Talent: ಕಲೆ ಅನ್ನೋದು ಪ್ರತಿ ಒಬ್ಬರಲ್ಲೂ ಇರುತ್ತದೆ… ಅವಕಾಶಗಳನ್ನು ವರವನ್ನಾಗಿಸುವ…

ಸಾಂಸ್ಕೃತಿಕ ವೇದಿಕೆಗಳು ಇಂದಿಗೂ ಕೂಡ ಅದೆಷ್ಟೋ ಕಲಾವಿದರನ್ನೂ ಬೆಳಕಿಗೆ ತಂದಿದೆ.

Team Udayavani, Oct 12, 2024, 10:15 AM IST

Talent: ಕಲೆ ಅನ್ನೋದು ಪ್ರತಿ ಒಬ್ಬರಲ್ಲೂ ಇರುತ್ತದೆ… ಅವಕಾಶಗಳನ್ನು ವರವನ್ನಾಗಿಸುವ…

ಮಾನವ ಮೂಳೆ ಮಾಂಸದ ಹೊಂದಿಕೆ ಅನ್ನೊ ಮಾತನ್ನು ದಾಸರು ಎಷ್ಟೋ ದಶಕಗಳ ಹಿಂದೆಯೇ ಸಾರಿದ್ದಾರೆ. ಆದರೆ ಅದೇ ಮಾನವ ಸಾವಿರಾರು ಕಲೆಗಳ ಆಗರ ಕೂಡ ಹೌದು. ನಾಗರಿಕತೆ ಕಾಲದಿಂದ ಹಿಡಿದು ಇಂದಿನ ಕೃತಕ ಬುದ್ಧಿಮತ್ತೆ ವರೆಗೆ ಜಗತ್ತಿನಲ್ಲಿ ಆಗಿರುವ ಅನೇಕ ಬದಲಾವಣೆಗಳಿಗೆ ಮನುಷ್ಯನೇ ಮೂಲ ಕಾರಣ. ಹುಟ್ಟಿದ ಪ್ರತಿಯೊಬ್ಬ ಮನುಷ್ಯನು ತನ್ನದೇ ಆದ ಸ್ವಂತ ಕಲೆಯನ್ನು ಹೊಂದಿರುತ್ತಾನೆ. ಕೆಲವೊಂದು ರಕ್ತಗತವಾಗಿ ಬಂದಿದ್ದರೇ ಇನ್ನೂ ಕೆಲವು ದೈವ ಕೊಡುಗೆ ರೂಪದಲ್ಲಿ ಮನುಷ್ಯರಲ್ಲಿ ಅಡಕವಾಗಿರುತ್ತದೆ. ತನ್ನ ಶಕ್ತಿಗಳ ಅರಿವೇ ಇಲ್ಲದ ಹನುಮಂತನ ರೀತಿಯಲ್ಲಿ ಒಮ್ಮೊಮ್ಮೆ ನಮ್ಮ ಬದುಕು ಕೂಡ. ಹಾಗಾಗಿ ನಮ್ಮೊಳಗಿನ ಕಲೆಯನ್ನು ಹೊರ ತೆಗೆದು ಸ್ಫೂರ್ತಿ ನೀಡಲು ಜಾಂಬವಂತನ ರೀತಿ ಒಳ್ಳೆಯ ಸ್ನೇಹಿತನೋ, ಬಂದುವೋ, ಇಲ್ಲವೋ ಗುರುಗಳ ಅವಶ್ಯಕತೆ ಇರುತ್ತದೆ.

ನೃತ್ಯ, ಸಂಗೀತ, ಚಿತ್ರಕಲೆ, ಅಡುಗೆ, ಹೀಗೆ ಕಲೆಗಳ ವಿಸ್ತರಣೆ ಜಗತ್ತಿನಲ್ಲಿ ಒಂದೇ ಎರಡೇ. ಇತ್ತೀಚಿನ ದಿನಗಳಲ್ಲಿ ಬಹುಶಃ ಸಾಮಾಜಿಕ ಜಾಲತಾಣಗಳು ಇಂತಹ ಎಷ್ಟೋ ಕಲಾವಿದರ ಕಲೆಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಐದು ಬೆರಳು ಸಮವಲ್ಲ ಅನ್ನೋ ರೀತಿಯಲ್ಲಿ ಎಲ್ಲ ಮನುಷ್ಯರ ವ್ಯಕ್ತಿತ್ವ ಒಂದೇ ರೀತಿಯಲ್ಲಿ ರೂಪುಗೊಂಡಿರುವುದಿಲ್ಲ. ಕೆಲವೊಬ್ಬರು ಶೈಕ್ಷಣಿಕವಾಗಿ ಬುದ್ದಿವಂತರಾಗಿದ್ದರೆ ಇನ್ನು ಹಲವರು ಪಠ್ಯೇತರ ಚಟುವಟಿಕೆಯಲ್ಲಿ ಚುರುಕಾಗಿರುತ್ತಾರೆ. ಬರಿ ಪ್ರಾಥಮಿಕ ಶಿಕ್ಷಣವನ್ನಷ್ಟೇ ಪಡೆದಿದ್ದ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್‌ ಅವರು ಮರಣದ ಅನಂತರವು ಇಂದಿಗೂ ಜನಮಾನಸದಲ್ಲಿ ರಾಜಕುಮಾರನಾಗಿ, ವರನಟನಾಗಿ ಮಿನುಗುತ್ತಿದ್ದಾರೆ.

ಹತ್ತನೇ ತರಗತಿಯಲ್ಲಿ ಅನುತ್ತೀರ್ಣರಾದ ಸಚಿನ್‌ ತೆಂಡೂಲ್ಕರ್‌ ಇಂದು ಎಷ್ಟೋ ಕ್ರಿಕೆಟ್‌ ಪ್ರಿಯರಿಗೆ ಕ್ರಿಕೆಟ್‌ ಲೋಕದ ದೇವರಾಗಿದ್ದಾರೆ. ಶಿಕ್ಷಣ ಕೈಬಿಟ್ಟರೂ ಅಂತಿಮವಾಗಿ ಇವರೊಳಗೆ ಅಡಕವಾಗಿದ್ದ ಕಲೆ ಇವರ ಕೈಬಿಡಲಿಲ್ಲ. ಇಂತಹ ಅದೆಷ್ಟು ಉದಾಹರಣೆಗಳು ಈ ಸಮಾಜದಲ್ಲಿ ನಮ್ಮ ಕಣ್ಣ ಮುಂದೆ ಸಾಕಷ್ಟಿವೆ.

ಇನ್ನೂ ಪ್ರತಿಯೊಬ್ಬ ಕಲಾವಿದರ ಹಿಂದೆಯೂ ಅವರದ್ದೇ ಆದ ಅನೇಕ ಕಥೆಗಳಿರುತ್ತವೆ. ಯಾವ ಕಲಾವಿದನೂ ಒಮ್ಮಿದೊಮ್ಮೆಗೆ ಎತ್ತರದ ಸ್ಥಾನಕ್ಕೆ ತಲುಪಿರುವುದಿಲ್ಲ. ಗಣೇಶ ಚತುರ್ಥಿ ಮತ್ತಿತರ ಸಾರ್ವಜನಿಕ ಆಚರಣೆಗಳಲ್ಲಿನ ಸಾಂಸ್ಕೃತಿಕ ವೇದಿಕೆಗಳು ಇಂದಿಗೂ ಕೂಡ ಅದೆಷ್ಟೋ ಕಲಾವಿದರನ್ನೂ ಬೆಳಕಿಗೆ ತಂದಿದೆ.

ಇಂತಹ ವೇದಿಕೆಗಳನ್ನು ಸುದುಪಯೋಗ ಪಡಿಸಿಕೊಳ್ಳುವ ಮೂಲಕ ಅನೇಕ ಕಲಾವಿದರು ಉನ್ನತ ಮಟ್ಟದ ವೇದಿಕೆಗೆ ಏರಿರುವ ಉದಾಹರಣೆಗಳು ಸಾಕಷ್ಟಿವೆ. ಹಿಂದಿನ ಕಾಲದಲ್ಲಿ ಮನೆಯ ಒಳಗೆ ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಅದೇ ಎಷ್ಟೋ ಮಹಿಳೆಯರು ಇಂದು ಯೂಟ್ಯೂಬ್‌ ಚಾನೆಲ್‌, ಇನ್ಸ್ಟಾಗ್ರಾಮ್‌, ಫೇಸ್‌ಬುಕ್‌ ಪೇಜ್‌ಗಳ ಮೂಲಕ ತಮ್ಮ ಅಡುಗೆ ಕಲೆಗಳನ್ನು ಜಗತ್ತಿನ ಮುಂದೆ ಇಟ್ಟಿದ್ದಾರೆ. ಕಲೆ ಅನ್ನೊದು ಪ್ರತಿ ಒಬ್ಬರಲ್ಲೂ ಇರುತ್ತದೆ. ಆದರೆ ಅದನ್ನು ಪ್ರದರ್ಶಿಸಲು ಸರಿಯಾದ ವೇದಿಕೆಗಳು ಸಿಕ್ಕಿರುವುದಿಲ್ಲ ಅಷ್ಟೇ. ದೇವರು ವರವನ್ನು ಕೊಡುವುದಿಲ್ಲ ಶಾಪವನ್ನು ಕೊಡುವುದಿಲ್ಲ ಬದಲಾಗಿ ಅವಕಾಶಗಳನ್ನು ಕೊಡುತ್ತಾನೆ ಎಂಬ ಮಾತಿದೆ. ಹಾಗಾಗಿ ಅವಕಾಶಗಳನ್ನು ವರ ಅಥವಾ ಶಾಪ ಆಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

*ದಿವ್ಯಾ ದೇವಾಡಿಗ

ಟಾಪ್ ನ್ಯೂಸ್

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

2

Tragic: ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ

Hubli: BK Hariprasad licked the feet of fake Gandhis: Pralhad Joshi

Hubli: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

12-crime

Hagaribommanahalli: ಅನೈತಿಕ ಸಂಬಂಧ: ಯುವಕನ ಬರ್ಬರ ಕೊಲೆ; ಆರೋಪಿ ಪೊಲೀಸರಿಗೆ ಶರಣು

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Life: ಇತರರನ್ನು ಮೆಚ್ಚಿಸುವ ವ್ಯರ್ಥ ಪ್ರಯತ್ನವೇಕೆ?

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

Nature: ಸಮತೋಲಿತ ಅಭಿವೃದ್ಧಿಯೇ ಪ್ರಕೃತಿ ಉಳಿವಿಗೆ ಮುನ್ನುಡಿ

11-uv-fusion

Life: ಬಯಸಿದಂತೆಲ್ಲಾ ಇರುವುದಿಲ್ಲ ಬದುಕು

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Life: ಅನುಭವಗಳು ಬದುಕನ್ನು ಬದಲಾಯಿಸಬಲ್ಲದು…ಒಂದು ಅಭ್ಯಂಜನದ ಕಥನ!

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

Culture: ನಮ್ಮ ಸಂಸ್ಕೃತಿ, ಭಾಷೆಯನ್ನು ಮರೆಯದಿರೋಣ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

Nawanagar: ಶ್ರೀಮಂತ ರಾಜಮನೆತನದ ಉತ್ತರಾಧಿಕಾರಿಯಾದ ಟೀಂ ಇಂಡಿಯಾ ಮಾಜಿ ಆಟಗಾರ

1-aaa

Udupi;ಕೆಮ್ಮಣ್ಣು ಗಣಪತಿ ಸಹಕಾರಿ ವ್ಯವಸಾಯಕ ಸಂಘ ʼನಿʼ-ಶತಾಭಿವಂದನಂ

1

2025ಕ್ಕೆ ಬಾಲಿವುಡ್‌ಗೆ ಸೀಕ್ವೆಲ್‌ಗಳೇ ಜೀವಾಳ.. ಇಲ್ಲಿದೆ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿ

2

Tragic: ಕಾಮಗಾರಿ ವೇಳೆ ಗೋಡೆ ಕುಸಿತ; ಮಣ್ಣಿನಡಿ ಸಿಲುಕಿ 7 ಮಂದಿ ಕಾರ್ಮಿಕರು ಜೀವಂತ ಸಮಾಧಿ

Hubli: BK Hariprasad licked the feet of fake Gandhis: Pralhad Joshi

Hubli: ನಕಲಿ ಗಾಂಧಿಗಳ ಪಾದ ನೆಕ್ಕಿದವರು ಬಿ.ಕೆ ಹರಿಪ್ರಸಾದ್: ಪ್ರಲ್ಹಾದ ಜೋಶಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.