚು ಬಾರಿ ದಾಳಿ ಮಾಡಲಾಗಿದೆ ಎಂದು ಅಮೆರಿಕದ ನೌಕಾಪಡೆಯ ವಕ್ತಾರ ವಿಲಿಯಂ ಅರ್ಬನ್ ಹೇಳಿದ್ದಾರೆ. ನಮಗೆ ಸಿಕ್ಕಿರುವ ಪ್ರಾಥಮಿಕ ಮೂಲಗಳ ಪ್ರಕಾರ, ನಮ್ಮ ಗುರಿಯಾಗಿದ್ದ ವ್ಯಕ್ತಿಯೇ ಸತ್ತಿದ್ದಾನೆ. ಈ ದಾಳಿಯಲ್ಲಿ ನಾಗರಿಕರು ಮೃತಪಟ್ಟಿಲ್ಲ ಎಂದು ತಿಳಿಸಿದ್ದಾರೆ.
ಗುಂಡಿನ ಮೊರೆತ
ಕಾಬೂಲ್‌ನಲ್ಲಿ ಗುಂಡಿನ ಮೊರೆತ ಕೇಳಿಬರುತ್ತಿದೆ ಎಂದು ಭಾರತೀಯ ವಾಯುಸೇನೆಯ ಮಾಜಿ ವಿಂಗ್ ಕಮಾಂಡರ್ ಅನುಮಾ ಆಚಾರ್ಯ ಹೇಳಿದ್ದಾರೆ. ರಾಯ್ಕರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ವಿಮಾನ ನಿಲ್ದಾಣದ ಗೇಟ್ ನಲ್ಲಿ ಗುಂಡು ಹಾರಾಟ ನಡೆದಿದೆ. ಜನರನ್ನು ಚದುರಿಸುವ ಸಲುವಾಗಿ ಅಶ್ರುವಾಯು ಸಿಡಿಸಲಾಗಿದೆ. ಪರಿಸರದಲ್ಲಿ ಆತಂಕದ ಸ್ಥಿತಿಯಿದೆ ಎಂದೂ ಹೇಳಲಾಗಿದೆ.
ತಾಲಿಬಾನ್‌ಗೆ ಹಿನ್ನಡೆ
ಅಫ್ಘಾನಿಸ್ಥಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್‌ಗೆ ಸೇರಿದ ಕಾಪಿಸಾ ಪ್ರಾಂತ್ಯದಲ್ಲಿ ತಾಲಿಬಾನಿಗಳಿಗೆ ಭಾರೀ ಹಿನ್ನಡೆಯಾಗಿದೆ. ಈ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವ ತಾಲಿಬಾನ್ ಉಗ್ರರ ಪ್ರಯತ್ನ ಈಡೇರಿಲ್ಲ. ಇಲ್ಲಿ ಸಲೇಹ್ ಅವರ ಗುಂಪು ತಾಲಿಬಾನ್ ವಿರುದ್ಧ ಹೋರಾಟದಲ್ಲಿ ಮೇಲುಗೈ ಸಾಧಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.