ದೇಶದೆಲ್ಲೆಡೆ ಕಲಾರಾಧಕರು! ಪದವಿಯಲ್ಲಿ ಕಲಾ ವಿಭಾಗಕ್ಕೆ ಸೇರುವವರೇ ಹೆಚ್ಚು
Team Udayavani, Jun 13, 2021, 6:55 AM IST
ಸಾಂದರ್ಭಿಕ ಚಿತ್ರ ಬಳಸಲಾಗಿದೆ
ಬೆಂಗಳೂರು : ಇಂದಿಗೂ ಉನ್ನತ ಶಿಕ್ಷಣದಲ್ಲಿ ಕಲಾ ಮಾಧ್ಯಮಕ್ಕೇ ಹೆಚ್ಚಿನ ಬೇಡಿಕೆ…!
– ಇದು ಕೇಂದ್ರ ಶಿಕ್ಷಣ ಇಲಾಖೆ ನಡೆಸಿದ ಅಖೀಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ (ಎಐಎಸ್‌ಎಚ್)ಯ ಪ್ರಮುಖ ಅಂಶ. ದೇಶದಲ್ಲಿ ಪಿಯುಸಿ ಮುಗಿಸಿದ ಬಹುತೇಕ ವಿದ್ಯಾರ್ಥಿಗಳು ಇಂದಿಗೂ ಪದವಿಗಾಗಿ ಆರಿಸಿಕೊಳ್ಳುವುದು ಬಿಎ. 2019-20ರಲ್ಲಿ ಬಿಎ ಮುಗಿಸಿದ ವಿದ್ಯಾರ್ಥಿಗಳ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು. ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಬಿಎಗೆ ಸೇರುವವರ ಸಂಖ್ಯೆ ಮತ್ತು ಮುಗಿಸಿದವರ ಸಂಖ್ಯೆ ಹೆಚ್ಚಾಗಿದೆ.
ಸ್ನಾತಕೋತ್ತರದಲ್ಲೂ ಎಂಎಯನ್ನು ಆರಿಸಿಕೊಳ್ಳುವವರೇ ಹೆಚ್ಚು. ಬಳಿಕದ ಸ್ಥಾನಗಳಲ್ಲಿ ಎಂಎಸ್ಸಿ), ಎಂಬಿಎ, ಎಂಕಾಂ, ಎಂಟೆಕ್ ವಿಭಾಗಗಳಿವೆ ಎಂದು ಈ ಸಮೀಕ್ಷೆ ತಿಳಿಸಿದೆ. ಹಾಗೆಯೇ ಪಿಎಚ್‌ಡಿ ಮಾಡುವವರಲ್ಲಿ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಭಾಗದವರೇ ಹೆಚ್ಚು. ಅನಂತರದಲ್ಲಿ ವಿಜ್ಞಾನ ವಿಭಾಗದವರು ಇದ್ದಾರೆ.
ಕೇಂದ್ರ ಸರಕಾರದ ಈ ಸಮೀಕ್ಷೆಯಲ್ಲಿ ಕಾಲೇಜುಗಳಿಗೆ ವಿದ್ಯಾರ್ಥಿಗಳ ಸೇರ್ಪಡೆ, ಯಾವ ಕಾಲೇಜುಗಳಿಗೆ ಹೆಚ್ಚಾಗಿ ವಿದ್ಯಾರ್ಥಿಗಳು ಸೇರುತ್ತಾರೆ, ಪಿಎಚ್‌ಡಿ ಅಧ್ಯಯನ ಮಾಡುವವರು, ಜಾತಿವಾರು ವಿದ್ಯಾರ್ಥಿ ಸಂಖ್ಯೆ ಸಹಿತ ಬಹಳಷ್ಟು ಸಂಗತಿಗಳ ಬಗ್ಗೆ ಗಮನ ಹರಿಸಲಾಗಿದೆ.
ಮುಸ್ಲಿಮರೇ ಹೆಚ್ಚು
ಉನ್ನತ ಶಿಕ್ಷಣ ಪಡೆಯುವ ಅಲ್ಪಸಂಖ್ಯಾಕರಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಿದ್ದಾರೆ. ಶೇ. 5.5ರಷ್ಟು ವಿದ್ಯಾರ್ಥಿಗಳು ಮುಸ್ಲಿಮರಾಗಿದ್ದರೆ, ಶೇ. 2.3ರಷ್ಟು ವಿದ್ಯಾರ್ಥಿಗಳು ಉಳಿದ ಅಲ್ಪಸಂಖ್ಯಾಕ ಸಮುದಾಯಗಳಿಗೆ ಸೇರಿದವರು. ಮುಸ್ಲಿಮರಲ್ಲಿ ಉನ್ನತ ಶಿಕ್ಷಣಕ್ಕೆ ಹೋಗುವವರಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು.
ಕರ್ನಾಟಕ : ಬೋಧಕ ಸಂಖ್ಯೆ ಉತ್ತಮ
ಇಡೀ ದೇಶದ ಲೆಕ್ಕಾಚಾರದಲ್ಲಿ ಪ್ರತೀ 28 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರಿದ್ದಾರೆ. ಆದರೆ ಬಿಹಾರ ಮತ್ತು ಜಾರ್ಖಂಡ್‌ಲ್ಲಿ ಪ್ರತೀ 50 ಮಕ್ಕಳಿಗೆ ಒಬ್ಬರು ಬೋಧಕರಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡಿನ ಸ್ಥಿತಿ ಉತ್ತಮವಾಗಿದೆ. ಇಲ್ಲಿ ಪ್ರತೀ 18 ವಿದ್ಯಾರ್ಥಿಗಳಿಗೆ ಒಬ್ಬ ಬೋಧಕರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.