ಟರ್ಕಿ ಭೂಕಂಪದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಇಂಜಿನಿಯರ್ ಮೃತದೇಹ ಪತ್ತೆ
Team Udayavani, Feb 11, 2023, 6:22 PM IST
ಟರ್ಕಿ: ಟರ್ಕಿಯ ಭೀಕರ ಭೂಕಂಪದ ಬಳಿಕ ನಾಪತೆಯಾಗಿದ್ದ ಬೆಂಗಳೂರಿನ ಎಂಜಿನಿಯರ್ ಒಬ್ಬರ ಶವ ತಾವು ನೆಲೆಸಿದ್ದ ಹೊಟೆಲಿನ ಅವಶೇಷಗಳ ಅಡಿಯಲ್ಲೇ ಪತ್ತೆಯಾಗಿದೆ. ಮೂಲತಃ ಉತ್ತರಾಖಾಂಡ್ ಮೂಲದವರಾದ ವಿಜಯ್ ಕುಮಾರ್ (35), ಬೆಂಗಳೂರಿನ ಓಕ್ಸಿಪ್ಲಾಂಟ್ ಇಂಡಿಯಾ ಕಂಪನಿಯಲ್ಲಿ ಗ್ಯಾಸ್ ಪೈಪ್ಲೈನ್ ಅನುಸ್ಥಾಪನಾ ಇಂಜಿನಿಯರ್ ಆಗಿ ಉದ್ಯೋಗದಲ್ಲಿದ್ದರು.
ಪ್ರಾಜೆಕ್ಟ್ ವರ್ಕ್ ಸಂಬಂಧಿ ಕೆಲಸಕ್ಕೋಸ್ಕರ ಜ.23ರಂದು ಟರ್ಕಿಗೆ ತೆರಳಿದ್ದ ವಿಜಯ್ ಮಲಾತ್ಯಾ ನಗರದಲ್ಲಿರುವ ಅವ್ಸರ್ ಹೋಟೆಲ್ನಲ್ಲಿ ಎಂಬ ತಾರಾ ಹೋಟೆಲಿನಲ್ಲಿ ವಾಸ್ತವ್ಯ ಪಡೆದಿದ್ದರು.
ಕೆಲ ದಿನಗಳ ಹಿಂದೆ ನಡೆದಿದ್ದ ಟರ್ಕಿ ಭೂಕಂಪದ ಬಳಿಕ ವಿಜಯ್ ಕುಮಾರ್ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ತಾವು ನೆಲೆಸಿದ್ದ 24 ಅಂತಸ್ತಿನ ಅವ್ಸರ್ ಹೋಟೆಲ್ನ ಅವಶೇಷಗಳ ಅಡಿಯಲ್ಲಿ ಪತ್ತೆಯಾಗಿದ್ದು ಅವರ ಕುಟುಂಬಸ್ಥರು ಅವರ ಎಡ ಕೈಯಲ್ಲಿದ್ದ ಟ್ಯಾಟೂ ಚಿತ್ರ ಆಧರಿಸಿ ಅವರನ್ನು ಗುರುತಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.