ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ..
Team Udayavani, Feb 22, 2023, 5:45 AM IST
ವಿಧಾನಸಭೆ: ನನ್ನ ಕ್ಷೇತ್ರದ ಮೇಲೆ ದೇವರಿಗೂ ಕೋಪ, ಸರ್ಕಾರಕ್ಕೂ ಕೋಪ. ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರಲಿದ್ದು, ಈ ಅವಧಿಯಲ್ಲಾದರೂ ಪ್ರೀತಿ ತೋರಿಸಿ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಮಾಡಿದ್ದಾರೆ.
ನನ್ನ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದ ರಸ್ತೆ ಹಾಳಾಗಿದ್ದು ದುರಸ್ತಿ ಆಗಬೇಕಿದೆ. ನೆರೆ ತಡೆ ಗೋಡೆ ನಿರ್ಮಾಣ ಮಾಡುವುದು ಸೇರಿದಂತೆ ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿನ ರಸ್ತೆ ಮತ್ತಿತರ ಮೂಲಸೌಕರ್ಯಗಳ ಅಭಿವೃದ್ಧಿಗೆ ಕಳೆದ 4 ವರ್ಷದಿಂದಲೂ ಅನುಮೋದನೆ ಕೊಡುತ್ತಲೇ ಇದ್ದಾರೆ. ಇದು ನನ್ನ ಕ್ಷೇತ್ರಕ್ಕೆ ಆದ ಅನ್ಯಾಯವಲ್ಲವೇ ಎಂದು ಪ್ರಶ್ನಿಸಿದರು.
ಬಳಿಕ ಉತ್ತರ ನೀಡಿದ ಸಚಿವ ಗೋವಿಂದ ಕಾರಜೋಳ, ಸರ್ಕಾರಕ್ಕೆ ನಿಮ್ಮ ಕ್ಷೇತ್ರದ ಮೇಲೆ ಕೋಪವಿಲ್ಲ. ಅಗತ್ಯ ಕ್ರಮಕೈಗೊಳ್ಳುವುದು. ಕೆಲವು ಕಡೆ ಮಲಪ್ರಭಾ ನದಿ ಒತ್ತುವರಿಯಾಗಿ ಕಾಲುವೆಯಂತಾಗಿದೆ. 80 ಮೀಟರ್ ಅಳತೆ ಇರುವ ನದಿ ಪಾತ್ರ ಕೆಲವು ಕಡೆ 30 ಮೀಟರ್‌ಗೆ ಇಳಿದಿದೆ. ಹೀಗಾಗಿ ಜನವಸತಿ ಇರುವ ಕಡೆ ನೀರು ಬರುತ್ತಿದೆ. ಇಂತಹ ಕಡೆ ತಡೆಗೋಡೆ ನಿರ್ಮಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.