Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
ಬಿಜೆಪಿ, ಏಕನಾಥ ಶಿಂಧೆ ಬಣ ಶಿವಸೇನೆ, ಅಜಿತ್ ಪವಾರ್ ಎನ್‌ಸಿಪಿಯ ಭರವಸೆಗಳೇನು?
Team Udayavani, Nov 6, 2024, 8:05 AM IST
ಮುಂಬೈ: ಜಾರ್ಖಂಡ್ ಚುನಾವಣೆಗಾಗಿ “ಇಂಡಿಯಾ’ ಒಕ್ಕೂಟ 7 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿರುವಂತೆಯೇ, ನ.20ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಗಾಗಿ ಬಿಜೆಪಿ, ಏಕನಾಥ ಶಿಂಧೆ ಬಣ ಶಿವಸೇನೆ, ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನೊಳಗೊಂಡ “ಮಹಾಯುತಿ’ 10 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿದೆ.
“ಲಡ್ಕಿ ಬಹೆನ್ ಯೋಜನೆ’ ಅನ್ವಯ ನೀಡುವ ಮಾಸಿಕ ಮೊತ್ತವನ್ನು ಈಗಿನ 1500 ರೂ.ಗಳಿಂದ 2100 ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿದೆ. 25 ಲಕ್ಷ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮಾದರಿ ಯೋಜನೆಯಂತೆ ಶೇತ್ಕಾರಿ ಸಮ್ಮಾನ್ ಯೋಜನೆ ಅಡಿಯಲ್ಲಿ ನೀಡುವ ರೈತರಿಗೆ ನೀಡುವ ವಾರ್ಷಿಕ ಮೊತ್ತವನ್ನು 12000 ರೂ.ಗಳಿಂದ 15000 ರೂ.ಗೆ ಹೆಚ್ಚಿಸಲಾಗುತ್ತದೆ.
ಅಧಿಕಾರಕ್ಕೆ ಬಂದ ಮೊದಲ ದಿನಗಳ 100 ದಿನಗಳಲ್ಲಿ 2029ರಲ್ಲಿ ಮಹಾರಾಷ್ಟ್ರ ಅಭಿವೃದ್ಧಿ ಹೇಗಿರಬೇಕು ಎಂಬ ನೀಲ ನಕ್ಷೆ ಬಿಡುಗಡೆ ಮಾಡಲೂ ವಾಗ್ಧಾನ ಮಾಡಲಾಗಿದೆ.
10 ಗ್ಯಾರಂಟಿಗಳೇನು?
1. ಮಹಿಳೆಯರಿಗೆ ಮಾಸಿಕ ಭತ್ಯೆ 1500 ರೂ.ನಿಂದ 2100 ರೂ.ಗೆ ಹೆಚ್ಚಳ
2. ರೈತರ ಸಾಲ ಮನ್ನಾ, ವಾರ್ಷಿಕ ನೆರವು 15000 ರೂ.ಗೆ ಏರಿಕೆ
3. ಎಲ್ಲರಿಗೂ ಆಹಾರ ಮತ್ತು ಮನೆ ನಿರ್ಮಾಣ
4. ಹಿರಿಯ ನಾಗರಿಕರ ಪಿಂಚಣಿ 1500 ರೂ.ಗಳಿಂದ 2100 ರೂ.ಗೆ ಹೆಚ್ಚಳ
5. ಅಗತ್ಯ ವಸ್ತುಗಳ ದರ ಏರಿಕೆ ಆಗುವುದರ ಮೇಲೆ ನಿಯಂತ್ರಣ
6. 25 ಲಕ್ಷ ಉದ್ಯೋಗ, 10 ಲಕ್ಷ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 10000 ರೂ. ಸಹಾಯಧನ
7. 45000 ಗ್ರಾಮಗಳಲ್ಲಿ ಸಂಪರ್ಕ ವೃದ್ಧಿಗೆ ರಸ್ತೆ ಅಭಿವೃದ್ಧಿ.
8. ಆಶಾ ಕಾರ್ಯಕರ್ತರಿಗೆ 15000 ರೂ. ವೇತನ
9. ನವೀಕೃತ ಇಂಧನ ಅಭಿವೃದ್ಧಿಗೆ ಆದ್ಯತೆ
10. 2029ರಲ್ಲಿ ಮಹಾರಾಷ್ಟ್ರ ಅಭಿವೃದ್ಧಿ ಬಗ್ಗೆ ನೀಲ ನಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ
Tragedy: ಗರ್ಭಿಣಿಗೆ ಲೈಂಗಿಕ ಕಿರುಕುಳ ನೀಡಿ ಚಲಿಸುತ್ತಿರುವ ರೈಲಿನಿಂದ ಹೊರ ದಬ್ಬಿದ ಕಾಮುಕರು
Bomb Threat: ದೆಹಲಿ, ನೋಯ್ಡಾದ ಶಾಲೆಗಳಿಗೆ ಬಾಂಬ್ ಬೆದರಿಕೆ, ಶಾಲೆಗೆ ರಜೆ, ಪೋಷಕರಲ್ಲಿ ಆತಂಕ
Madhya Pradesh;’ಮಿರಾಜ್’ ಯುದ್ಧ ವಿಮಾನ ಪತನ: ಪೈಲಟ್ ಪಾರು
Protection of immigrants; ಭಾರತೀಯ ವಲಸಿಗರ ರಕ್ಷಣೆಗೆ ಹೊಸ ಕಾಯ್ದೆ