ಮ್ಯಾಡ್ರಿಡ್ ಓಪನ್ ಟೆನಿಸ್: ಬಾರ್ಟಿಗೆ ಸೋಲು : ಸಬಲೆಂಕಾ ಚಾಂಪಿಯನ್
Team Udayavani, May 9, 2021, 11:45 PM IST
ಮ್ಯಾಡ್ರಿಡ್ : ವಿಶ್ವದ ನಂ.1 ಆಟಗಾರ್ತಿ, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಅವರನ್ನು ಪರಾಭವಗೊಳಿಸುವ ಮೂಲಕ ಬೆಲರೂಸ್ನ ಅರಿನಾ ಸಬಲೆಂಕಾ “ಮ್ಯಾಡ್ರಿಡ್ ಓಪನ್’ ಟೆನಿಸ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ತೀವ್ರ ಥಂಡಿ ವಾತಾವರಣದಲ್ಲಿ ಸಾಗಿದ ಈ 3 ಸೆಟ್ಗಳ ಫೈನಲ್ ಹೋರಾಟದಲ್ಲಿ ಸಬಲೆಂಕಾ 6-0, 3-6, 6-4 ಅಂತರದ ಗೆಲುವು ಸಾಧಿಸಿದರು. ಜತೆಗೆ ಕಳೆದ ಸ್ಟಟ್ಗಾರ್ಟ್ ಫೈನಲ್ನಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡರು.
ವಿಶ್ವದ ನಂ.7 ಆಟಗಾರ್ತಿಯಾಗಿರುವ ಅರಿನಾ ಸಬಲೆಂಕಾ ಫೈನಲ್ಗೆ ಲಗ್ಗೆ ಇಡುವ ತನಕ ಒಂದೂ ಸೆಟ್ ಕಳೆದುಕೊಂಡಿರಲಿಲ್ಲ. ಹಾಗೆಯೇ ಪ್ರಶಸ್ತಿ ಸಮರದ ಮೊದಲ ಸೆಟ್ನಲ್ಲಿ ಎದುರಾಳಿಗೆ ಒಂದೂ ಅಂಕ ಬಿಟ್ಟುಕೊಡಲಿಲ್ಲ. ಹೀಗಾಗಿ ಇಲ್ಲಿಯೂ ಅವರು ನೇರ ಸೆಟ್ ಗೆಲುವು ಒಲಿಸಿಕೊಳ್ಳುವ ನಿರೀಕ್ಷೆ ಇತ್ತು. ಆದರೆ ದ್ವಿತೀಯ ಸೆಟ್ನಲ್ಲಿ ಬಾರ್ಟಿ ತಿರುಗಿ ಬಿದ್ದರು. ನಿರ್ಣಾಯಕ ಸೆಟ್ ಇನ್ನಷ್ಟು ಪೈಪೋಟಿಯಿಂದ ಕೂಡಿತ್ತು. ಇಲ್ಲಿ ಸಬಲೆಂಕಾ ಮೇಲುಗೈ ಸಾಧಿಸಿದರು.
ಜ್ವೆರೇವ್-ಬೆರೆಟಿನಿ ಫೈನಲ್
ಪುರುಷರ ಸಿಂಗಲ್ಸ್ ಫೈನಲ್ನಲ್ಲಿ 2018ರ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೇವ್-ಮ್ಯಾಟಿಯೊ ಬೆರೆಟಿನಿ ಮುಖಾ ಮುಖೀ ಆಗಲಿದ್ದಾರೆ. ಜ್ವೆರೇವ್ ಸೆಮಿಫೈನಲ್ ಸೆಣಸಾಟದಲ್ಲಿ ಡೊಮಿನಿಕ್ ಥೀಮ್ ಅವರನ್ನು 6-3, 6-4 ಅಂತರದಿಂದ ಪರಾಭವಗೊಳಿಸಿದರು. ಇದರೊಂದಿಗೆ ಕಳೆದ ಯುಎಸ್ ಓಪನ್ ಫೈನಲ್ನಲ್ಲಿ ಥೀಮ್ ವಿರುದ್ಧ ಅನುಭವಿಸಿದ ಸೋಲಿಗೆ ಸೇಡು ತೀರಿದಂತಾಯಿತು. ಜ್ವೆರೇವ್ ಕ್ವಾರ್ಟರ್ ಫೈನಲ್ನಲ್ಲಿ ಕ್ಲೇ ಕೋರ್ಟ್ ಸ್ಪೆಷಲಿಸ್ಟ್ ರಫೆಲ್ ನಡಾಲ್ ವಿರುದ್ಧ ಅಮೋಘ ಜಯ ಸಾಧಿಸಿದ್ದರು. ದ್ವಿತೀಯ ಸೆಮಿಫೈನಲ್ನಲ್ಲಿ ಮ್ಯಾಟಿಯೊ ಬೆರೆಟಿನಿ ನಾರ್ವೆಯ ಕ್ಯಾಸ್ಪರ್ ರೂಡ್ ಅವರನ್ನು 6-4, 6-4ರಿಂದ ಹಿಮ್ಮೆಟ್ಟಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.