ಚಾಲನ ತರಬೇತಿ ಸಂಸ್ಥೆಯ ಕಾರಿಗೆ ಅಪಘಾತಪಡಿಸಿ ಪ್ರಶ್ನಿಸಿದ್ದಕ್ಕೆ ಹಲ್ಲೆ: ದೂರು ಪ್ರತಿದೂರು
Team Udayavani, Mar 14, 2023, 5:04 AM IST
ಗಂಗೊಳ್ಳಿ: ಚಾಲನ ತರಬೇತಿ ಸಂಸ್ಥೆಯ ಕಾರಿಗೆ ಅಪಘಾತಪಡಿಸಿ ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಿದ ಕುರಿತು ಪ್ರಕರಣ ದಾಖಲಾಗಿದೆ.
ಅಂಬಿಕಾ ಡ್ರೈವಿಂಗ್ ಸ್ಕೂಲ್‌ನ ಮಾಲಕ ಸತೀಶ ದೇವಾಡಿಗ ತ್ರಾಸಿ ಅವರು ಕಾರಿನಲ್ಲಿ ಸನತ್ ಅವರಿಗೆ ಚಾಲನ ತರಬೇತಿ ನೀಡುತ್ತಿದ್ದಾಗ ತ್ರಾಸಿ ಬಳಿ ಬೈಂದೂರು ಕಡೆಗೆ ಹೋಗುತ್ತಿದ್ದ ಶವರ್ಲೆ ಟ್ರಾವೆಲ್ಸ್ ವಾಹನದ ಚಾಲಕ ತರಬೇತಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾನೆ. ವಿಚಾರಿಸಿದ್ದಕ್ಕೆ ಚಾಲಕನು ಸತೀಶ ದೇವಾಡಿಗರಿಗೆ ಹಲ್ಲೆ ಮಾಡಿದ್ದು ವಾಹನದಲ್ಲಿದ್ದ ಇತರ 4 ಜನರು ಹಲ್ಲೆ ಮಾಡಿದ್ದಾರೆ. ವಿಜಯ, ಸುಬ್ರಹ್ಮಣ್ಯ, ಸದಾಶಿವ, ಹಾಗೂ ಅಣ್ಣಪ್ಪ ಆರೋಪಿಗಳು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದೇ ಘಟನೆಗೆ ಪ್ರತಿದೂರು ದಾಖಲಾಗಿದ್ದು, ಬಾಡ ಗ್ರಾಮದ ಸದಾಶಿವ ಪ್ರತಿದೂರು ನೀಡಿದ್ದು, ಪತ್ನಿ ಪ್ರೇಮಾ, ಮಕ್ಕಳಾದ ವಿಜಯ, ಸುಬ್ರಹ್ಮಣ್ಯ, ಜ್ಯೋತಿ ಹಾಗೂ ಅಣ್ಣ ಅಣ್ಣಪ್ಪನೊಂದಿಗೆ ಧರ್ಮಸ್ಥಳಕ್ಕೆ ಹೋಗಿ ಮನೆಗೆ ಬರುತ್ತಿರುವಾಗ ಎದುರಿನಿಂದ ಹೋಗುತ್ತಿದ್ದ ಕಾರು ಚಾಲಕ ನಿರ್ಲಕ್ಷತನದಿಂದ ಸೂಚನೆ ನೀಡದೇ ತತ್‌ಕ್ಷಣ ನಿಲ್ಲಿಸಿದಾಗ ಹಿಂದಿನಿಂದ ಢಿಕ್ಕಿಯಾಗಿದೆ. ಆಗ ಕಾರಿನಲ್ಲಿದ್ದ ಸತೀಶ್ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ಸದಾಶಿವ, ಸುಬ್ರಹ್ಮಣ್ಯರ ಮೇಲೆ ಹಲ್ಲೆಯಾಗಿದ್ದು, ಅಣ್ಣಪ್ಪ ರಸ್ತೆಗೆ ಬಿದ್ದು ಗಾಯವಾಗಿದೆ ಎಂದು ಪ್ರತಿದೂರಿನಲ್ಲಿ ತಿಳಿಸಲಾಗಿದೆ. ಎರಡೂ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು
Koteshwara: ಕೊಡಿಹಬ್ಬದ ಪೂರ್ವಭಾವಿಯಾಗಿ ಶ್ರೀ ಕೋಟಿಲಿಂಗೇಶ್ವರನಿಗೆ ಸಮುದ್ರ ಸ್ನಾನ
Gangolli: ಮಲ್ಯರಮಠ ಶ್ರೀ ವೆಂಕಟರಮಣ ದೇಗುಲ; ವಿಶ್ವರೂಪ ದರ್ಶನ ಸೇವೆ
Mullikatte-ಅರಾಟೆ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಗಳ ಸರಮಾಲೆ
ನನಗೆ ಸಂಸ್ಕಾ ರ ಕೊಟ್ಟಿದ್ದೇ ಯಕ್ಷ ಗಾನ, ಅದೊಂದು ರಮ್ಯಾದ್ಭುತ ಲೋಕ: ನಟ ರಾಮಕೃಷ್ಣ
MUST WATCH
ಹೊಸ ಸೇರ್ಪಡೆ
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.