Arkavathi: 25 ವರ್ಷಗಳ ಅಕ್ರಮ ಸುಪ್ರೀಂ ನ್ಯಾಯಮೂರ್ತಿಯವರಿಂದ ತನಿಖೆಯಾಗಲಿ: ಹರಿಪ್ರಸಾದ್
Team Udayavani, Sep 23, 2024, 1:32 AM IST
ಮಂಗಳೂರು: ಅರ್ಕಾವತಿ ಡಿನೋಟಿಫಿಕೇಶನ್ ಕುರಿತು ಯಾರೋ ವಿಚಾರಣೆ ಮಾಡಿದರೆ ಸಾಲದು. 25 ವರ್ಷಗಳಲ್ಲಿ ಏನೇನು ಅಕ್ರಮಗಳಾಗಿವೆ ಎಂಬ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ರವಿವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯವರಿಂದ ಸಂಪೂರ್ಣ ತನಿಖೆ ನಡೆದರೆ ಯಾವುದೇ ಪಕ್ಷದವರಿರಲಿ, ಎಲ್ಲವೂ ಹೊರಗೆ ಬರಲಿದೆ. ಯಾರೆಲ್ಲ ಎಷ್ಟು ಶುಭ್ರರು ಎಂಬುದು ಬಯಲಿಗೆ ಬರಲಿದೆ ಎಂದು ಹೇಳಿದರು. ಹಿಂದಿನ ಸರಕಾರದಲ್ಲಿ ಏನೇನು ನಡೆದಿದೆ ಎಂಬುದನ್ನು ಬಿಜೆಪಿಯವರು ಕೆದಕಿಕೊಂಡು ಬರುತ್ತಿದ್ದಾರೆ.
ಬೊಫೋರ್ಸ್ ಕೇಸ್ ಎಂದು 30 ವರ್ಷಗಳಿಂದ ಹೇಳಿಕೊಂಡು ಬಂದರು. ಕೆಲವು ರಾಜ್ಯಗಳಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕೆಲವು ಅಕ್ರಮಗಳನ್ನು ಸಕ್ರಮ ಮಾಡಿಕೊಂಡು ಬಂದಿದೆ. ಯಾವುದೇ ಸರಕಾರ ಇರಲಿ – ಕೂಲಂಕಷ ತನಿಖೆಯಾಗಲು ಸುಪ್ರೀಂಕೋರ್ಟ್ ನ್ಯಾಯಾಧೀಶರನ್ನು ನೇಮಕ ಮಾಡಿ ತನಿಖೆ ನಡೆಸಬೇಕು ಎಂದರು.
ಶಾಸಕ ಮುನಿರತ್ನ ಬಂಧನ ಪ್ರಕರಣ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣ ದ್ವೇಷ ರಾಜಕಾರಣವೋ, ಇನ್ನೊಂದೋ ಎಂಬುದು ಬದಿಗಿರಲಿ. ಇವೆಲ್ಲ ಸಾಂಕ್ರಾಮಿಕ ರೋಗದಂತೆ ಬಂದಿರುವುದು ನರೇಂದ್ರ ಮೋದಿ ಅವರಿಂದ. ಗುಜರಾತ್‌ನಲ್ಲಿ ಈ ಹಿಂದೆ ಇಂತಹ ಪ್ರಯೋಗ ನಡೆದಿತ್ತು ಎಂದರು.
ಸಭಿಕರ ಸಾಲಲ್ಲಿ ರಾಜಕಾರಣಿಗಳು!
ಪುರಭವನದಲ್ಲಿ ಎಂ.ಜಿ. ಹೆಗಡೆ ಅವರ ಆತ್ಮಕಥನ ಕೃತಿಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಬಿಡುಗಡೆ ಮಾಡಬೇಕಿತ್ತು. ಆದರೆ ಚುನಾವಣ ನೀತಿ ಸಂಹಿತೆ ಕಾರಣದಿಂದ ರಾಜಕಾರಣಿಗಳು ವೇದಿಕೆ ಹತ್ತದೆ ಸಭಿಕರ ಸ್ಥಾನದಲ್ಲೇ ಕೂರುವಂತಾಯಿತು. ಬಿ.ಕೆ. ಹರಿಪ್ರಸಾದ್ ಪುರಭವನಕ್ಕೆ ಆಗಮಿಸಿದ್ದರು. ಜತೆಗೆ ಮಾಜಿ ಸಚಿವ ರಮಾನಾಥ ರೈ, ವಿ.ಪರಿಷತ್ ಸದಸ್ಯ ಐವನ್ ಡಿ’ ಸೋಜಾ, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಶಕುಂತಳಾ ಶೆಟ್ಟಿ ಸಹಿತ ಅನೇಕ ಗಣ್ಯರಿದ್ದರು. ನೀತಿ ಸಂಹಿತೆ ನಿಯಮದಿಂದಾಗಿ ಎಲ್ಲರೂ ಸಭಿಕರ ಸ್ಥಾನದಲ್ಲಿ ಕುಳಿತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.