Asia Cup: ಅಂಡರ್-19 ಏಷ್ಯಾ ಕಪ್: ಜಪಾನ್ ಮೇಲೆ ಭಾರತ ಸವಾರಿ
Team Udayavani, Dec 3, 2024, 1:51 AM IST
ಶಾರ್ಜಾ: ಅನನುಭವಿ ಜಪಾನ್ ವಿರುದ್ಧದ ಅಂಡರ್-19 ಏಷ್ಯಾ ಕಪ್ ಏಕದಿನ ಕ್ರಿಕೆಟ್ ಪಂದ್ಯದಲ್ಲಿ 211 ರನ್ನುಗಳ ಜಯ ಸಾಧಿಸುವ ಮೂಲಕ ಭಾರತ ತಂಡ ಹಳಿ ಏರಿದೆ.
ಸೋಮವಾರ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 339 ರನ್ ಪೇರಿಸಿದರೆ, ಜಪಾನ್ 8 ವಿಕೆಟಿಗೆ 128 ರನ್ ಗಳಿಸಿ ಶರಣಾಯಿತು. ಇದರೊಂದಿಗೆ ಜಪಾನ್ ಎರಡೂ ಲೀಗ್ ಪಂದ್ಯಗಳನ್ನು ಸೋತಂತಾಯಿತು. ಭಾರತ ಮೊದಲ ಲೀಗ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ 43 ರನ್ನುಗಳ ಸೋಲನುಭವಿಸಿತ್ತು.
ಈ ಜಯದಿಂದ ಭಾರತವೀಗ ಅಂಕದ ಖಾತೆ ತೆರೆದಿದ್ದು, 1.680 ರನ್‌ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಎರಡೂ ಪಂದ್ಯ ಗೆದ್ದಿರುವ ಪಾಕಿಸ್ಥಾನ ಅಗ್ರಸ್ಥಾನದಲ್ಲಿದ್ದರೆ, ರನ್‌ರೇಟ್‌ನಲ್ಲಿ ಭಾರತವನ್ನು ಮೀರಿಸಿರುವ ಯುಎಇ ದ್ವಿತೀಯ ಸ್ಥಾನಿಯಾಗಿದೆ (2.040). ಸೆಮಿಫೈನಲ್ ಪ್ರವೇಶಿಸಲು ಯುಎಇ ವಿರುದ್ಧ ಬುಧವಾರ ನಡೆಯುವ ಅಂತಿಮ ಲೀಗ್ ಪಂದ್ಯವನ್ನು ಭಾರತ ಗೆಲ್ಲಲೇಬೇಕಿದೆ.
ನಾಯಕ ಅಮಾನ್ ಶತಕ
ಭಾರತದ ಸರದಿಯಲ್ಲಿ ನಾಯಕ ಮೊಹಮ್ಮದ್ ಅಮಾನ್ ಅಜೇಯ 122 ರನ್ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು (118 ಎಸೆತ, 7 ಬೌಂಡರಿ). ಆರಂಭಕಾರ ಆಯುಷ್ ಮ್ಹಾತ್ರೆ 54, ಕೆ.ಪಿ. ಕಾರ್ತಿಕೇಯ 57 ರನ್ ಹೊಡೆದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ಚೇತನ್ ಶರ್ಮ, ಹಾರ್ದಿಕ್ ರಾಜ್ ಮತ್ತು ಕೆ.ಪಿ. ಕಾರ್ತಿಕೇಯ. ಮೂವರೂ ತಲಾ 2 ವಿಕೆಟ್ ಉರುಳಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ ಯುಎಇಯನ್ನು 69 ರನ್ನುಗಳಿಂದ ಪರಾಭವಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Make America Great Again: ಅಮೆರಿಕದಲ್ಲಿ ಸ್ವದೇಶಿ vs ವಲಸಿಗರು ಜಟಾಪಟಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Udupi: ಇನ್‌ಸ್ಟಾಗ್ರಾಂ ಲಿಂಕ್ ಬಳಸಿ 12.46 ಲಕ್ಷ ರೂ. ಕಳೆದುಕೊಂಡ ಯುವತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.