ದುಬಾೖ ಏಶ್ಯನ್ ಬಾಕ್ಸಿಂಗ್: ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ
Team Udayavani, May 17, 2021, 11:54 PM IST
ಹೊಸದಿಲ್ಲಿ: ಇದೇ ತಿಂಗಳು ದುಬಾೖಯಲ್ಲಿ ನಡೆಯಲಿರುವ “ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್’ನಲ್ಲಿ ಭಾರತದ ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆ ಮಸುಕಾಗಿದೆ. ಕಾರಣ, ಭಾರತಕ್ಕೆ ಇನ್ನೂ ವೀಸಾ ಲಭಿಸಿಲ್ಲ. ಬಾಕ್ಸಿಂಗ್ ಫೆಡರೇಶನ್ ಆಫ್ ಇಂಡಿಯಾ (ಬಿಎಫ್ಐ) ಸೋಮವಾರ ಈ ಮಾಹಿತಿ ನೀಡಿದೆ.
ಭಾರತ ತಂಡದಲ್ಲಿ 10 ಮಂದಿ ವನಿತಾ ಸ್ಪರ್ಧಿಗಳೂ ಇದ್ದಾರೆ. ಮೇ 21ರಿಂದ ಈ ಪಂದ್ಯಾವಳಿ ಆರಂಭವಾಗಲಿದೆ.
“ದುಬಾೖ ಪ್ರಯಾಣಕ್ಕೆ ಭಾರತದ ಬಾಕ್ಸಿಂಗ್ ತಂಡದ ಸದಸ್ಯರಿಗೆ ಈ ವರೆಗೆ ವೀಸಾ ಲಭಿಸಿಲ್ಲ. ಈ ನಿಟ್ಟಿನಲ್ಲಿ ನಾವು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ’ ಎಂಬುದಾಗಿ ಬಿಎಫ್ಐ ಕಾರ್ಯದರ್ಶಿ ಹೇಮಂತ್ ಕಲಿಟಾ ಹೇಳಿದ್ದಾರೆ.
ಹೊಸದಿಲ್ಲಿ ಆತಿಥ್ಯ
ಮೂಲ ವೇಳಾಪಟ್ಟಿ ಪ್ರಕಾರ ಈ ಪಂದ್ಯಾವಳಿ ಹೊಸದಿಲ್ಲಿಯಲ್ಲಿ ನಡೆಯಬೇಕಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಇದು ದುಬಾೖಗೆ ಸ್ಥಳಾಂತರಗೊಂಡಿತು.
ಈ ಪಂದ್ಯಾವಳಿಗಾಗಿ ಭಾರತದ ಪುರುಷರ ತಂಡ ಪಟಿಯಾಲಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಪೋರ್ಟ್ಸ್ನಲ್ಲಿ ಹಾಗೂ ವನಿತಾ ತಂಡ ಪುಣೆಯ ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭ್ಯಾಸ ಆರಂಭಿಸಿತ್ತು. 4 ವನಿತೆಯರ ಸಹಿತ ಭಾರತದ ಒಟ್ಟು 9 ಬಾಕ್ಸರ್ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.