![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Sep 15, 2020, 6:44 PM IST
ಅಸ್ಸಾಂ : ದೇವಸ್ಥಾನದಲ್ಲಿ ಮಾದಕ ವಸ್ತು ಸೇವನೆಯಲ್ಲಿ ನಿರತವಾಗಿದ್ದ ಐವರನ್ನು ಪೊಲೀಸರು ಬೆನ್ನಟ್ಟಿದ ಸಂದರ್ಭ ಐದು ಮಂದಿ ಯುವಕರು ನಶೆಯಲ್ಲಿಯೇ ಪೊಲೀಸರಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿದ್ದ ನದಿಗೆ ಜಿಗಿದಿದ್ದಾರೆ.. ದುರಾದೃಷ್ಟ ಆ ಐದು ಮಂದಿಯಲ್ಲಿ ನದಿ ದಾಟಿದ್ದು ಮಾತ್ರ ನಾಲ್ಕೇ ಮಂದಿ… ಉಳಿದ ಓರ್ವ ನಾಪತ್ತೆಯಾಗಿದ್ದ ಆದರೆ ಯುವಕರಲ್ಲಿ ಒಂದು ಅನುಮಾನ ಕಾಡುತಿತ್ತು ಅದೇನೆಂದರೆ ಐದನೇ ವ್ಯಕ್ತಿ ಪೊಲೀಸರು ಬೆನ್ನಟ್ಟಿದ ಸಂದರ್ಭ ನದಿಗೆ ಜಿಗಿದಿದ್ದಾನೋ ಅಥವಾ ಇಲ್ಲವೋ ಎಂಬುದು ಆದರೆ ಇದಕ್ಕೆಲ ಉತ್ತರ ಸಿಕ್ಕಿದು ಎರಡು ದಿನದ ಬಳಿಕ ಆತನ ಶವ ನದಿಯಲ್ಲಿ ತೇಲುತಿದ್ದಾಗ.
ಘಟನೆ ವಿವರ :
ಅಸ್ಸಾಂ ನ ನಾಗೌನ್ ಜಿಲ್ಲೆಯಲ್ಲಿರುವ ದೇವಸ್ಥಾನವೊಂದರಲ್ಲಿ ಸೆಪ್ಟೆಂಬರ್ 12ರಂದು ಐದು ಮಂದಿಯ ತಂಡವೊಂದು ಇಲ್ಲಿನ ದೇವಸ್ಥಾನದಲ್ಲಿ ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದರು ಈ ವೇಳೆ ಯಾರೋ ಅಕ್ರಮ ಚಟುವಟಿಕೆಯಲ್ಲಿ ಇರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ, ಪೊಲೀಸರು ಮಾಹಿತಿ ತಿಳಿಯುತ್ತಿದ್ದಂತೆ ದೇವಸ್ಥಾನದ ಬಳಿಗೆ ತಂಡದೊಂದಿಗೆ ಆಗಮಿಸಿದ್ದಾರೆ ಆದರೆ ಇದನ್ನು ತಿಳಿದ ಯುವಕರ ತಂಡ ಪೊಲೀಸರಿಂದ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅಲ್ಲಿಂದ ಕಾಲ್ಕಿತ್ತಿದ್ದಾರೆ, ಆದರೆ ಬೆನ್ನುಬಿಡದ ಪೊಲೀಸರು ಯುವಕ ಬೆನ್ನತ್ತಿದ್ದಾರೆ ಅಷ್ಟರಲ್ಲೇ ಯುವಕರಿಗೆ ಬದಿಯಲ್ಲಿ ನದಿಯೊಂದು ಕಂಡಿದೆ ತಮ್ಮ ರಕ್ಷಣೆಗಾಗಿ ಯುವಕರು ನದಿಗೆ ಜಿಗಿದಿದ್ದಾರೆ, ಆದರೆ ಐದು ಮಂದಿ ನದಿಗೆ ಜಿಗಿದರೂ ನದಿ ದಾಟಿದ್ದು ಮಾತ್ರ ನಾಲ್ಕೇ ಮಂದಿ ದೇಬಶಿಸ್ ದಾಸ್ ಎಂಬ ಯುವಕ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ, ಆದರೆ ಈ ನಾಲ್ಕು ಮಂದಿಗೆ ನಾಪತ್ತೆಯಾದ ದೇಬಶಿಸ್ ದಾಸ್ ನದಿಗೆ ಜಿಗಿದಿದ್ದಾನಾ ಇಲ್ಲವೋ ಎಂಬ ಅನುಮಾನ ಕಾಡುತಿತ್ತು, ಮರುದಿನ ಬೆಳಿಗ್ಗೆ ಆತನ ಹುಡುಕಾಟ ನಡೆದರೂ ಆತನ ಪತ್ತೆಯಾಗಿಲ್ಲ ಆದರೆ ಸೆಪ್ಟೆಂಬರ್ 14 ರಂದು ರಕ್ಷಣಾ ತಂಡವನ್ನು ಕರೆಸಿದ ಪೊಲೀಸರು ಅಸ್ಸಾಂ ನ ನಿಷಾರಿ ನದಿಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ:ಲಾಕ್ ಡೌನ್ ಅವಧಿಯಲ್ಲಿ 40 ಸಾವಿರ ಕೋಟಿ ರೂ. EPF ಹಣ ವಿದ್ ಡ್ರಾ
ಮೃತ ಯುವಕನನ್ನು ದೇಬಶಿಸ್ ದಾಸ್ ಎಂಬ ಯುವಕ ಅಸ್ಸಾಂ ನ ಟೆಟೆಲಿಸರ ಗ್ರಾಮದ ಯುವಕ ಎಂದು ಹೇಳಲಾಗಿದೆ. ಮಾದಕ ವಸ್ತು ಸೇವನೆ ಮಾಡಿದ್ದರಿಂದ ಈತನಿಗೆ ನದಿಯಲ್ಲಿ ಈಜಿ ದಡ ಸೇರಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಪೊಲೀಸರು ಇದನ್ನು ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡರೆ ಗ್ರಾಮಸ್ಥರು ಇದರ ತನಿಖೆ ನಡೆಸಬೇಕು ಪೊಲೀಸರು ಯುವಕರಿಗೆ ಹಲ್ಲೆ ನಡೆಸಿದ್ದಾರೆ ಹಾಗಾಗಿ ಯುವಕನಿಗೆ ನದಿಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಘಟನೆಯ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದೇವಾಲಯದ ಒಳಗೆ ಯುವಕರನ್ನು ಪೊಲೀಸರ ತಂಡ ಥಳಿಸಿದೆ ಎಂದು ಸ್ಥಳೀಯ ನಿವಾಸಿ ಪಬನ್ ಹಜರಿಕಾ ಹೇಳಿದ್ದಾನೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.