Andhra Pradesh: ಜಗನ್‌ಗೆ ಎಗ್ ಪಫ್ಸ್ ಬಿಸಿ: 5 ವರ್ಷಕ್ಕೆ 3 ಕೋಟಿ ರೂ. ವೆಚ್ಚ ?
ಆಂಧ್ರದ ಟಿಡಿಪಿ ಸರಕಾರದ ಹೊಸ ಆರೋಪ, ಕಚೇರಿಯಲ್ಲಿ ದಿನಕ್ಕೆ 993ರಂತೆ ಎಗ್ ಪಫ್ಸ್ ಸೇವನೆ?
Team Udayavani, Aug 22, 2024, 7:25 AM IST
ಹೈದಾರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ವಿರುದ್ಧ ಆರೋಪಗಳ ಸುರುಳಿ ಸುತ್ತಿಕೊಳ್ಳುತ್ತಲೇ ಇವೆ. ಋಷಿಕೊಂಡ ಪ್ಯಾಲೇಸ್, ಐಷಾರಾಮಿ ಪೀಠೊಪಕರಣ ವಿವಾದ ಗಳ ಬಳಿಕ ಇದೀಗ “ಎಗ್ ಪಫ್ಸ್’ ವಿಚಾರ ಆಂಧ್ರ ರಾಜ ಕಾರಣದ ಬಿಸಿ ಹೆಚ್ಚಿಸಿದೆ.
ಜಗನ್ ಆಡಳಿತದ 5 ವರ್ಷದಲ್ಲಿ 2019ರಿಂದ 2024ರವರೆಗೆ ಎಗ್ ಪಫ್ಸ್ ತಿನ್ನಲೆಂದೇ ಸಿಎಂ ಕಚೇರಿ 3.62 ಕೋಟಿ ರೂ. ವೆಚ್ಚ ಮಾಡಿದೆ ಎಂದು ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ಒಂದು ಪಫ್ಸ್‌ಗೆ 20 ರೂ.ಗಳಂತೆ 5 ವರ್ಷಗಳಲ್ಲಿ 18 ಲಕ್ಷ ಎಗ್ ಪಫ್ಸ್ ಸಿಎಂಒ ಕಚೇರಿ ಸಿಬಂದಿ ಸೇವಿಸಿದ್ದಾರೆ.
ಅಲ್ಲಿಗೆ ಪ್ರತೀ ದಿನ ಜಗನ್ ಕಚೇರಿಯಲ್ಲಿ 993 ಎಗ್ ಪಫ್ಸ್ ಸೇವಿಸಿದಂತಾಗಿದೆ. ಈ ಮೂಲಕ ಪ್ರತೀ ವರ್ಷ ಬರೀ ಎಗ್ ಪಫ್ಸ್ ಗಾಗಿಯೇ 72 ಲಕ್ಷ ರೂ.ಗಳನ್ನು ವ್ಯಯಿಸಲಾಗಿದೆ ಎಂದು ಟಿಡಿಪಿ ಆರೋಪಿಸಿದೆ. ಇದನ್ನು “ಎಗ್ ಪಫ್ಸ್ ಹಗರಣ’ ಎಂದೂ ಕರೆದಿದೆ. ಈ ಬಗ್ಗೆ ಟ್ವೀಟ್ ಮಾಡಿ “ಮುಚ್ಚಿಟ್ಟ ಸತ್ಯಗಳು ಈಗ ಮೊಟ್ಟೆ ಒಡೆದು ಹೊರಬರುತ್ತಿವೆ. ಇದು ಕೇವಲ ಆರಂಭ. ಇಷ್ಟು ಬೇಗ ಭಯಭೀತರಾಗ ಬೇಡಿ’ ಎಂದು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷಕ್ಕೆ ಚಾಟಿ ಬೀಸಿದೆ.
ಸುಳ್ಳು ಆರೋಪ: ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಈ ಆರೋಪಗಳನ್ನು ತಳ್ಳಿ ಹಾಕಿದ್ದು, ಜಗನ್ ವರ್ಚಸ್ಸಿಗೆ ಧಕ್ಕೆ ತರಲು ಇಂಥ ಆರೋಪಗಳನ್ನು ಮಾಡಲಾಗಿದೆ ಎಂದಿದೆ. 2014ರಿಂದ 2019ರ ವರೆಗಿನ ನಾಯ್ಡು ಸರಕಾರದಲ್ಲೂ ಬರೀ ತಿಂಡಿ- ತಿನಸುಗಳಿಗಾಗಿ 8.5 ಕೋಟಿ ರೂ. ಖರ್ಚು ಮಾಡ ಲಾಗಿತ್ತು ಎಂದು ತಿರುಗೇಟು ನೀಡಿದೆ.
ಏನಿದು ಪ್ರಕರಣ?
ಜಗನ್ ಆಡಳಿತದಲ್ಲಿ ಎಗ್ ಪಫ್ಸ್‌ಗಾಗಿಯೇ 3.62 ಕೋಟಿ ರೂ. ವೆಚ್ಚ
2019ರಿಂದ 2024ರ ಅವಧಿಯಲ್ಲಿನ ಹಗರಣ ಬಗ್ಗೆ ಟಿಡಿಪಿ ಆರೋಪ
1 ಎಗ್‌ಪಫ್Õಗೆ 20 ರೂ.ಗಳಂತೆ 5 ವರ್ಷದಲ್ಲಿ 18 ಲಕ್ಷ ಪಫ್ಸ್ ಸೇವನೆ
ಜಗನ್ ವರ್ಚಸ್ಸಿಗೆ ಧಕ್ಕೆ ತರುವ ಷಡ್ಯಂತ್ರ: ವೈಎಸ್‌ಆರ್‌ಸಿಪಿ
2014-19ರಲ್ಲಿನ ಟಿಡಿಪಿ ಆಡಳಿತದಲ್ಲೂ ತಿನಸಿಗೆ 8.5 ಕೋಟಿ ರೂ. ವೆಚ್ಚ: ಜಗನ್ ಪಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
MUST WATCH
ಹೊಸ ಸೇರ್ಪಡೆ
Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ
Mangalore: ಅಡ್ಯಾರ್ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ
Dandeli ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐಯಾಗಿ ಕಿರಣ್ ಪಾಟೀಲ್ ಅಧಿಕಾರ ಸ್ಬೀಕಾರ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.