ಬೆಂಬಲ ಬೆಲೆ ಪಡೆದ ರೈತರ ಪ್ರಮಾಣ ಅಗಾಧ ಹೆಚ್ಚಳ : ಕೇಂದ್ರ ಆಹಾರ ಸಚಿವಾಲಯ
ಗೋಧಿ ಬೆಂಬಲ ಬೆಲೆ ಪಡೆದ ರೈತರ ಸಂಖ್ಯೆ ಶೇ. 240ರಷ್ಟು ಹೆಚ್ಚು
Team Udayavani, Jul 21, 2021, 7:26 PM IST
ನವದೆಹಲಿ: ಗೋಧಿಗೆ ನೀಡಲಾಗುವ ಬೆಂಬಲ ಬೆಲೆಯ ಫಲಾನುಭವಿ ರೈತರ ಸಂಖ್ಯೆ ಶೇ. 240ರಷ್ಟು ಹೆಚ್ಚಾಗಿದೆ. ಇದೇ ವೇಳೆ, ಭತ್ತದ ಬೆಂಬಲ ಬೆಲೆ ಫಲಾನುಭವಿಗಳ ಸಂಖ್ಯೆ ಶೇ. 175ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಸಚಿವಾಲಯ, ಲೋಕಸಭೆಗೆ ತಿಳಿಸಿದೆ.
ತನ್ನ ಹೊಸ ಕೃಷಿ ಕಾಯ್ದೆಗಳ ಜಾರಿಯ ಹಿನ್ನೆಲೆಯಲ್ಲಿ ಬೆಂಬಲ ಬೆಲೆ ಸಂಸ್ಕೃತಿಗೆ ಕೇಂದ್ರ ಸರ್ಕಾರ ತಿಲಾಂಜಲಿ ನೀಡಲಿದೆ ಎಂಬ ಊಹಾಪೋಹಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಲೋಕಸಭೆಗೆ, ಆಹಾರ ಸಚಿವಾಲಯ ಸಲ್ಲಿಸಿರುವ ಈ ಅಂಕಿ-ಅಂಶಗಳು ಮಹತ್ವ ಪಡೆದುಕೊಂಡಿವೆ.
2016-17ರ ಮುಂಗಾರು ಬೆಳೆ ಮಾರಾಟ ಅವಧಿಯಲ್ಲಿ 20.47 ಲಕ್ಷ ರೈತರು ಗೋಧಿ ಬೆಂಬಲ ಬೆಲೆಯ ಸೌಲಭ್ಯ ಪಡೆದಿದ್ದರು. 2020-21ನೇ ವರ್ಷದಲ್ಲಿ ಇವರ ಸಂಖ್ಯೆ 49.16ಕ್ಕೇರಿದೆ. ಇನ್ನು, 2015-16ನೇ ವರ್ಷದಲ್ಲಿ ಭತ್ತದ ಬೆಂಬಲೆ ಬೆಲೆ ಸೌಲಭ್ಯವನ್ನು ಶೇ. 73.1 ಲಕ್ಷ ಜನರು ಪಡೆದಿದ್ದರು. 2020-21ನೇ ವರ್ಷದಲ್ಲಿ ಒಟ್ಟಾರೆ. 1.28 ಕೋಟಿ ರೈತರು ಇದರ ಲಾಭ ಪಡೆದಿದ್ದಾರೆಂದು ಆಹಾರ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ :ಒಬಿಸಿ ಕೆನೆಪದರ ವರ್ಗದ ಆದಾಯ ಮಿತಿ ಹೆಚ್ಚಿಸಲು ಕೇಂದ್ರ ಚಿಂತನೆ
ಕೋಲ್ಡ್ ಸ್ಟೋರೇಜ್ ನಿರ್ಮಾಣ ಪ್ರಗತಿಯಲ್ಲಿ
ಲೋಕಸಭೆಗೆ, ಆಹಾರ ಸಚಿವಾಲಯ ಸಲ್ಲಿಸಿರುವ ಮತ್ತೂಂದು ವರದಿಯಲ್ಲಿ ದೇಶದ ನಾನಾ ಭಾಗಗಳಲ್ಲಿ 230 ಕೋಲ್ಡ್ ಸ್ಟೋರೇಜ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಹೇಳಿದೆ. ನಾನಾ ರಾಜ್ಯಗಳಲ್ಲಿ ಇವುಗಳ ನಿರ್ಮಾಣ ಕಾಮಗಾರಿ ಚಾಲ್ತಿಯಲ್ಲಿದೆ. ಇದರ ಜೊತೆಗೆ, ಇಳುವರಿ ನಂತರ ಆಗುವ ಬೆಳೆ ನಷ್ಟವನ್ನು ತಡೆಯುವಂಥ 113 ವ್ಯವಸ್ಥೆಗಳ ಕಾಮಗಾರಿಗಳೂ ಪ್ರಗತಿಯಲ್ಲಿದ್ದು, ಇವೆಲ್ಲವುಗಳಿಂದ ದೇಶದ ಸುಮಾರು 3,37 ಕೋಟಿ ರೈತರಿಗೆ ಉಪಯೋಗವಾಗಲಿವೆ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
Bengaluru; ನಿದ್ರೆಗೆ ಜಾರಿದ ಕ್ಯಾಬ್ ಡ್ರೈವರ್: ಪ್ರಯಾಣಿಕನಿಂದಲೇ ವಾಹನ ಚಾಲನೆ!| Video
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.