ಎಪಿಎಂಸಿ ಕಾಯ್ದೆ ಜಾರಿಗೆ ಅಸ್ತು
ಸ್ಥಳೀಯ ಮಾರುಕಟ್ಟೆ ಸಮಿತಿ ಅಧಿಕಾರ ಮೊಟಕು ಖಾಸಗಿಗೆ ರಹದಾರಿ
Team Udayavani, May 15, 2020, 5:55 AM IST
ಬೆಂಗಳೂರು: ತೀವ್ರ ವಿರೋಧದ ನಡುವೆಯೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು ಅಧ್ಯಾದೇಶದ ಮೂಲಕ ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸ್ಥಳೀಯ ಮಾರುಕಟ್ಟೆ ಸಮಿತಿಗಳ ಅಧಿಕಾರ ಮೊಟಕು, ಖಾಸಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳ ಸ್ಥಾಪನೆ ಮತ್ತು ಖಾಸಗಿ ಕಂಪೆನಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ಸರಕಾರದ 2017 ಮಾದರಿ ಕೃಷಿ ಉತ್ಪನ್ನ ಮತ್ತು ಜೀವನೋಪಾಯ ಮಾರುಕಟ್ಟೆ ಕಾಯ್ದೆಯಡಿ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂ ತ್ರಣ ಮತ್ತು ಅಭಿವೃದ್ಧಿ) (ತಿದ್ದುಪಡಿ) ಅಧ್ಯಾದೇಶ 2020ಕ್ಕೆ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಸಂಪುಟ ಸಭೆಯ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಚಿವ ಜೆ.ಸಿ. ಮಾಧು ಸ್ವಾಮಿ, ಕೇಂದ್ರ ಸರಕಾರವು ಮಾದರಿ ಕಾಯ್ದೆ ಕಳುಹಿಸಿತ್ತು. ರಾಜ್ಯ ಸರಕಾರವು ರೈತರ ಹಿತಕ್ಕೆ ಮಾರಕವಾಗದಂತೆ ಮುನ್ನೆಚ್ಚ ರಿಕೆ ವಹಿಸಿ ಎರಡು ಅಂಶಗಳಿಗೆ ಮಾತ್ರ ತಿದ್ದುಪಡಿ ತಂದು ಅಧ್ಯಾ ದೇಶದ ಮೂಲಕ ಜಾರಿಗೆ ತೀರ್ಮಾನಿಸಿದೆ ಎಂದರು.
ಏನೇನು ತಿದ್ದುಪಡಿ?
ಸ್ಥಳೀಯ ಸಮಿತಿ ಅಧಿಕಾರ ಮೊಟಕು ಈ ಮೊದಲು ರೈತ ತನ್ನ ವ್ಯಾಪ್ತಿ ಬಿಟ್ಟು ಬೇರೆಡೆ ಉತ್ಪನ್ನ ಮಾರಾಟ ಮಾಡಿದರೆ ಚುನಾಯಿತ ಸಮಿತಿಗೆ ನಿಯಂತ್ರಿಸುವ ಅಧಿಕಾರ ಇತ್ತು. ಆದರೆ ಈಗ ಸಮಿತಿಯ ಅಧಿಕಾರ ಕೇವಲ ಮಾರುಕಟ್ಟೆ ಒಳಗೆ ಮಾತ್ರ. ಆದರೆ ರಾಜ್ಯ ಮಟ್ಟದ ನಿರ್ದೇಶಕ ಮಂಡಳಿಗೆ ಪೂರ್ಣ ಪ್ರಮಾಣದ ಅಧಿಕಾರ ಇರುತ್ತದೆ. ಇದು ಎಲ್ಲವನ್ನೂ ನಿಯಂತ್ರಣ ಮಾಡಬಹುದಾಗಿದೆ.
ಖಾಸಗಿ ಮಾರುಕಟ್ಟೆಗೆ ಅವಕಾಶ
ಖಾಸಗಿ ಮಾರುಕಟ್ಟೆಗಳ ಸ್ಥಾಪನೆ ಮತ್ತು ಖಾಸಗಿ ಸಂಸ್ಥೆಗಳ ಪ್ರವೇಶಕ್ಕೆ ತಿದ್ದುಪಡಿ ಅವಕಾಶ ಕಲ್ಪಿಸಿದೆ. ಆದರೆ ಖಾಸಗಿ ಕಂಪೆನಿ ಅಥವಾ ಖಾಸಗಿ ಮಾರುಕಟ್ಟೆ ಸ್ಥಾಪಿಸುವವರು ಸೂಕ್ತ ಬ್ಯಾಂಕ್ ಖಾತರಿ, ಠೇವಣಿ, ರಾಜ್ಯ ಮಟ್ಟದ ಸಮಿತಿಯ ಅನುಮತಿ ಪಡೆಯುವುದು ಅಗತ್ಯ. ತೂಕ ಮತ್ತು ಅಳತೆ ಮತ್ತಿತರ ವಿಚಾರ, ಬೆಲೆ ನಿಗದಿ, ಪಾವತಿ ಅಕ್ರಮವಾದರೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯ ಸಮಿತಿಗೆ ಇರುತ್ತದೆ.
ರೈತರಿಗೆ ಏನು ಉಪಯೋಗ?
ಸರಕಾರದ ಪ್ರಕಾರ ರೈತ ತಾನು ಬೆಳೆದ ಉತ್ಪನ್ನವನ್ನು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ, ಖಾಸಗಿ ಮಾರುಕಟ್ಟೆಯಲ್ಲಿ ಅಥವಾ ಬೇರೆ ಎಲ್ಲಾದರೂ ತನಗೆ ಬೇಕಾದ ಕಡೆ ಮಾರಬಹುದು. ಇದರಿಂದ ಆತನಿಗೆ ತನ್ನ ಬೆಳೆ ಅಥವಾ ಉತ್ಪನ್ನವನ್ನು ತಾನು ಬಯಸಿದವರಿಗೆ ಮಾರಾಟ ಮಾಡುವ ಅವಕಾಶ ಇರುತ್ತದೆ. ಖಾಸಗಿಯವರು ರೈತನ ಹೊಲಕ್ಕೆ ಹೋಗಿ ಖರೀದಿಸಬಹುದು.
ಮಾರಕ ಏನು?
ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿರುವವರ ಪ್ರಕಾರ, ಖಾಸಗಿ ಕಂಪೆನಿಗಳು ಪ್ರವೇಶ ಮಾಡಿದರೆ ಪ್ರಾರಂಭದಲ್ಲಿ ರೈತರ ಉತ್ಪನ್ನಗಳಿಗೆ ಆಕರ್ಷಕ ಬೆಲೆಯ ರುಚಿ ತೋರಿಸಿ ಅನಂತರ ತಾವು ನಿಗದಿ ಪಡಿಸಿದ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಸಬಹುದು. ರೈತರಿಗೆ ತೂಕ ಮತ್ತು ಅಳತೆ, ಹಣ ಪಾವತಿಯಲ್ಲಿ ಸಮಸ್ಯೆಯಾದರೆ ದೂರು ಕೊಡಲು ರಾಜ್ಯ ಸಮಿತಿಯತ್ತ ನೋಡಬೇಕು. ಇದರಿಂದ ರೈತರಿಗೆ ಭವಿಷ್ಯದಲ್ಲಿ ತೊಂದರೆ ಇದೆ. ಸ್ಥಳೀಯ ಬೀದಿ ಬದಿ ವ್ಯಾಪಾರ, ಸಣ್ಣ ಪುಟ್ಟ ಮಾರುಕಟ್ಟೆ ಮುಚ್ಚಬೇಕಾಗುತ್ತದೆ.
ಸಮಾಧಾನದ ಅಂಶ
ಸಮಾಧಾನಕರ ಅಂಶ ಎಂದರೆ ರಾಜ್ಯ ಮಟ್ಟದ ನಿರ್ದೇಶಕ ಮಂಡಳಿ ಸಮಿತಿಯ ಅಧಿಕಾರ ಮೊಟಕುಗೊಳಿಸಿಲ್ಲ. ಖಾಸಗಿ ಕಂಪೆನಿ, ಮಾರುಕಟ್ಟೆ ಸ್ಥಾಪನೆಗೆ ಅನುಮತಿ ಪಡೆಯುವುದು, ಮೋಸವಾದರೆ ಮಧ್ಯಪ್ರವೇಶ ಅಧಿಕಾರ, ಬ್ಯಾಂಕ್ ಖಾತರಿ, ಠೇವಣಿ ಕಡ್ಡಾಯ ಮಾಡಿರುವುದು ಸಮಾಧಾನಕರ. ಆದರೆ ರಾಜ್ಯ ಸಮಿತಿಯ ಅಧಿಕಾರ ಯಾವ ಪ್ರಮಾಣ ಎಷ್ಟು ವ್ಯಾಪ್ತಿ ಎಂಬುದು ನಿಯಮಾವಳಿ ರಚನೆಯಾದ ಅನಂತರವೇ ಸ್ಪಷ್ಟತೆ ಸಿಗಲಿದೆ.
ಕಾರ್ಮಿಕ ಕಾಯ್ದೆ ತಿದ್ದುಪಡಿ ಮುಂದೂಡಿಕೆ
ವಿವಾದದ ಸ್ವರೂಪ ಪಡೆದಿದ್ದ “ಕಾರ್ಮಿಕ ಕಾಯ್ದೆ’ ತಿದ್ದುಪಡಿ ಕುರಿತು ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ಆಯಿತಾದರೂ ವಿರೋಧ ವ್ಯಕ್ತವಾದ ಕಾರಣ ಮುಂದೂಡಲಾಯಿತು. ಸಾಧಕ-ಬಾಧಕ ಅಧ್ಯಯನ, ಕಾರ್ಮಿಕ ಸಂಘಟನೆಗಳ ಜತೆ ಸಮಾಲೋಚನೆಯ ಅನಂತರ ಆ ಬಗ್ಗೆ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಯಿತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
MUST WATCH
ಹೊಸ ಸೇರ್ಪಡೆ
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.