ಉಗ್ರರ ಮೇಲೆ ಮತ್ತೂಂದು ಸರ್ಜಿಕಲ್ ಸ್ಟ್ರೈಕ್
ಎಲ್‌ಒಸಿಯಾಚೆಗಿನ ಉಗ್ರ ನೆಲೆ ಧ್ವಂಸ ; ದಾಳಿ ಚಿತ್ರೀಕರಿಸಿ ವೀಡಿಯೋ ಬಿಡುಗಡೆ
Team Udayavani, Apr 12, 2020, 6:00 AM IST
ಹೊಸದಿಲ್ಲಿ/ಜಮ್ಮು: ಗಡಿಯಲ್ಲಿ ಉಗ್ರರ ವಿರುದ್ಧದ ಆಪರೇಷನ್ “ರಂಡೋರಿ ಬೆಹಕ್’ ಕಾರ್ಯಚರಣೆಯಲ್ಲಿ ಪಾಲ್ಗೊಂಡ ಭಾರತೀಯ ವಿಶೇಷ ಪಡೆಯ ಐವರು ಕಮಾಂಡೋಗಳನ್ನು ಹತ್ಯೆ ಮಾಡಿದ್ದ ಪಾಕಿಸ್ಥಾನಿ ಉಗ್ರರ ವಿರುದ್ಧ ಭಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಗೆ ಸನಿಹದಲ್ಲಿದ್ದ ಪಾಕ್ ಆಕ್ರಮಿತ ಕಾಶ್ಮೀರ ನೆಲದಲ್ಲಿ ದಾಳಿ ನಡೆಸಿ ಉಗ್ರರ ಅಡಗು ದಾಣಗಳನ್ನು ಧ್ವಂಸಗೊಳಿಸಿದೆ.
ಕಮಾಂಡೋಗಳ ಸಾವಿಗೆ ಪ್ರತೀಕಾರ ತೀರಿಸಿ ಕೊಳ್ಳಲು ಕಾಯುತ್ತಿದ್ದ ಭಾರತೀಯ ಸೇನೆಯನ್ನು ಪಾಕ್ ಶುಕ್ರವಾರ ರಾತ್ರಿ ಕೆಣಕಿ ಚೆಕ್‌ಪೋಸ್ಟ್‌ಗಳ ಕಡೆಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿದ ಸೇನೆಯು ವಾಯು ದಾಳಿ ನಡೆಸಿ, ಎಲ್‌ಒಸಿ ಆಚೆ ಬದಿಯ ಉಗ್ರರ ಅಡಗುದಾಣಗಳನ್ನು ಧ್ವಂಸ ಗೊಳಿಸಿದೆ. ದಾಳಿಯನ್ನು ಡ್ರೋನ್ ಮೂಲಕ ಚಿತ್ರೀಕರಿಸಲಾಗಿದ್ದು ಅದರ ವೀಡಿಯೋ ಗಳನ್ನು ಬಿಡುಗಡೆ ಮಾಡಲಾಗಿದೆ.
ಬೊಫೋರ್ಸ್ ಹೊವಿಟ್ಜರ್, 105 ಎಂಎಂ ಫೀಲ್ಡ್ ಗನ್‌ಗಳನ್ನು ಈ ದಾಳಿಗಾಗಿ ಬಳಕೆ ಮಾಡಲಾಗಿದೆ. ದಾಳಿಯಿಂದ ಎಲ್‌ಒಸಿಯ ಆಚೆಗಿನ ವಲಯದಲ್ಲಿ ಭಾರೀ ಹಾನಿಯಾಗಿದೆ. ದೇಶದ ಸೇನಾ ಪಡೆಯಲ್ಲಿ ಸಾವುನೋವು ಸಂಭವಿಸಿಲ್ಲ ಎಂದು ಸೇನೆ ಖಚಿತಪಡಿಸಿದೆ.
ನಿಲ್ಲದ ಫೈರಿಂಗ್
ತನ್ನ ಕೇಂದ್ರಗಳು ನಾಶಗೊಂಡರೂ ಬುದ್ಧಿ ಕಲಿಯದ ಪಾಕ್ ಶನಿವಾರ ಪೂಂಛ… ಜಿಲ್ಲೆ ವ್ಯಾಪ್ತಿಯ ಎಲ್‌ಒಸಿ ವಲಯದಿಂದ ಗುಂಡು ಹಾರಿಸಿದೆ. ಇದಕ್ಕೆ ಮುನ್ನ ಬಾಲಾಕೋಟ್ ಮತ್ತು ಮೆಂಧರ್ ಸೆಕ್ಟರ್‌ಗಳಲ್ಲಿ ಪಾಕ್ ಫೈರಿಂಗ್‌ನಿಂದಾಗಿ ಹಲವಾರು ಮನೆಗಳು ಧ್ವಂಸಗೊಂಡಿವೆ. ಕಿರ್ನಿ ಮತ್ತು ಕಸ್ಬಾ ವಲಯದಲ್ಲಿ ಕೂಡ ಗುಂಡಿನ ಚಕಮಕಿ ನಡೆದಿದೆ.
ಎನ್‌ಕೌಂಟರ್
ಕುಲ್ಗಾಂವ್ ವಲಯದಲ್ಲಿ ಸೇನಾ ಪಡೆ ಗಳು ಮತ್ತು ಉಗ್ರರ ನಡುವೆ ಎನ್‌ಕೌಂಟರ್ ನಡೆದಿದೆ. ಆದರೆ ಉಗ್ರರು ಪರಾರಿ ಯಾಗಿದ್ದಾರೆ. ಸ್ಥಳದಿಂದ ಸುಧಾರಿತ ಸ್ಫೋಟಕಗಳ ತಯಾರಿಗೆ ಬೇಕಾದ ಅಪಾರ ಪ್ರಮಾಣದ ವಸ್ತುಗಳು, ಲೈಟ್ ಮೆಷಿನ್ ಗನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ.
ಮತ್ತೂಂದು ಬೆಳವಣಿಗೆಯಲ್ಲಿ ಜೈಶ್-ಎ- ಮೊಹಮ್ಮದ್ ಉಗ್ರ ಸಂಘಟನೆಗಾಗಿ ಕೆಲಸ ಮಾಡುವ ವ್ಯಕ್ತಿಯನ್ನು ಕುಪ್ವಾರ ಜಿಲ್ಲೆಯ ಹಂದ್ವಾರದಲ್ಲಿ ಬಂಧಿಸಲಾಗಿದೆ.
ಏನೇನು ಧ್ವಂಸ?
– ಉಗ್ರರ ಅಡಗುದಾಣಗಳು ಮತ್ತು ಲಾಂಚ್‌ಪ್ಯಾಡ್‌ಗಳು
– ಗಡಿಯತ್ತ ಗುರಿಯಿಡಲು ಉಗ್ರರು ಮಾಡಿಕೊಂಡ ಅಡಗುದಾಣಗಳು
– ಮದ್ದು ಗುಂಡುಗಳ ಸಂಗ್ರಹಾಗಾರಗಳು
ಕುಪ್ವಾರಾದ ಕೇರನ್ ಸೆಕ್ಟರ್ ನಲ್ಲಿ ಪಾಕ್ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಸೂಕ್ತ ಪ್ರತೀಕಾರ ಕೈಗೊಳ್ಳ ಲಾಗಿದೆ. ಶತ್ರುಗಳಿಗೆ ಅಪಾರ ನಷ್ಟ ಉಂಟು ಮಾಡಲಾಗಿದೆ.
– ಸೇನಾ ವಕ್ತಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.