Asia Cup Hockey: ಅರೈಜೀತ್ ಹ್ಯಾಟ್ರಿಕ್; ಪಾಕಿಸ್ಥಾನ ಸೋಲಿಸಿದ ಭಾರತಕ್ಕೆ ಕಿರೀಟ
ಜೂನಿಯರ್ ಏಷ್ಯಾ ಕಪ್ ಹಾಕಿಯ ಫೈನಲ್‌ನಲ್ಲಿ ಪಾಕಿಸ್ಥಾನ ಪಲ್ಟಿ
Team Udayavani, Dec 5, 2024, 7:10 AM IST
ಮಸ್ಕತ್: ಬದ್ಧ ಎದುರಾಳಿ ಪಾಕಿಸ್ಥಾನವನ್ನು 5-3 ಅಂತರದಿಂದ ಉರುಳಿಸಿದ ಭಾರತ, ಜೂನಿಯರ್ ಏಷ್ಯಾ ಕಪ್ ಹಾಕಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಭಾರತಕ್ಕೆ ಒಲಿದ 5ನೇ ಹಾಗೂ ಸತತ 3ನೇ ಪ್ರಶಸ್ತಿ.
ಅರೈಜೀತ್ ಸಿಂಗ್ ಅವರ ಹ್ಯಾಟ್ರಿಕ್ ಸಾಹಸ ಭಾರತದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿತು. ಅವರು 4 ಗೋಲು ಬಾರಿಸಿ ಮಿಂಚಿದರು (4, 18, 47, 54ನೇ ನಿಮಿಷ). ಇನ್ನೊಂದು ಗೋಲನ್ನು ದಿಲ್ರಾಜ್ ಸಿಂಗ್ ಹೊಡೆದರು (19ನೇ ನಿಮಿಷ).
ಇದು ಎರಡು ಅಜೇಯ ತಂಡಗಳ ನಡುವಿನ ಫೈನಲ್ ಆಗಿತ್ತು. ಕಳೆದೆರಡು ಬಾರಿಯ ಹಾಲಿ ಚಾಂಪಿಯನ್ ಎಂಬ ಹೆಗ್ಗಳಿಕೆ ಭಾರತದ್ದಾಗಿತ್ತು. ಸ್ಪರ್ಧೆ ಆಕ್ರಮಣಕಾರಿಯಾಗಿಯೇ ಆರಂಭಗೊಂಡಿತು. ಪಾಕಿಸ್ಥಾನದ ಹನ್ನಾನ್ ಶಾಹಿದ್ 3ನೇ ನಿಮಿಷದಲ್ಲೇ ಗೋಲು ಖಾತೆ ತೆರೆದರು. ಅರೈಜೀತ್ ಸಿಂಗ್ ಕೂಡಲೇ ಪಂದ್ಯವನ್ನು ಸಮಬಲಕ್ಕೆ ತಂದರು. ಅಷ್ಟೇ ಅಲ್ಲ, ಅವರೇ ಇನ್ನೊಂದು ಗೋಲು ಹೊಡೆದು ಭಾರತಕ್ಕೆ ಮುನ್ನಡೆಯನ್ನೂ ತಂದಿತ್ತರು. ಬಳಿಕ ದಿಲ್ರಾಜ್ ಸಿಂಗ್ ಪಾಕ್ ಕೋಟೆಯನ್ನು ಆಕ್ರಮಿಸಿ 3ನೇ ಗೋಲು ಹೊಡೆದರು.
ಅರ್ಧ ಹಾದಿ ಕ್ರಮಿಸುವ ವೇಳೆ ಭಾರತ 3-2 ಮುನ್ನಡೆ ಸಾಧಿಸಿತ್ತು. 3ನೇ ಕ್ವಾರ್ಟರ್‌ನಲ್ಲಿ ಪಾಕ್ ಹಿಡಿತ ಸಾಧಿಸಿ ಪಂದ್ಯವನ್ನು ಸಮಬಲಕ್ಕೆ ತಂದಿತು. ಬಳಿಕ ಕೊನೆಯ ಕ್ವಾರ್ಟರ್‌ನಲ್ಲಿ ಅರೈಜೀತ್ ಮತ್ತೆರಡು ಗೋಲು ಸಿಡಿಸಿ ಭಾರತದ ಗೆಲುವಿನ ಹೀರೋ ಎನಿಸಿದರು. ಪಾಕ್ ಪರ ಸುಫಿಯಾನ್ ಖಾನ್ 2 ಗೋಲು ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.