ಸಿ.ಡಿ. ಷಡ್ಯಂತ್ರ ಜನತೆಗೆ ಗೊತ್ತಿದೆ
Team Udayavani, Mar 20, 2021, 7:10 AM IST
ಬೆಂಗಳೂರು: ಬಹು ಚರ್ಚಿತ ಸಿ.ಡಿ. ಪ್ರಕರಣದ ಹಿಂದೆ ಭಾರೀ ಷಡ್ಯಂತ್ರ ಇದೆ. ಇದನ್ನು ಯಾರು ಮಾಡಿದ್ದಾರೆ ಎಂದು ರಾಜ್ಯದ ಜನತೆಗೆ ಗೊತ್ತಿದೆ…
ಇದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಸ್ಪಷ್ಟ ಮಾತು. “ಉದಯವಾಣಿ’ ಜತೆ ಅವರು ಸಿಡಿ ಪ್ರಕರಣ, ಉಪ ಚುನಾ ವಣೆ ಸಿದ್ಧತೆ, ಬಸನಗೌಡ ಪಾಟೀಲ್ ಯತ್ನಾಳ್ ಆರೋಪಗಳ ಬಗ್ಗೆ ಮಾತ ನಾಡಿದ್ದಾರೆ.
ಷಡ್ಯಂತ್ರ ಕಾಂಗ್ರೆಸ್ ಗುಣ
ಸಿ.ಡಿ. ಪ್ರಕರಣದ ಆರೋಪ ಬಂದ ತತ್‌ಕ್ಷಣ ರಮೇಶ್ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಷಡ್ಯಂತ್ರ, ಜನರಲ್ಲಿ ಗೊಂದಲ ಸೃಷ್ಟಿ ಕಾಂಗ್ರೆಸ್ ಕೆಲಸ.
ರೈತರನ್ನು ದಾರಿ ತಪ್ಪಿಸುವುದು, ಅವಕಾಶ ಸಿಕ್ಕಾಗಲೆಲ್ಲ ಭ್ರಷ್ಟಾಚಾರ ಕಾಂಗ್ರೆಸ್‌ನವರ ಗುಣವಾಗಿದೆ. ಹೀಗಾಗಿ ಕಾಂಗ್ರೆಸ್ ದೇಶಾದ್ಯಂತ ಮುಳುಗುತ್ತಿದೆ ಎಂದರು ಸಿಂಗ್.
ಕಾರ್ಯಾಧ್ಯಕ್ಷರ ನೇಮಕವಿಲ್ಲ
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಕಾರ್ಯಾಧ್ಯಕ್ಷರ ನೇಮಕ ಮಾಡುವ ಪದ್ಧತಿ ಇಲ್ಲ. ಅದು ಕಾಂಗ್ರೆಸ್‌ನಲ್ಲಿರುವ ಪದ್ಧತಿ. ನಮ್ಮಲ್ಲಿ ಅಧ್ಯಕ್ಷರೇ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಎಂದರು
ಉತ್ತಮ ಫಲಿತಾಂಶ
ತಮಿಳುನಾಡಿನಲ್ಲಿ ಈ ಬಾರಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ ಬರಲಿದೆ. ಕೇರಳ ದಲ್ಲಿಯೂ ಬಿಜೆಪಿ ಶಕ್ತಿ ಪ್ರದರ್ಶನ ಆಗಲಿದೆ. ಸ್ಟಾರ್‌ಗಳು ಬಿಜೆಪಿ ಸೇರುತ್ತಿದ್ದಾರೆ. ಪ. ಬಂಗಾಲದಲ್ಲಿ ಆಡಳಿತ ವಿರೋಧಿ ಅಲೆ ಇದೆ. ನಾವು ಅಲ್ಲಿ ಸರಕಾರ ರಚನೆ ಮಾಡುತ್ತೇವೆ. ಅಸ್ಸಾಂನಲ್ಲಿಯೂ ಸರಕಾರ ರಚನೆ ಮಾಡುತ್ತೇವೆ ಎಂದರು ಸಿಂಗ್.
ಇದನ್ನೂ ಓದಿ:ಅಪರಾಧ ನಿಯಂತ್ರಣಕ್ಕೆ ತಂತ್ರಜ್ಞಾನ ವಿನಿಮಯ: ಬಸವರಾಜ ಬೊಮ್ಮಾಯಿ
ಯತ್ನಾಳ್ ಪಕ್ಷದವರಲ್ಲ
ಪಕ್ಷದ ನಾಯಕತ್ವದ ವಿರುದ್ಧ ಮಾತ ನಾಡು ತ್ತಿರುವ ಶಾಸಕ ಯತ್ನಾಳ್‌ಗೆ ನೋಟಿಸ್ ನೀಡಿ ದ್ದೇವೆ. ಅವರು ನಮ್ಮ ಪಕ್ಷದ ಭಾಗವೇ ಅಲ್ಲ. ಪಕ್ಷ ಮತ್ತು ನಾಯಕತ್ವದ ವಿರುದ್ಧ ನಿರಂತರ ಮಾತ ನಾಡುವ ವ್ಯಕ್ತಿಯ ಬಗ್ಗೆ ನಾವು ಹೆಚ್ಚು ತಲೆ ಕೆಡಿಸಿ ಕೊಳ್ಳುವುದಿಲ್ಲ ಎಂದರು.
ಉಪ ಚುನಾವಣೆ ಚರ್ಚೆ
ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಎರಡು ವಿಧಾನಸಭಾ ಕ್ಷೇತ್ರ ಗಳ ಉಪ ಚುನಾವಣೆ ಅಭ್ಯರ್ಥಿ ಗಳ ಕುರಿತು ಶನಿವಾರ ಚರ್ಚೆ ಮಾಡ ಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತು ವಾರಿ ಅರುಣ್ ಸಿಂಗ್ ತಿಳಿ ಸಿ ದ್ದಾರೆ. ಚರ್ಚೆಯ ಬಳಿಕ ಅಭ್ಯರ್ಥಿ ಗಳ ಪಟ್ಟಿಯನ್ನು ಕೇಂದ್ರ ಬಿಜೆಪಿ ಚುನಾವಣ ಸಮಿತಿಗೆ ಕಳುಹಿಸಿ ಕೊಡ ಲಾಗುವುದು. ಕೇಂದ್ರ ಸಮಿತಿಯು ಅಭ್ಯರ್ಥಿ ಗಳ ಆಯ್ಕೆ ಯನ್ನು ಅಂತಿಮಗೊಳಿಸಲಿದೆ ಎಂದು ನಗರದಲ್ಲಿ ಶುಕ್ರವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳಿಗೆ ಅವರು ತಿಳಿಸಿದರು.
ಶಂಕರ ಪಾಗೋಜಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.