Watch:ಪ್ರಿಯಕರನ ಮೇಲಿನ ಕೋಪಕ್ಕೆ 80 ಅಡಿ ಎತ್ತರದ ವಿದ್ಯುತ್ ಟವರ್ ಏರಿ ಕುಳಿತ ಪ್ರಿಯತಮೆ!
ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Team Udayavani, Aug 7, 2023, 12:35 PM IST
ಚತ್ತೀಸ್ ಗಢ: ಪ್ರಿಯಕರನ ಮೇಲೆ ಮುನಿಸಿಕೊಂಡ ಯುವತಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಶನ್ ವಿದ್ಯುತ್ ಟವರನ್ನು ಏರಿ ರಂಪಾಟ ನಡೆಸಿರುವ ಘಟನೆ ಚತ್ತೀಸ್ ಗಢದ ಗೌರೆಲಾ ಪೇಂದ್ರ ಮರ್ವಾಹಿ ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:Maharastra: ಉದ್ಧವ್ ಠಾಕ್ರೆ ನಿವಾಸದಲ್ಲಿತ್ತು ನಾಲ್ಕು ಅಡಿ ಉದ್ದದ ನಾಗರ ಹಾವು: ವಿಡಿಯೋ…
ಪ್ರಿಯಕರನ ಸಮಾಧಾನದ ಮಾತುಗಳನ್ನು ಕೇಳಿಸಿಕೊಳ್ಳದ ಪ್ರಿಯತಮೆ ಕೋಪದಿಂದ 80 ಅಡಿ ಎತ್ತರದ ವಿದ್ಯುತ್ ಟವರ್ ಅನ್ನು ಏರಿದ್ದು, ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಬಾಯ್ ಫ್ರೆಂಡ್ ಕೂಡಾ ಟವರ್ ಅನ್ನು ಏರತೊಡಗಿದ್ದು, ಈ ಘಟನೆ ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಬ್ಬರೂ ವಿದ್ಯುತ್ ಟವರ್ ಏರಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೇಂದ್ರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಘಟನೆ ಬಗ್ಗೆ ಯುವಕ ಮತ್ತು ಯುವತಿಯ ಕುಟುಂಬಸ್ಥರು ಕೂಡಾ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.
*Upset with lover, Girlfriend Climbs high Tension tower, then lover also climbs*
This is the first time I have seen someone climb them to commit suicide upset with her lover. Good news, the boyfriend followed her up and convinced her to climb down. All iz well Chhattisgarh today pic.twitter.com/oPqiK0EMpl
— keshaboina sridhar (@keshaboinasri) August 6, 2023
ವಿದ್ಯುತ್ ಟವರ್ ಏರಿರುವುದನ್ನು ಗಮನಿಸಿದ ನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಸ್ಥಳೀಯರು ನೆರೆದಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು. ದೀರ್ಘಕಾಲದ ಮಾತುಕತೆಯ ನಂತರ ಕೊನೆಗೂ ಇಬ್ಬರನ್ನೂ ಟವರ್ ನಿಂದ ಕೆಳಗಿಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Video: ಮೊಟ್ಟೆ ಕದ್ದು ಸಿಕ್ಕಿಬಿದ್ದರೇ ಶಾಲೆಯ ಪ್ರಾಂಶುಪಾಲರು…? ಇಲಾಖೆಯಿಂದ ನೊಟೀಸ್
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.