ದೊಡ್ಡ ಮೊತ್ತ ಸಂಗ್ರಹಿಸಿ ಮಗುವಿನ ಪ್ರಾಣ ಉಳಿಸಿದ ವಿರಾಟ್ ದಂಪತಿ
Team Udayavani, May 26, 2021, 6:40 AM IST
ಮುಂಬಯಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ ದಂಪತಿ ಸಂಕಷ್ಟಕ್ಕೆ ಸಿಲುಕಿದ್ದ ಮುಗ್ಧ ಮಗುವಿನ ಪ್ರಾಣ ಉಳಿಸುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ.
ಅಯಾಂಶ್ ಎಂಬ ಪುಟ್ಟ ಮಗು ಬೆನ್ನುಮೂಳೆ ಕ್ಷೀಣತೆ ಕಾಯಿಲೆಯಿಂದ ಬಳಲುತ್ತಿತ್ತು. ಇದರ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿ ಮೌಲ್ಯದ ಔಷಧಿಯ ಅಗತ್ಯವಿತ್ತು. ಹೀಗಾಗಿ ಮಗುವಿನ ಪೋಷಕರು ಹಣ ಸಂಗ್ರಹಿಸಲು ಸಾಮಾಜಿ ಜಾಲತಾಣದಲ್ಲಿ ನೆರವು ಯಾಚಿಸಿದ್ದರು.
ಈ ವಿಷಯ ತಿಳಿದ ಕೊಹ್ಲಿ-ಅನುಷ್ಕಾ ಈ ಮೊತ್ತವನ್ನು ಸಂಗ್ರಹಿಸಿ ಮಗುವಿನ ಪೋಷಕರಿಗೆ ಸರಿಯಾದ ಸಮಯಕ್ಕೆ ಒದಗಿಸಿ ಮಗು ವಿನ ಪ್ರಾಣ ಉಳಿಸಿದ್ದಾರೆ. ಇವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಈ ಹಿಂದೆ ಕೊಹ್ಲಿ-ಅನುಷ್ಕಾ “ಕೇಟೊ’ ಅಭಿಯಾನದಡಿ ಕೊರೊನಾ ವಿರುದ್ಧದ ಹೊರಾಟಕ್ಕೆ 11 ಕೋಟಿ ರೂ. ಸಂಗ್ರಹಿ ಸಿದ್ದರು. ಜತೆಗೆ ಮಾಜಿ ಕ್ರಿಕೆಟ್ ಆಟಗಾರ್ತಿ ಶ್ರಾವಂತಿ ನಾಯ್ಡು ತಾಯಿಯ ಚಿಕಿತ್ಸೆಗೆ ಸ್ವತಃ ಕೊಹ್ಲಿ 6.77 ಲಕ್ಷ ರೂ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?