ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ :ಅಮಿತ್ ಶಾ
Team Udayavani, Jan 18, 2020, 7:19 PM IST
ಬೆಂಗಳೂರು:ವಿಶ್ವದಲ್ಲೇ ಭಾರತದ ಸಂಸ್ಕೃತಿಯ ಬಾವುಟವನ್ನು ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವೇದಾಂತ ಭಾರತೀ ಸಂಸ್ಥೆ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವೇಕಾದೀಪಿನಿ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ವರ್ಷಗಳ ನಂತರ ನಮಗೆ ಭಾರತೀಯ ಸಂಸ್ಕೃತಿಯ ಧ್ವಜವನ್ನು ವಿಶ್ವದಲ್ಲಿ ಎತ್ತಿ ಹಿಡಿಯುವ ಪ್ರಧಾನಿ ಸಿಕ್ಕಿದ್ದಾರೆ ಎಂದು ನರೇಂದ್ರಮೋದಿ ಅವರನ್ನು ಕೊಂಡಾಡಿದರು.
ದೇಶದ ಯಾವ ಪ್ರಧಾನಿಯೂ ಪ್ರಮಾಣವಚನ ಪೂರ್ವದಲ್ಲಿ ಕಾಶಿಯಲ್ಲಿ ಗಂಗಾರತಿ ಮಾಡಿ ನಂತರ ಪ್ರಮಾಣವನ ಸ್ವೀಕರ ಮಾಡಿದ ಉದಾಹರಣೆ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕಾರಕ್ಕೆ ಮೊದಲು ವಾರಣಾಸಿಯಲ್ಲಿ ಗಂಗಾರತಿ ಮಾಡುವ ಸಂಪ್ರದಾಯ ಪಾಲನೆ ಮಾಡಿದರು ಎಂದು ಹೇಳಿದರು.
ಮೋದಿಯವರು ನಮ್ಮ ದೇಶದ ಸಂಸ್ಕೃತಿ ಪರಂಪರೆಯನ್ನು ವಿಶ್ವಕ್ಕೆ ತಿಳಿಸುವ ಸಂದೇಶವಾಹಕರಾಗಿ ಕೆಲಸ ಮಾಡುತ್ತಿ¨ªಾರೆ. ಸಂಸ್ಕೃತಿಯ ವಾಹಕರಾಗಿ ಪ್ರಪಂಚ ಪರ್ಯಟಣೆ ಮಾಡುತ್ತಿ¨ªಾರೆ. ಇದರಿಂದ ವಿಶ್ವವೇ ಭಾರತವನ್ನು ಗುರುತಿಸುವಂತೆ ಮಾಡಿದ್ದಾರೆ ಹಾಗೂ ಭಾರತೀಯತೆ ಏನು ಎಂಬುದನ್ನು ತೋರಿಸಿಕೊಡುತ್ತಿದ್ದಾರೆ ಎಂದು ಹೇಳಿದರು.
ಸರಿದಾರಿಯಲ್ಲಿ ಕೊಂಡೊಯ್ದವರು
ಹಿಂದೂ ಧರ್ಮದಲ್ಲಿನ ಮತಾಂತರ, ಒಳ ಸಂಘರ್ಷ ಹಾಗೂ ಅನೇಕ ವರ್ಷಗಳ ಕೆಟ್ಟ ಪದ್ಧತಿಗಳನ್ನು ಹೋಗಲಾಡಿಸಿ, ಎಲ್ಲರನ್ನು ಸರಿದಾರಿಯಲ್ಲಿ ಕರೆದೊಯ್ಯುವ ಪ್ರಯತ್ನವನ್ನು ಆದಿ ಶಂಕರಾಚಾರ್ಯರು ಮಾಡಿದ್ದರು .ಆದಿ ಶಂಕರಾಚಾರ್ಯರು ತಮ್ಮ ಅಲ್ಪವಧಿಯ ಜೀವನದಲ್ಲಿ ಹಿಂದೂ ಧರ್ಮದ ಕೆಟ್ಟ ಆಚರಣೆಗಳನ್ನು ದೂರ ಮಾಡಿ, ಧರ್ಮವನ್ನು ಮುನ್ನೆಡೆಸುವ ಕಾರ್ಯ ಮಾಡಿದ್ದಾರೆ. ದೇವರನ್ನು ಕಾಣುವ ಮುಕ್ತಿ ಮಾರ್ಗ ಒಂದೇ ಎಂಬುದನ್ನು ಸಾರಿ ಹೇಳಿದ್ದಾರೆ ಎಂದು ತಿಳಿಸಿದರು.
ಆದಿ ಶಂಕರಾಚಾರ್ಯರು ದೇಶವನ್ನು 7 ಬಾರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ್ದಾರೆ. ಲೋಕಕಲ್ಯಾಣಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಮಠಗಳ ಸ್ಥಾಪನೆ ಮಾಡಿದಾರೆ. ಈಗಿನ ಉತ್ತರಾಖಾಂಡ್‌ನಲ್ಲಿರುವ ಜೋರ್ತಿಮಠ, ದ್ವಾರಕದ ಕಲಿಕಾಪೀಠ, ಶೃಂಗೇರಿ ಶಾರದಾಪೀಠ, ಪುರಿಯಲ್ಲಿ ಗೋವರ್ಧನ ಪೀಠ ಸ್ಥಾಪನೆ ಮಾಡಿದ್ದರು. ಆದಿ ಶಂಕರಾಚಾರ್ಯರ ಅನೇಕ ಗ್ರಂಥಗಳು ಇಂದಿಗೂ ಪ್ರಸ್ತುತವಾಗಿದೆ. ಭಕ್ತಿ ಮಾರ್ಗದ ಮೂಲಕವೂ ಮುಕ್ತಿ ಸಾಧ್ಯ ಎಂದು ತೋರಿಸಿಕೊಟ್ಟಿ¨ªಾರೆ ಎಂದರು.
ವಿಶ್ವದ ಎಲ್ಲ ಸಮಸ್ಯೆಗಳಿಗೂ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲಿಕೆಯಲ್ಲಿ ಪರಿಹಾರ ಸಿಗುತ್ತದೆ. ಶಂಕರರು ಜ್ಞಾನ ಮಾರ್ಗವನ್ನು ತೋರಿಸಿಕೊಟ್ಟಿ¨ªಾರೆ. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯೋಣ ಎಂದು ಹೇಳಿದರು.
ಜ್ಞಾನದ ಮಾರ್ಗವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಮತ್ತು ಆದಿಶಂಕರಾಚಾರ್ಯರ ಪರಂಪರೆಯನ್ನು ಮುಂದುವರಿಸುವ ಕಾರ್ಯವು ವೇದಾಂತ ಭಾರತಿ ಮಾಡುತ್ತಿದೆ. ಎರಡು ಲಕ್ಷಕ್ಕೂ ಅಧಿಕ ಮಕ್ಕಳು ಏಕಕಾಲದಲ್ಲಿ ವಿವೇಕಾದೀಪಿನೀಯನ್ನು ಉಚ್ಛಾರ ಮಾಡಬಹುದಾದ ಅತ್ಯುತ್ತಮ ವಾತಾವರಣವನ್ನು ಈ ಸಂಸ್ಥೆ ನಿರ್ಮಾಣ ಮಾಡಿದೆ. ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲಿಕೆಯನ್ನು ಅತ್ಯಂತ ಸರಳ ರೂಪದಲ್ಲಿ ವಿವೇಕಾದೀಪಿನೀಯಲ್ಲಿ ರೂಪಿಸಲಾಗಿದೆ ಎಂದು ಹೇಳಿದರು.
ಒಂದೇ ಸ್ಥಳದಲ್ಲಿ ಒಂದೇ ಸ್ವರದಲ್ಲಿ ಲಕ್ಷಕ್ಕೂ ಅಧಿಕ ಮಕ್ಕಳು ಶ್ಲೋಕ ಉಚ್ಛಾರಣೆ ಮಾಡುವುದನ್ನು ಕೇಳಿದರೆ ಮನಸ್ಸು ತುಂಬಿ ಬರುತ್ತದೆ. ಹೃದಯ ಸ್ವತ್ಛವಾಗುತ್ತದೆ. ಆದಿ ಶಂಕರಾಚಾರ್ಯರ ಪ್ರಶ್ನೋತ್ತರ ರತ್ನ ಮಾಲಿಕವನ್ನು ಅಭ್ಯಾಸ ಮಾಡುವುದರಿಂದ ನಮ್ಮ ಜೀವನವೇ ಬದಲಾಗುತ್ತದೆ. ಈ ಶ್ಲೋಕಗಳ ಒಳಾರ್ಥ ತಿಳಿಯಬೇಕು. ಅದರಿಂದ ನಾವು ಎಂದೂ ಕೆಟ್ಟ ಹಾದಿ ತುಳಿಯುವುದಿಲ್ಲ. ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಹಾಗೂ ಜೀವನದ ಉದ್ದೇಶ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದಿನ ದಿನದಲ್ಲಿ ಆದ್ಯಾತ್ಮಿಕ ಪ್ರಸ್ತುತೆಯನ್ನು ಅರಿತ ಪ್ರಧಾನಿ ನರೇಂದ್ರ ಮೋದಿಯವರು ಪ್ರಶ್ನೋತ್ತರ ರತ್ನ ಮಾಲಿಕವನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಮೂಲಕ ದೇಶದ 24 ಭಾಷೆಗಳಲ್ಲಿ ಅನುವಾದಿಸುವ ಕಾರ್ಯ ಮಾಡಿದ್ದಾರೆ ಎಂದರು.
ಶಾಲೆಗಳಲ್ಲಿ ವಿವೇಕಾ ದೀಪಿನೀ ಬೋಧನೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮನಸ್ಸಿಗೆ ಹಿತ ಹಾಗೂ ಜೀವನಕ್ಕೆ ಬೆಳಕನ್ನು ನೀಡುವ ವಿವೇಕದೀಪಿನೀ ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿರುವುದು ಹಾಗೂ ಮೌಲಿಕ ಬದಲಾವಣೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಶಾಲೆಗಳಲ್ಲಿ ವಿವೇಕಾದೀಪಿನಿ ಬೋಧಿಸಲು ಸರ್ಕಾರ ಅನುಮತಿ ನೀಡಿದೆ. ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆಯಲು ನೈತಿಕ ಶಿಕ್ಷಣದ ಅವಶ್ಯವಿದೆ. ವೇದಾಂತ ಭಾರತೀ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ನೈತಿಕತೆ ಕಲಿಸುತ್ತಿರುವುದನ್ನು ಸ್ವಾಗತಿಸಿದರು.
ಆದಿಗುರು ಶಂಕರಾಚಾರ್ಯರು ಅದ್ವೆ„ತ ಸಿದ್ಧಾಂತವನ್ನು ಜಗತ್ತಿಗೆ ಸಾರಿದರು. ಆಚಾರ್ಯರ ವಿರಚಿತ ಪ್ರಶ್ನೋತ್ತರ ರತ್ನ ಮಾಲೀಕೆಯಿಂದ ಆಯ್ದ ಶ್ಲೋಕಗಳನ್ನು ವಿವೇಕದೀಪಿನಿ ರಚನೆ ಮಾಡಲಾಗಿದೆ. ಶಂಕರಾಚಾರ್ಯರೇ ಕೇಳಿಕೊಂಡ ಪ್ರಶ್ನೆಗಳು ಹಾಗೂ ಉತ್ತರಗಳು ಸಾರ್ವಕಾಲಿಕವಾಗಿವೆ. ಸತ್ಯ, ಅಹಿಂಸೆ, ತ್ಯಾಗ, ಸಜ್ಜನ, ವಿನಯ, ತಂದೆ-ತಾಯಿ, ಗುರು-ಹಿರಿಯರಲ್ಲಿ ಗೌರವ ಮನೋಭಾವವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕಿದೆ. ಈ ವಿಷಯವನ್ನು ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ತಿಳಿದುಕೊಳ್ಳಬೇಕು ಎಂದರು.
ಕೆ.ಆರ್. ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠದ ಪೀಠಾಧ್ಯಕ್ಷ ಶಂಕರಭಾರತೀ ಸ್ವಾಮೀಜಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ಹೇಳುತ್ತಿರುವವರು ನುಡಿದಂತೆ ನಡೆಯುತ್ತಿಲ್ಲ. ಹೀಗಾಗಿ ಸಮಾಜವನ್ನು ಉತ್ತಮ ದಾರಿಯಲ್ಲಿ ಕೊಂಡೊಯ್ಯಲು ವಿವೇಕದೀಪಿನೀ ಸಹಾಯವಾಗಲಿದೆ ಎಂದು ಹೇಳಿದರು.
ಇದು ಯಾವುದೋ ಗುಂಪು, ಕಾಲ, ಬಾಲ್ಯ ಮತ್ತು ವಯಸ್ಕ ಎಂದು ನಿರ್ಧಾರವಾಗುವುದಿಲ್ಲ. ಇಡೀ ಸಮಾಜದ ಪ್ರತಿಯೊಬ್ಬರಿಗೂ ಜೀವನಪೂರ್ತಿ ಅಳವಡಿಸಿಕೊಳ್ಳಬೇಕಿದೆ. ವಿದ್ಯಾರ್ಥಿಗಳು ವೇದ-ಉಪನಿಷತ್ತು ಹಾಗೂ ವಿವೇಕದೀಪಿನೀಯನ್ನು ಪಠಣ ಮಾಡಿದರೆ ಸಾಲದು. ಜೀವನದಲ್ಲಿ ಅಳವಡಿಸಿಕೊಂಡಾಗ ಸಾರ್ಥಕತೆ ಕಾಣಲಿದೆ ಎಂದು ತಿಳಿಸಿದರು.
ವೇದಾಂತ ಭಾರತೀ ಗೌರವಾಧ್ಯಕ್ಷ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್, ಅಧ್ಯಕ್ಷ ಸುಪ್ರೀಂಕೋರ್ಟ್ ಹಿರಿಯ ವಕೀಲ ಎಸ್.ಎಸ್.ನಾಗಾನಂದ, ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಂಸದರಾದ ತೇಜಸ್ವಿಸೂರ್ಯ, ಪಿ.ಸಿ.ಮೋಹನ್, ಶಾಸಕರಾದ ಎಸ್. ಟಿ. ಸೋಮಶೇಖರ್, ಎಸ್.ಆರ್.ವಿಶ್ವನಾಥ್ ಉಪಸ್ಥಿತರಿದ್ದರು.
ಲಕ್ಷ ವಿದ್ಯಾರ್ಥಿಗಳಿಂದ ವಿವೇಕಾದೀಪಿನಿ ಪಠಣ
ವೇದಾಂತ ಭಾರತೀ ಸಂಸ್ಥೆ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ವಿವೇಕಾದೀಪಿನೀ ಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ನಗರದ ಸಾವಿರಕ್ಕೂ ಅಧಿಕ ಶಾಲೆಯ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಏಕಕಾಲದಲ್ಲಿ ಸುಮಾರು 12 ನಿಮಿಷಗಳ ಕಾಲ ವಿವೇಕಾದೀಪಿನಿ ಪಠಣ ಮಾಡುವ ಮೂಲಕ ವಿವೇಕಾದೀಪಿನಿ ಮಹಾಸಮರ್ಪಣೆ ನಡೆಸಿಕೊಟ್ಟರು. ನಗರದ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಆರಂಭದಿಂದಲೇ ದಿನಕ್ಕೆ 15 ನಿಮಿಷದಂತೆ ಅಥವಾ ವಾರದಲ್ಲಿ ಒಂದು ಅಥವಾ ಎರಡು ಭಾರಿ ವಿವೇಕಾದೀಪಿನೀಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುತಿತ್ತು. ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಯಲ್ಲಿ ಮುದ್ರಿಸಿರುವ ವಿವೇಕಾದೀಪಿನಿ ವಿದ್ಯಾರ್ಥಿಗಳಿಗೆ ಹಂಚಿಕೆಯೂ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Police FIR: ಎಫ್ಐಆರ್ ದಾಖಲಿಸಿ ನನ್ನ ವಿರುದ್ಧ ಸರ್ಕಾರದಿಂದ ದ್ವೇಷ ಸಾಧನೆ: ಎಚ್‌ಡಿಕೆ
Waqf: ಕಾಂಗ್ರೆಸ್ ನಾಯಕರಿಂದಲೇ 2.70 ಲಕ್ಷ ಕೋಟಿ ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ: ಯತ್ನಾಳ್
MUST WATCH
ಹೊಸ ಸೇರ್ಪಡೆ
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.