Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

ಎಐ ತಂತ್ರಜ್ಞಾನವು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ.

Team Udayavani, Sep 21, 2024, 12:09 PM IST

Artificial Intelligence: ಕೃತಕ ಬುದ್ಧಿಮತ್ತೆ ಕ್ರಾಂತಿ- ಹೊಸ ಸಂಗಾತಿ ಹೊಸ ಅವಕಾಶ!

ನಾವು ಇಂದು ದೈನಂದಿನ ಚಟುವಟಿಕೆಗಳ ಬಹುಭಾಗವನ್ನು ಆಧುನಿಕ ತಂತ್ರಜ್ಞಾನಗಳ ಮೂಲಕ ನಡೆಸುತ್ತಿದ್ದೇವೆ. ನಮ್ಮ ಎಲ್ಲ ಕೆಲಸಗಳಿಗೂ ಒಂದಲ್ಲ ಒಂದು ರೀತಿಯ ಸಾಧನಬೇಕು. ಅದರಲ್ಲಿ ಇತ್ತೀಚಿಗೆ ಹೊಮ್ಮಿಕೊಂಡಿರುವ ಕೃತಕ ಬುದ್ಧಿಮತ್ತೆ (Artificial Intelligence &AI) ನಮಗೆ ಅರಿವಿಲ್ಲದೆಯೇ ನಮ್ಮ ಸುತ್ತ ಆವರಿಸಿಕೊಂಡಿದೆ.

ನಾವು ಯಾವುದೋ ವಸ್ತುವನ್ನು ಖರೀದಿಸಬೇಕೆಂದು ಯೋಚಿಸುತ್ತಿರುವಾಗಲೇ ಅದು ಟಿವಿಯಲ್ಲಿ ಬರಲು ಶುರುವಾಗುತ್ತದೆ. ನಾವು ಯಾವುದೋ ಪ್ರವಾಸಿಧಾಮದ ಬಗ್ಗೆ ಗೂಗಲ್‌ನಲ್ಲಿ ತಿಳಿದುಕೊಳ್ಳಲು ಪ್ರಯತ್ನಿಸಿತ್ತುರುವಾಗಲೇ, ಆ ಸ್ಥಳದ ಬಗ್ಗೆ ಹತ್ತಾರು ಜಾಹೀರಾತುಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ. ಇದೆಲ್ಲ ಹೇಗೆ ಸಾಧ್ಯ? ಇದನ್ನೆಲ್ಲ ಸಾಧಿಸಲು “ಎಐ’ ಎಂಬ ತಾಂತ್ರಿಕತೆ ನಮಗೇ ತಿಳಿಯದಂತೆ ಹಿನ್ನಲೆಯಲ್ಲಿ ಕಾರ್ಯನಿರ್ವಹಿಸುತ್ತಿರುತ್ತದೆ. ಈ ತಾಂತ್ರಿಕತೆ ನಮಗೆ ಕಣ್ಣಿಗೆ ಕಾಣಿಸದಿದ್ದರೂ, ಇದರ ಮಹತ್ವವನ್ನು ನೀವು ಎಲ್ಲೆಂದರಲ್ಲಿ ಕಂಡುಕೊಳ್ಳಬಹುದು.

ಇಂದಿನ ಕಾಲದಲ್ಲಿ ಮಕ್ಕಳಿಂದ ವಯೋವೃದ್ಧರ ವರೆಗೆ, ಅವಿದ್ಯಾವಂತರಿಂದ ಸುಶಿಕ್ಷಿತರ ವರೆಗೆ, ಎಲ್ಲರೂ ಯಾವುದೋ ಒಂದು ಕಾರಣಕ್ಕಾಗಿ “ಎಐ’ ಶಬ್ದವನ್ನು ತಮ್ಮ ಸಂಭಾಷಣೆಯಲ್ಲಿ ಬಳಸುತ್ತಿರುವುದು ಸಾಮಾನ್ಯವಾಗಿದೆ. ಟಿವಿಯಲ್ಲಿ ಏನಾದರೂ ಅರ್ಥವಾಗದ ವಿಷಯ ಬಂದಾಗ ಅಥವಾ ಮೊಬೈಲ್‌ನಲ್ಲಿ ಯಾವದೋ ವಿವರಿಸಲು ಕಷ್ಟವಾದ ವಿಷಯ ಎದುರಾಗಿದಾಗ, ನಾವು “ಎಐ’ ಶಬ್ದವನ್ನು ಬಳಸುವುದು ಸರ್ವೇಸಾಮಾನ್ಯವಾಗಿದೆ. ಹಾಗಾದರೆ ಏನಿದು ಎಐ?

ಎಐ ಅಂದರೆ ಏನು?
AI (Artificial Intelligence)ಎಂದರೆ ಯಂತ್ರಗಳು ಅಥವಾ ಕಂಪ್ಯೂಟರ್‌ ಕಾರ್ಯಕ್ರಮಗಳು, ಮಾನವ ಬುದ್ಧಿಮತ್ತೆಯನ್ನು ಹೋಲಿಸುವ ಅಥವಾ ಅನುಕರಿಸುವ ಸಾಮರ್ಥ್ಯ ಹೊಂದಿರುವ ಕಂಪ್ಯೂಟರ್‌ ವ್ಯವಸ್ಥೆಗಳು. ಎಐ ತಂತ್ರಜ್ಞಾನವು ಯಂತ್ರಗಳಿಗೆ ಮಾಹಿತಿ ಆಧಾರಿತ ನಿರ್ಣಯಗಳು ತೆಗೆದುಕೊಳ್ಳುವ ಸಾಮರ್ಥ್ಯ, ಸಮಸ್ಯೆಗಳನ್ನು ಪರಿಹರಿಸುವ ಕ್ಷಮತೆಯನ್ನು ಮತ್ತು ಮನುಷ್ಯರಂತೆ ಆಲೋಚಿಸುವ ಸಾಮರ್ಥ್ಯವನ್ನು ಒದಗಿಸುತ್ತದೆ. ಉದಾಹರಣೆಗೆ, ನಿಮ್ಮ ಮೊಬೈಲ್‌ನಲ್ಲಿ ನಿಮಗೆ ಬೇಕಾದ ಸಮಾಚಾರ ಅಥವಾ ಸಂಗೀತವನ್ನು ಶಿಫಾರಸು ಮಾಡುವ ಚಿಕ್ಕ ಕಾರ್ಯಕ್ರಮಗಳು (ಆ್ಯಪ್ಸ್‌) ಎಐ ಬಳಸಿ ಕಾರ್ಯನಿರ್ವಹಿಸುತ್ತವೆ.

ಎಐ ಆರೋಗ್ಯ, ಶಿಕ್ಷಣ, ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಸಹ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. ಉದಾಹರಣೆಗೆ, ವೈದ್ಯರು ಎಐ ಆಧಾರಿತ ಉಪಕರಣಗಳಿಂದ ರೋಗಿಗಳನ್ನು ನಿರ್ವಹಿಸುತ್ತಿದ್ದಾರೆ. ವೈದ್ಯರು MRI ಅಥವಾ CT scan ಗಳನ್ನು ಪರಿಶೀಲಿಸುವಾಗ, ಎಐ ಆಧಾರಿತ ಸಾಧನಗಳು ಇಮೇಜ್‌ಗಳನ್ನು ವೇಗವಾಗಿ ವಿಶ್ಲೇಷಿಸಿ, ಕ್ಯಾನ್ಸರ್‌ ಅಥವಾ ಇತರ ರೋಗಗಳ ಅತೀ ಸೂಕ್ಷ್ಮ ಲಕ್ಷಣಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಇದು ವೈದ್ಯರು ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ರೋಗನಿರ್ಣಯ ಮಾಡಲು ಸಹಾಯ ಮಾಡುತ್ತದೆ, ಮತ್ತು ರೋಗಿಗೆ ಸೂಕ್ತವಾದ ಚಿಕಿತ್ಸೆ ನೀಡಲು ಹೆಚ್ಚಿನ ಸಮಯವನ್ನು ನೀಡುತ್ತದೆ.

ಇನ್ನೊಂದು ಉದಾಹರಣೆಯೆಂದರೆ, ಸಾಧನಗಳು ಎಐ ಅನ್ನು ಬಳಸಿಕೊಂಡು ನಿಮ್ಮ ಮನೆಯ ಉಷ್ಣತೆಯನ್ನು ಸ್ವಯಂಚಾಲಿತವಾಗಿ ನಿರ್ವಹಿಸಬಹುದು. ಹೀಗೆ ಮಾಡುತ್ತಿರುವಾಗ, ಈ ಸಾಧನಗಳು ನಿಮ್ಮ ದಿನಚರಿಯನ್ನು ಕಲಿಯುತ್ತವೆ ಮತ್ತು ನೀವು ಮನೆಯಲ್ಲಿಲ್ಲದ ಸಮಯದಲ್ಲಿ ತಾಪಮಾನವನ್ನು ಕಡಿಮೆ ಮಾಡುತ್ತವೆ. ನೀವು ಮನೆಗೆ ಬರಲು ಮುನ್ನವೇ ಮನೆಗೆ ಸೂಕ್ತ ಉಷ್ಣತೆ ಸೃಷ್ಟಿಸಬಹುದು. ಇದರಿಂದ ನಿಮ್ಮ ಮನೆ ವಾತಾವರಣವನ್ನು ಹೆಚ್ಚು ಆರಾಮದಾಯಕವಾಗಿಸಿ ವಿದ್ಯುತ್‌ ಬೆಲೆಯನ್ನೂ ಕಡಿಮೆ ಮಾಡಬಹುದು.

ನಮ್ಮ ದೈನಂದಿನ ಜೀವನದಲ್ಲಿನ ಮತ್ತಷ್ಟು ಉದಾಹರಣೆಗಳನ್ನು ನೋಡುವುದಾದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಧ್ವನಿ ಸಹಾಯಕ (ಅಂತರ್ಜಾಲದ ಮೂಲಕ) ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಎಐ ಬಳಸುತ್ತದೆ. ನೀವು ಪ್ರಯಾಣಿಸಿತ್ತುರುವಾಗ ಗೂಗಲ್‌ ಮ್ಯಾಪ್ಸ್‌ ನಿಮ್ಮ ಪ್ರಯಾಣದ ದಾರಿಯನ್ನು ಯೋಜಿಸಲು ಮತ್ತು ಟ್ರಾಫಿಕ್‌ ಮುನ್ಸೂಚನೆಗಳನ್ನು ನೀಡಲು ಎಐ ಬಳಸುತ್ತದೆ. ನೀವು ಚಲನಚಿತ್ರ ನೋಡುವಾಗ ನಿಮ್ಮ ವೀಕ್ಷಣಾ ಇತಿಹಾಸವನ್ನು ಆಧರಿಸಿ, ನೀವು ಇಷ್ಟಪಡುವ ಶೋಗಳನ್ನು ಶಿಫಾರಸು ಮಾಡುತ್ತದೆ. ನೀವು ಫೋಟೋ ತೆಗೆಯುವಾಗ ಸ್ಮಾರ್ಟ್‌ಫೋನ್‌ ಕೆಮರಾ ಎಐ ಸಹಾಯದಿಂದ, ಉತ್ತಮ ಚಿತ್ರಗಳನ್ನು ತೆಗೆಯಲು, ಮುಖ ಗುರುತಿಸಲು ಮತ್ತು ಚಿತ್ರದ ಗುಣಮಟ್ಟವನ್ನು ತಿದ್ದಲು ನೆರವಾಗುತ್ತದೆ. ನೀವು ಖರೀದಿಸುತ್ತಿರುವಾಗ, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ನಿಮ್ಮ ಖರೀದಿಯ ಆವಶ್ಯಕತೆಗಳಿಗೆ ಸರಿಯಾದ ಉತ್ಪನ್ನಗಳನ್ನು ಶಿಫಾರಸ್ಸು ಮಾಡಲು ಎಐ ಬಳಸುತ್ತಾರೆ. ಹೌದು ಎಐ (ಕೃತಕ ಬುದ್ಧಿಮತ್ತೆ) ನಿಮ್ಮ ಎಲ್ಲ ಚಟುವಟಿಕೆಗಳಿಂದಲೂ ನಿರಂತರವಾಗಿ ಕಲಿಯುತ್ತಿರುತ್ತದೆ. ನಿಮ್ಮ ಬಗ್ಗೆ ತಿಳಿದುಕೊಳ್ಳುತ್ತದೆ.

ಎಐ ಯಂತ್ರಗಳು ತಜ್ಞರಾಗುವುದು ಹೇಗೆ?
ಎಐ (ಕೃತಕ ಬುದ್ಧಿಮತ್ತೆ) ಯಂತ್ರಗಳು ಯಾವುದೇ ವಿಷಯದಲ್ಲಿ ತಜ್ಞರಾಗುವುದು ಹೇಗೆಂದು ನೋಡೋಣ. ಮೊದಲಿಗೆ ಪ್ರತಿಯೊಂದು ವಿಷಯಗಳಲ್ಲೂ ಈ ಯಂತ್ರಗಳಿಗೆ ಬಹಳಷ್ಟು ಮಾಹಿತಿಯನ್ನು ನೀಡಲಾಗುತ್ತದೆ. ಈ ಮಾಹಿತಿಯನ್ನು ಯಂತ್ರಗಳು ಮತ್ತೆ ಮತ್ತೆ ವಿಶ್ಲೇಷಿಸುತ್ತವೆ. ಇದು ಮನುಷ್ಯರು ಪ್ರಶ್ನೆಗಳನ್ನು ಕೇಳಿ ಕಲಿಯುವ ರೀತಿಯಂತೆಯೇ. ಪ್ರತೀ ಬಾರಿ, ಯಂತ್ರಗಳು ಎಲ್ಲ ವಿಷಯಗಳಲ್ಲೂ ಹೊಸಹೊಸ ಮಾದರಿಗಳನ್ನು ಅರ್ಥಮಾಡಿಕೊಳ್ಳುತ್ತವೆ ಮತ್ತು ಅದು ಎಷ್ಟು ಹೆಚ್ಚಾಗಿ ಕಲಿಯುತ್ತವೋ, ಅಷ್ಟು ಹೆಚ್ಚು ತಜ್ಞರಾಗುತ್ತವೆ. ಈ ನಿರಂತರ ಕಲಿಕೆಯ ಪ್ರಕ್ರಿಯೆ ಯಂತ್ರಗಳನ್ನು ಆ ವಿಷಯದ ಕುರಿತು ನಿಖರವಾದ ನಿರ್ಣಯಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ, ಇದರಿಂದಾಗಿ ಅವು ತಜ್ಞರಾಗುತ್ತವೆ.

ಎಐ ಯಂತ್ರಗಳು ನಾವು ಅವುಗಳಿಗೆ ಕಲಿಸುವುದಕ್ಕಿಂತ ಹೆಚ್ಚಾಗಿ ಕಲಿಯುತ್ತವೆ. ಈ ಯಂತ್ರಗಳು ಈ ರೀತಿ ನಿರಂತರವಾಗಿ ಕಲಿಯುತ್ತಾ, ಕೆಲವೆಲ್ಲ ಸಂದರ್ಭಗಳಲ್ಲಿ ಮನುಷ್ಯರನ್ನು ಹೋಲಿಸಿದರೆ ಹೆಚ್ಚು ನಿಖರವಾಗಿ ಮತ್ತು ವೇಗವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಷ್ಟು ತಜ್ಞರಾಗುತ್ತವೆ.

ಏನಪ್ಪಾ ಹೀಗೆ ಎಂದು ಚಿಂತೆಯಾಗುತ್ತದಯೇ? ನಾವು ತುಂಬಾ ಚಿಂತೆಪಡುವ ಅಗತ್ಯವಿಲ್ಲ, ಏಕೆಂದರೆ ಎಐ ತಂತ್ರಜ್ಞಾನವು ನಮ್ಮನ್ನು ಸಂಪೂರ್ಣವಾಗಿ ಬದಲಾಯಿಸಲಾಗದು. ಎಐ ಕೆಲವು ಕೆಲಸಗಳಲ್ಲಿ ಮಾನವನಿಗಿಂತ ಹೆಚ್ಚು ಪರಿಣಾಮಕಾರಿಯಾಗಬಹುದು ಆದರೆ ಮನುಷ್ಯರಂತೆ ಭಾವನೆಗಳನ್ನು ಅನುಭವಿಸಲು ಅಥವಾ ನೈತಿಕತೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಭಾವನೆಗಳು, ಸೃಜನಶೀಲತೆ ಮತ್ತು ಮೌಲ್ಯಗಳನ್ನು ಎಐ ಕಲಿಯಲಾಗುವುದಿಲ್ಲ.

ಈ ಅಂಶಗಳು ನಮ್ಮನ್ನು ವಿಶಿಷ್ಟವಾಗಿರಿಸುತ್ತವೆ ಮತ್ತು ಎಐ ನಮ್ಮ ಮಾನವೀಯ ಅಂಶಗಳನ್ನು ಪೂರ್ಣವಾಗಿ ಬದಲಾಯಿಸಲು ಸಾಧ್ಯವಾಗುವುದಿಲ್ಲ (ಸದ್ಯಕ್ಕೆ). ಎಐ ನಮ್ಮ ಕೆಲಸಗಳನ್ನು ಕಸಿದುಕೊಂಡುಬಿಡುವುದೇ? ಪರಿಹಾರವೇನು? ಎಲ್ಲ ಉತ್ಪ್ರೇಕ್ಷೆಯೇ? ಹೀಗೆ ಎಐ ಕುರಿತು ಬಹಳಷ್ಟು ಚರ್ಚೆಗಳು ನಡೆಯುತ್ತಿವೆ, ಇದರ ಬಗ್ಗೆ ನಮ್ಮಲ್ಲಿ ಹಲವರಿಗೆ ಖಚಿತ ಭರವಸೆ ಇಲ್ಲ. ಏಕೆಂದರೆ ಎಐ ಮೇಲಿನ ಹೆಚ್ಚು ಅವಲಂಬನೆಯಿಂದ ನಮ್ಮ ಉದ್ಯೋಗಗಳು ನಶಿಸಬಹುದು ಎಂಬ ಭಯವಿದೆ. ಇನ್ನೊಂದು ಪಕ್ಕದಲ್ಲಿ, ಎಐ ಬೆಳೆಯುತ್ತಾ ಹೋದಂತೆ, ಇದು ನಮ್ಮ ಜೀವನದ ವಿವಿಧ ಅಂಶಗಳಲ್ಲಿ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಕುತೂಹಲ ಕೂಡ ಹೆಚ್ಚುತ್ತಿದೆ. ಇವೆಲ್ಲದರ ನಡುವೆ, ಎಐನ ಪ್ರಭಾವವನ್ನು ನಾವು ಅತೀಯಾಗಿ ಚಿಂತಿಸುತ್ತಿದ್ದೇವೆ ಎಂಬ ಪ್ರಶ್ನೆಯೂ ಮೂಡುತ್ತದೆ. ಎಐನ ಪ್ರಗತಿ ನಿಜಕ್ಕೂ ನಮ್ಮ ಭವಿಷ್ಯವನ್ನು ಬದಲಾಯಿಸಬಹುದೇ ಅಥವಾ ಇದು ಕೇವಲ ಒಂದು ಹೆಚ್ಚುವರಿ ಪ್ರಚಾರ (ಹೈಪ್‌) ಆಗಿದೆಯೇ?

ಉದ್ಯಮಗಳಲ್ಲಿ ಕಂಪ್ಯೂಟರ್‌ ಆಧಾರಿತ ಲೆಕ್ಕಪತ್ರ ನಿರ್ವಹಣೆ, ಮಾಹಿತಿಯ ವಿಶ್ಲೇಷಣೆ, ಮತ್ತು ಶ್ರಮದಾಯಕ ಲೆಕ್ಕಪತ್ರ ಕಾರ್ಯಗಳು ಎಐ ಆಧಾರಿತ ವ್ಯವಸ್ಥೆಗಳಿಂದ ಸ್ವಯಂಚಾಲಿತಗೊಳ್ಳುತ್ತಿರುವುದರಿಂದ, ಈ ಕೆಲಸಗಳಲ್ಲಿ ಉದ್ಯೋಗದ ಅಗತ್ಯ ಕಡಿಮೆಯಾಗಬಹುದು. ಇನ್ನು ಒಂದು ಉದಾಹರಣೆಗೆ , ರಿಟೇಲ್‌ ಮತ್ತು ಗ್ರಾಹಕ ಸೇವಾ ಕ್ಷೇತ್ರದಲ್ಲಿ, ಎಐ ಆಧಾರಿತ ಚಾಟ್‌ಬಾಟ್‌ಗಳು ಮತ್ತು ಸ್ವಯಂಚಾಲಿತ ಗ್ರಾಹಕ ಸೇವಾ ವ್ಯವಸ್ಥೆಗಳು, ಗ್ರಾಹಕರೊಂದಿಗೆ ಸಂವಹನ ಮಾಡುವುದರಿಂದ ಈ ವೃತ್ತಿಗಳಲ್ಲಿ ಕೆಲಸದ ಆವಶ್ಯಕತೆ ಕಡಿಮೆಯಾಗಬಹುದು.

ಆದರೆ ಸಮಾಧಾನಕರ ಸಂಗತಿಯೆಂದರೆ, ಎಐಯು ಹೊಸ ವೃತ್ತಿ ಮತ್ತು ಕೆಲಸದ ಅವಕಾಶಗಳನ್ನು ಸೃಷ್ಟಿಸುತ್ತದೆ. ಹೊಸ ತಂತ್ರಜ್ಞಾನಗಳನ್ನು ರಚಿಸಲು ಮತ್ತು ನಿರ್ವಹಿಸಲು ಅನುಭವವಿರುವ ವೃತ್ತಿಪರರು ಹೆಚ್ಚು ಆವಶ್ಯಕರಾಗುತ್ತಾರೆ.
ಎಐ ತಂತ್ರಜ್ಞಾನವು ಅನೇಕರಿಗೆ ಕೆಲಸದ ಅವಕಾಶಗಳನ್ನು ಸೃಷ್ಟಿಸಬಲ್ಲದು. ಎಐಯನ್ನು ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಹೆಚ್ಚಿನ ತಂತ್ರಜ್ಞರು, ಡೇಟಾ ವಿಜ್ಞಾನಿಗಳು ಮತ್ತು ಅಭಿಯಂತರರು ಬೇಕಾಗುತ್ತಾರೆ.

ಎಐ ತಂತ್ರಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಮತ್ತು ಬಳಸಲು ನಿಪುಣತೆಯ ತಜ್ಞರು ಅಗತ್ಯವಿರುತ್ತಾರೆ. ಇದಲ್ಲದೆ ಎಐ ಸಂಬಂಧಿತ ವೃತ್ತಿಪರ ತರಬೇತಿ ಮತ್ತು ಶಿಕ್ಷಣಕ್ಕಾಗಿ ಅಧ್ಯಾಪಕರು ಮತ್ತು ತರಬೇತುದಾರರು ಅಗತ್ಯವಿದ್ದಾರೆ. ಎಐ ಮೂಲಕ ಹೊಸ ಉದ್ಯಮಗಳು, ಸ್ಟಾರ್ಟ್‌ಅಪ್‌ಗ್ಳು ಮತ್ತು ಸೇವಾ ಸಂಸ್ಥೆಗಳು ಹುಟ್ಟಿಕೊಂಡು, ಹೆಚ್ಚಾದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯೂ ಇದೆ.

ಎಐ ತಂತ್ರಜ್ಞಾನವು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಇದರಿಂದ ಕೆಲವೊಂದು ಕೆಲಸಗಳು ಬದಲಾಗಬಹುದು, ಆದರೆ ಹೊಸ ಉದ್ಯೋಗದ ಅವಕಾಶಗಳನ್ನೂ ಸೃಷ್ಟಿಸುತ್ತಿದೆ. ಎಐಯನ್ನು ಬುದ್ಧಿಮತ್ತೆಯಿಂದ ಬಳಸುವುದು ಮತ್ತು ಅದರ ಕೌಶಲಗಳನ್ನು ಬೆಳೆಸುವುದು ಭವಿಷ್ಯದಲ್ಲಿ ನಮ್ಮ ಯಶಸ್ಸಿನ ಕೀಲಿಕೈ ಆಗಿರುತ್ತದೆ. ಎಐನಿಂದ ಬರುವ ಸುಧಾರಣೆಗಳನ್ನು ಸಮರ್ಥವಾಗಿ ಬಳಸಿದಾಗ, ನಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಇದು ಮಹತ್ವದ ಪಾತ್ರವಹಿಸಬಹುದು.

*ತುರುವೇಕೆರೆ ಮಂಜುನಾಥ, ಮಿಲ್ಟನ್‌ಕೇನ್ಸ್‌

ಟಾಪ್ ನ್ಯೂಸ್

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.