ಪ್ರಾಧಿಕಾರದಿಂದ ಮಲತಾಯಿ ಧೋರಣೆ : ನೆಲಕಚ್ಚಿದ ಆನೆಗೊಂದಿ ಪ್ರವಾಸೋದ್ಯಮ 

2015 ರಿಂದಲೂ ಹವಾಮಾ ನೂತನ ಮಾಸ್ಟರ್‌ಪ್ಲಾನ್ ರಚನಾ ಕಾರ್ಯ ಪ್ರಾಧಿಕಾರದಿಂದ ಮಲತಾಯಿಧೋರಣೆ

Team Udayavani, Feb 25, 2022, 7:09 PM IST

ಪ್ರಾಧಿಕಾರದಿಂದ ಮಲತಾಯಿಧೋರಣೆ : ನೆಲಕಚ್ಚಿದ ಆನೆಗೊಂದಿ ಪ್ರವಾಸೋದ್ಯಮ 

ಗಂಗಾವತಿ : ಪರಿಷ್ಕೃತ ಹಂಪಿ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ಪ್ಲಾನ್(ಮಹಾಯೋಜನೆ) ಘೋಷಣೆ ಮಾಡಲು ರಾಜ್ಯ ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಕೆಲ ನಿಯಮಗಳ ತಿದ್ದುಪಡಿಯೊಂದಿಗೆ ಆನೆಗೊಂದಿ ಭಾಗವನ್ನು ಕೊಪ್ಪಳ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ತರಲು ಮುಖ್ಯಮಂತ್ರಿಗಳು ಸಲಹೆ ನೀಡಿದ್ದಾರೆನ್ನುವ ಮೂಲಕ ಮಾಸ್ಟರ್ ಪ್ಲಾನ್ ಘೋಷಣೆಯನ್ನು ಇನ್ನಷ್ಟು ವಿಳಂಭ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

2015 ರಿಂದಲೂ ಹವಾಮಾ ಮಾಸ್ಟರ್ ಪ್ಲಾನ್ ಪರಿಷ್ಕೃತ ಘೋಷಣೆ ಮಾಡಲು ಸಿದ್ದತೆ ನಡೆಸಲಾಗುತ್ತಿದೆ. ಇದುವರೆಗೂ ಸುಮಾರು 10ಕ್ಕೂ ಹೆಚ್ಚು ಭಾರಿ ಅಧಿಕಾರಿಗಳು ಸಭೆ ಸೇರಿದರೂ ಅಂತಿಮ ತೀರ್ಮಾನಕ್ಕೆ ಬರಲಾಗಿಲ್ಲ. ಸ್ಥಳೀಯರಿಂದ(ಭಾಗೀದಾರರು) ಆಕ್ಷೇಪಣೆ ಆಹ್ವಾನಿಸಿದ ಸಂದರ್ಭದಲ್ಲಿ ಹವಾಮಾ ವ್ಯಾಪ್ತಿಯಿಂದ ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಕೈ ಬಿಡುವಂತೆ ಸಾವಿರಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಮಧ್ಯೆ ಡಿ.27 ರಂದು ಆನೆಗೊಂದಿ ಭಾಗದ ಹೊಟೇಲ್‌ಗಳಿಗೆ ಅನಧಿಕೃತ ಎಂದು ಸೀಲ್ ಹಾಕಿ ವ್ಯವಹಾರ ಬಂದ್ ಮಾಡಿಸಲಾಗಿದೆ.

ಆನೆಗೊಂದಿ ಭಾಗವನ್ನು ಗ್ರೀನ್ ಜೋನ್ ಬದಲಿ ಕಮರ್ಷಿಯಲ್ ಜೋನ್ ಮಾಡಿ ಕಿಷ್ಕಿಂದಾ ಅಂಜನಾದ್ರಿ ಸುತ್ತ ಇಂತಿಷ್ಟು ಪ್ರದೇಶದಲ್ಲಿ ಹೊಟೇಲ್ ಆರಂಭಕ್ಕೆ ನಿರ್ಬಂಧ ಹೇರಿ ಉಳಿದ ಗ್ರಾಮಗಳಲ್ಲಿ ಹೋಸ್ಟೇ ಸೇರಿ ಪ್ರವಾಸಿಗರಿಗೆ ಊಟ ವಸತಿ ನೀಡುವ ಹೊಟೇಲ್‌ಗಳಿಗೆ ಅನುಮತಿ ನೀಡಬೇಕು. ಗ್ರಾಮಗಳಿಗೆ 9/11 ಪಡೆಯಲು ನಿಯಮ ತಿದ್ದುಪಡಿ ಮಾಡುವಂತೆ ಮುಖ್ಯಮಂತ್ರಿ, ಸಾರಿಗೆ, ಪ್ರವಾಸೋದ್ಯಮ ಸಚಿವರು ಸೇರಿ ಸ್ಥಳೀಯ ಶಾಸಕರು ಸಂಸದರು ಹಾಗೂ ಸಂಬAಧಪಟ್ಟ ಇಲಾಖೆಯ ಆಯುಕ್ತರು ಮತ್ತು ಜಿಲ್ಲಾಡಳಿಕ್ಕೆ ಆನೆಗೊಂದಿ ಭಾಗದ ಚುನಾಯಿತರು, ಗ್ರಾಮಸ್ಥರು ಹೊಟೇಲ್ ಮಾಲೀಕರು ಭೇಟಿ ಮಾಡಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಪುನಹ ಆನೆಗೊಂದಿ ಭಾಗಕ್ಕೆ ಅನ್ಯಾಯ ಸಂಭವ: ಮಾಸ್ಟರ್ ಪ್ಲಾನ್(ಮಹಾಯೋಜನೆ) ಕರಡುಪ್ರತಿ ತಯಾರಿಸುವ ಸಂಪೂರ್ಣ ಅಧಿಕಾರ ಪುನಹ ಹಂಪಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನೀಡಿರುವುದು ಆನೆಗೊಂದಿ ಭಾಗದ ಗ್ರಾಮಗಳಿಗೆ ಪುನಹ ಅನ್ಯಾಯವಾಗುವ ಆತಂಕವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಪ್ರಾಧಿಕಾರದ ನಿಯಮ ತಯಾರಿಸಿದ ತಾಂತ್ರಿಕ ಕಮೀಟಿಯವರೇ ಪುನಹ ನೂತನ ಮಾಸ್ಟರ್ ಪ್ಲಾನ್ ತಯಾರು ಮಾಡುತ್ತಿದ್ದಾರೆ. 1988 ರಲ್ಲಿ ಹೊಸಪೇಟೆ ಭಾಗದ 8 ಹಳ್ಳಿಗಳು ಆನೆಗೊಂದಿ ಭಾಗದ ಎರಡು ಹಳ್ಳಿ(ಆನೆಗೊಂದಿ ಮತ್ತು ವಿರೂಪಾಪೂರಗಡ್ಡಿ) ಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ತಂದು ಯುನೆಸ್ಕೋಗೆ ವರದಿ ನೀಡಿದ ತಕ್ಷಣ ಹಂಪಿಯನ್ನು ಯುನೇಸ್ಕೋ ವಿಶ್ವಪರಂಪರಾ ಪಟ್ಟಿಗೆ ಸೇರಿಸಿತು. ಸ್ಥಳೀಯರ ಅಭಿಪ್ರಾಯವನ್ನು ಕೇಳದೇ 1989 ರಲ್ಲಿ ಪುನಹ ಹಂಪಿ ಪ್ರಾಧಿಕಾರದ ಅಧಿಕಾರಿಗಳು ಪರಿಷ್ಕೃತವಾಗಿ 10 ಹಳ್ಳಿಯ ಬದಲು ಹೊಸಪೇಟೆ ಭಾಗದ 14 ಆನೆಗೊಂದಿ ಭಾಗದ 15 ಹಳ್ಳಿಗಳನ್ನು ಸೇರ್ಪಡೆ ಮಾಡಿ ಕೋರ್, ಬಪ್ಪರ್ ಮತ್ತು ಪೆರಿಪರಲ್ ವಲಯಗಳನ್ನು ಮಾಡಿ ಇಂತಿಷ್ಟು ಮೀಟರ್‌ಗಳಲ್ಲಿ ವಾಣಿಜ್ಯ ವ್ಯವಹಾರ ನಿಷೇಧ ಮಾಡಲಾಯಿತು.

ಇದನ್ನೂ ಓದಿ : ಸೀಮಂತ ಸಮಾರಂಭದ ವೇಳೆ ಸಿಲಿಂಡರ್ ಸ್ಫೋಟ 20 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಕಮಲಾಪೂರದಲ್ಲಿ ಶೇ.50 ಕಮರ್ಷಿಯಲ್ ಜೋನ್: ಇತ್ತೀಚೆಗೆ ಹೊಸಪೇಟೆ ತಾಲೂಕಿನ ಕಮಲಾಪೂರವನ್ನು ಶೇ.100 ರಷ್ಟಿದ್ದ ಕಮರ್ಷಿಯಲ್ ಜೋನ್ ತೆಗೆದು ಶೇ.50 ಕ್ಕೆ ನಿಗದಿ ಮಾಡಲಾಗಿದೆ. ಗಣಿಗಾರಿಕೆ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ಕಾರಿಗನೂರನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈ ಬಿಡಲಾಗಿದೆ. ಈಗಾಗಲೇ ವಿಶೇಷ ಪ್ರಕರಣ ಎಂದು ಹಂಪಿ ಭಾಗದಲ್ಲಿ 5ಕ್ಕೂ ಹೆಚ್ಚು ಕಾರ್ಪೋರೇಟ್ ಕಂಪನಿಯ ಐಶಾರಾಮಿ ರೆಸಾರ್ಟ್ ಹೊಟೇಲ್‌ಗಳಿಗೆ ಏಕಗವಾಕ್ಷ ಪದ್ಧತಿಯಂತೆ ಪ್ರವಾಸೋದ್ಯಮ ಇಲಾಖೆ ಪರವಾನಿಗೆ ನೀಡಿದೆ. ಆನೆಗೊಂದಿ ಭಾಗದ ಪೆರಿಪರಲ್ ಜೋನ್ ನಲ್ಲಿ ಹೊಟೇಲ್ ಆರಂಭಿಸಲು ಪ್ರಾಧಿಕಾರಕ್ಕೆ ಎನ್‌ಓಸಿ ಪಡೆಯಲು ಅರ್ಜಿ ಸಲ್ಲಿಸಿದರೂ ಅಲೆದಾಡಿಸಲಾಗುತ್ತಿದೆ. ಇದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹೊಸಪೇಟೆ ಭಾಗದ ಜನಪ್ರತಿನಿಧಿಗಳ ಕೈ ಮೇಲಾಗಿದ್ದು ಆನೆಗೊಂದಿ ಭಾಗದ ಜನರ ಗೋಳು ಕೇಳುವವರಿಲ್ಲ ಎನ್ನಲಾಗುತ್ತಿದೆ.

ಸ್ಥಳೀಯರ ಅಭಿಪ್ರಾಯವನ್ನು ಕೇಳದೇ ಅಂಜನಾದ್ರಿ ಪ್ರದೇಶದ ಅಭಿವೃದ್ಧಿ ಕುರಿತು ಸರಕಾರ ಬೆಂಗಳೂರು ಮಟ್ಟದಲ್ಲಿ ಸಭೆ ನಡೆಸುವುತ್ತಿರುವುದಕ್ಕೆ ಆನೆಗೊಂದಿ ಸ್ಥಳೀಯರು ಮತ್ತು ಚುನಾಯಿತರು ಆಕ್ಷೇಪವೆತ್ತಿದ್ದಾರೆ. ಈ ಹಿಂದೆ ಹಂಪಿ ಅಭಿವೃದ್ಧಿ ಪ್ರಾಧಿಕಾರ ರಚನೆಯ ಸಂದರ್ಭದಲ್ಲಿ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನಿಯಮಗಳನ್ನು ಹೇರಿದ್ದರಿಂದ ಆನೆಗೊಂದಿ ಭಾಗದ ಪ್ರವಾಸೋದ್ಯಮ ಇನ್ನೂ ಹಿಂದೆ ಬಿದ್ದಿದೆ. ಇದೀಗ ಅಂತರಾಷ್ಟಿçÃಯ ಮಟ್ಟದಲ್ಲಿ ಅಂಜನಾದ್ರಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಸರಕಾರ ಮುಂದಾಗಿದ್ದು ಹಂಪಿ ಅಭಿವೃದ್ಧಿ ಪ್ರಾಧಿಕಾರದ ಕೆಲ ಅವೈಜ್ಞಾನಿಕ ನಿಯಮಗಳಿಂದ ತೊಂದರೆಗೊಳಗಾಗಿರುವ ಗ್ರಾಮಗಳಿಗೆ ನಿಯಮಗಳಲ್ಲಿ ವಿನಾಯಿತಿ ನೀಡಬೇಕು. ಆನೆಗೊಂದಿ ರಾಜವಂಶಸ್ಥರೂ ಸೇರಿ ಸ್ಥಳೀಯರ ಅಭಿಪ್ರಾಯ ಪಡೆದು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕಿದೆ.

ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಮಲತಾಯಿ ಧೋರಣೆ ನಿರಂತರವಾಗಿದ್ದು ಹಂಪಿ ಭಾಗದಲ್ಲಿ ಹೋಟೇಲ್ ವ್ಯವಹಾರಗಳು ನಡೆಯುತ್ತಿವೆ. ಕಾರ್ಪೋರೇಟ್ ಕಂಪನಿಗಳ ಕೆಲ ಖಾಸಗಿ ರೆಸಾರ್ಟ್ಗಳು ಹೊಟೇಲ್‌ಗಳು ಭರ್ಜರಿಯಾಗಿ ನಡೆಯುತ್ತಿದ್ದು ಆನೆಗೊಂದಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರೂ ಅವರಿಗೆ ಮೂಲಸೌಕರ್ಯಗಳಿಲ್ಲ. ಇಲ್ಲಿ ಹೊಟೇಲ್ ಉದ್ಯಮವನ್ನು ವ್ಯವಸ್ಥಿತವಾಗಿ ನೆಪ ಹೇಳಿಕೊಂಡು ಮುಚ್ಚಲಾಗಿದೆ. ಕೆಲ ಜನಪ್ರತಿನಿಧಿಗಳು ಆನೆಗೊಂದಿ ಭಾಗಕ್ಕೆ ಆಗಮಿಸಿ ಶೀಘ್ರವೇ ನೂತನ ಮಾಸ್ಟರ್ ಪ್ಲಾನ್ ಪ್ರಕಟಿಸಲಾಗುತ್ತದೆ ಎಂದು ಹೇಳಿ ಹಂಪಿ ಭಾಗದಲ್ಲಿ ರಾಜಾರೋಷವಾಗಿ ಹೊಟೇಲ್ ನಡೆಸಲು ಅವಕಾಶ ಕಲ್ಪಿಸಿರುವುದು ಮಲತಾಯಿಧೋರಣೆಯಾಗಿದೆ. ಸರಕಾರ ಹಂಪಿ ಅಭಿವೃದ್ಧಿ ಪ್ರಾಧಿಕಾರದಿಂದ ಆನೆಗೊಂದಿ ಭಾಗವನ್ನು ಸಂಪೂರ್ಣವಾಗಿ ಕೈ ಬಿಡಬೇಕು.
-ತಿಮ್ಮಪ್ಪ ಬಾಳೆಕಾಯಿ ಅಧ್ಯಕ್ಷರು ಗ್ರಾ.ಪಂ. ಆನೆಗೊಂದಿ.

– ಕೆ.ನಿಂಗಜ್ಜ

ಟಾಪ್ ನ್ಯೂಸ್

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Gujarat: 700 ಕೆ.ಜಿ. ಡ್ರಗ್ಸ್‌ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್‌

ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ‌ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳುDelhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು

Suspended

Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.