Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಉದ್ಧವ್, ಶರದ್, ಅಜಿತ್, ಶಿಂಧೆಗೆ ಸಿಕ್ಕೀತೆ ಮತಾಶೀರ್ವಾದ?, ಮರಾಠ ಮೀಸಲಾತಿ ಹೋರಾಟ ಬಿಜೆಪಿಗೆ ಪ್ರತಿಕೂಲವೇ?
Team Udayavani, Nov 19, 2024, 7:55 AM IST
ನಮ್ಮ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯನ್ನು ಹೊಂದಿರುವ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನ.20ರಂದು ಒಂದೇ ಹಂತದಲ್ಲಿ ನಡೆಯಲಿದೆ. 2019ಕ್ಕೆ ಹೋಲಿಕೆ ಮಾಡಿದರೆ 2024ರಲ್ಲಿ ನಡೆಯಲಿರುವ ಚುನಾವಣೆ ಒಂದು ರೀತಿ “ಮಾಡು ಇಲ್ಲವೇ ಮಡಿ’ ಎಂಬ ನಾಣ್ಣುಡಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು. ಅದಕ್ಕೆ ಕಾರಣಗಳೂ ಇಲ್ಲದಿಲ್ಲ.
288 ಸದಸ್ಯ ಬಲದ ವಿಧಾನಸಭೆಗೆ 2019ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿಗೆ 105, ಶಿವಸೇನೆಗೆ 56, ಎನ್‌ಸಿಪಿಗೆ 54, ಕಾಂಗ್ರೆಸ್‌ಗೆ 44, ಪಕ್ಷೇತರರು ಮತ್ತು ಇತರರು 19 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಮುಖ್ಯಮಂತ್ರಿ ಸ್ಥಾನ ಹಂಚಿಕೆ ವಿಚಾರದಲ್ಲಿ ಉದ್ಧವ್ ಠಾಕ್ರೆ ಬಿಜೆಪಿ ಜತೆಗೆ ಮುನಿಸಿಕೊಂಡು ಕಾಂಗ್ರೆಸ್ ಮತ್ತು ಎನ್‌ಸಿಪಿ ಜತೆಗೂಡಿದ್ದಲ್ಲದೆ, ಮಹಾ ವಿಕಾಸ ಅಘಾಡಿ ಮೈತ್ರಿಕೂಟ ಸ್ಥಾಪಿಸಿದ್ದರು.
ಉದ್ಧವ್ ಠಾಕ್ರೆ ನೇತೃತ್ವದ ಸರಕಾರ 2022 ಜೂನ್‌ವರೆಗೆ ಅಧಿಕಾರದಲ್ಲಿತ್ತು. ಅನಂತರ ಏಕನಾಥ ಶಿಂಧೆ ನೇತೃತ್ವದಲ್ಲಿ ಶಿವಸೇನೆ ಪ್ರತ್ಯೇಕಗೊಂಡು ಬಿಜೆಪಿ ಜತೆಗೆ ಸೇರಿ ಹೊಸ ಸರಕಾರ ರಚನೆಯಾಯಿತು. 2023ರಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ವಿಭಜನೆಯಾಗಿ ಅಜಿತ್ ಪವಾರ್ ನೇತೃತ್ವದಲ್ಲಿ ಒಂದಷ್ಟು ಮಂದಿ ಶಾಸಕರು ಬಿಜೆಪಿ ಮತ್ತು ಏಕನಾಥ ಶಿಂಧೆ ಬಣದ ಶಿವಸೇನೆ ಮೈತ್ರಿಕೂಟಕ್ಕೆ ಸೇರ್ಪಡೆಯಾದರು.
ಎಪ್ರಿಲ್-ಮೇಯಲ್ಲಿ ಲೋಕಸಭೆಗೆ ನಡೆದಿದ್ದ ಚುನಾ ವಣೆಯಲ್ಲಿ 48 ಕ್ಷೇತ್ರಗಳ ಪೈಕಿ ಬಿಜೆಪಿ-ಏಕನಾಥ ಶಿಂಧೆ ಬಣ ಶಿವಸೇನೆ- ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯನ್ನು ಒಳಗೊಂಡ ಮಹಾಯುತಿ 17, ಕಾಂಗ್ರೆಸ್-ಉದ್ಧವ್ ಠಾಕ್ರೆ ಬಣದ ಶಿವಸೇನೆ- ಶರದ್ ಪವಾರ್ ಬಣದ ಎನ್‌ಸಿಪಿ ಮೈತ್ರಿಕೂಟ 30, ಪಕ್ಷೇತರ ಅಭ್ಯರ್ಥಿ 1 ಕ್ಷೇತ್ರದಲ್ಲಿ ಗೆದ್ದಿದ್ದರು. ಹೀಗಾಗಿ, ಅಜಿತ್ ಪವಾರ್, ಏಕನಾಥ ಶಿಂಧೆ, ದೇವೇಂದ್ರ ಫಡ್ನವೀಸ್, ಉದ್ಧವ್ ಠಾಕ್ರೆಗೆ ರಾಜಕೀಯವಾಗಿ ಮಹತ್ವದ್ದು.
288 ಸದಸ್ಯ ಬಲ, 6 ವಲಯ
ಪಶ್ಚಿಮ ಮಹಾರಾಷ್ಟ್ರ (58 ಕ್ಷೇತ್ರ): 2019ರ ಚುನಾವಣೆಯಲ್ಲಿ ಕಾಂಗ್ರೆಸ್ 10 ಕ್ಷೇತ್ರಗಳನ್ನು ಗೆದ್ದಿತ್ತು. ಅವಿಭಜಿತ ಎನ್‌ಸಿಪಿ 21, ಮೋದಿ ಅಲೆಯ ಪ್ರಭಾವದಿಂದ ಬಿಜೆಪಿ 19 ಕ್ಷೇತ್ರಗಳನ್ನು ಗೆದ್ದಿತ್ತು. ಅಪರಾಧ ಪ್ರಕರಣಗಳು ಇಲ್ಲಿ ಸವಾಲಾಗಿವೆ. ಬಾರಾಮತಿ, ಕೊಲ್ಹಾಪುರ, ಸೋಲಾಪುರ, ಮಾಧಾ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ತನ್ನ ಪ್ರಭಾವ ವೃದ್ಧಿಸಿಕೊಳ್ಳಲು ಮುಂದಾಗಿದೆ.
ಉತ್ತರ ಮಹಾರಾಷ್ಟ್ರ (47 ಕ್ಷೇತ್ರ): ಈ ಪ್ರದೇಶದಲ್ಲಿ ಎನ್‌ಸಿಪಿ ಮತ್ತು ಶಿವಸೇನೆಯ ವಿಭಜನೆ ಅಂಶದ ಮೇಲೆ ಪರಿಣಾಮ ಬೀರಲಿದೆ. ಜಲಗಾಂವ್, ನಾಶಿಕ್, ಅಹ್ಮದ್‌ನಗರಗಳಲ್ಲಿ 2 ಪಕ್ಷಗಳ ನಾಯಕರ ಸಾಧನೆಯನ್ನು ಮತದಾರರು ತೀರ್ಮಾನಿಸಲಿದ್ದಾರೆ. ಇದಲ್ಲದೆ ಈರುಳ್ಳಿ ಬೆಳೆಯ ಕೇಂದ್ರ ಸ್ಥಾನವಾಗಿರುವ ಇಲ್ಲಿ 2023ರಲ್ಲಿ ಅದನ್ನು ರಫ್ತು ಮಾಡುವುದರ ಮೇಲೆ ಹೇರಲಾಗಿದ್ದ ನಿರ್ಬಂಧ, ಶೇ.40 ರಫ್ತು ಸುಂಕ ವಿಧಿಸಿದ್ದು ಬೆಳೆಗಾರರು ಕೋಪಗೊಳ್ಳುವಂತೆ ಮಾಡಿದೆ ಎನ್ನಲಾಗಿದೆ.
ವಿದರ್ಭ (62 ಕ್ಷೇತ್ರ): ಹೆಚ್ಚಿನ ಪ್ರಮಾಣದಲ್ಲಿ ರೈತರ ಆತ್ಮಹತ್ಯೆಯಿಂದ ಸುದ್ದಿಯಾಗಿದ್ದ ಪ್ರದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಭಾವ ಹೆಚ್ಚು. ಜತೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಡಿಸಿಎಂ ದೇವೇಂದ್ರ ಫಡ್ನವೀಸ್ ಪ್ರಭಾವಳಿ ಹೊಂದಿ ರುವ ವಲಯ. ಇಷ್ಟು ಮಾತ್ರವಲ್ಲದೆ ದಲಿತ, ಒಬಿಸಿ ಮತ್ತು ಬುಡಕಟ್ಟು ಸಮುದಾಯದವರ ಪ್ರಮಾಣ ಶೇ.80ರಷ್ಟು ಇದೆ. ಬೆಲೆ ಏರಿಕೆ, ರೈತರ ಬೆಳೆಗೆ ಸಿಗದ ನಿರೀಕ್ಷಿತ ದರ ಈ ಬಾರಿ ಫಲಿತಾಂಶದ ಮೇಲೆ ಪ್ರಭಾವ ಬೀಳಲಿದೆ.
ಮರಾಠವಾಡ (46 ಕ್ಷೇತ್ರ): ಒಟ್ಟು 8 ಜಿಲ್ಲೆಗಳನ್ನು ಹೊಂದಿರುವ ಈ ಪ್ರದೇಶ ಮರಾಠಿ ಚಳುವಳಿಯ ಕೇಂದ್ರ ಸ್ಥಾನ. ಮರಾಠಿ ಭಾಷಿಕರನ್ನು ಒಬಿಸಿ ಸಮುದಾಯಕ್ಕೆ ಸೇರಿಸಬೇಕು ಎಂದು ಹೋರಾಟಗಾರ ಮನೋಜ್ ಜಾರಂಗೆ ಪ್ರತಿಭಟನೆ ಆರಂಭಿಸಿದ್ದೂ ಈ ಪ್ರದೇಶದಲ್ಲಿಯೇ. ಹೀಗಾಗಿ ಯಾವುದೇ ಪಕ್ಷ ಅಥವಾ ಮೈತ್ರಿಕೂಟಕ್ಕೆ ಈ ಪ್ರದೇಶವನ್ನು ನಿಭಾಯಿಸುವುದೆಂದರೆ ಸವಾಲಿನ ಕೆಲಸವೇ. ಲೋಕಸಭೆ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ ಮಹಾಯುತಿಗೆ ಭಾರೀ ಹಿನ್ನೆಡೆಯಾಗಿದೆ.
ಥಾಣೆ- ಕೊಂಕಣ್ (39 ಕ್ಷೇತ್ರ): ನೀರೂರಿಸುವ ಅಲೊ#àನ್ಸೋ ಮಾವು, ಗೇರು ಬೆಳೆಗೆ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಶಿವಸೇನೆ ಮತ್ತು ಶಿವಸೇನೆ ನಡುವೆ ನೇರ ಹೋರಾಟ ಇದೆ. ಕಳೆದ ಬಾರಿ ಅವಿಭಜಿತ ಶಿವಸೇನೆ 15, ಬಿಜೆಪಿ 11 ಕ್ಷೇತ್ರಗಳಲ್ಲಿ ಗೆದ್ದಿತ್ತು. ಶಿವಸೇನೆ ವಿಭಜನೆಗೊಂಡ ಬಳಿಕ ಉದ್ಧವ್ ಬಣದ ಮುಖಂಡರು ಏಕನಾಥ ಶಿಂಧೆಯವರಿಗೆ ನಿಷ್ಠೆ ಪ್ರದರ್ಶಿಸಿದ್ದಾರೆ.
ಮುಂಬಯಿ (36 ಕ್ಷೇತ್ರ): 2019ರಲ್ಲಿ ಬಿಜೆಪಿ ಮತ್ತು ಅವಿಭಜಿತ ಶಿವಸೇನೆ ಒಟ್ಟಾಗಿ ಇದ್ದಾಗ 22 ಕ್ಷೇತ್ರಗಳನ್ನು ಗೆದ್ದಿದ್ದವು. ಕಾಂಗ್ರೆಸ್ ಮತ್ತು ಎನ್‌ಸಿಪಿ 14 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದವು. ಶಿವಸೇನೆ ಮತ್ತು ಎನ್‌ಸಿಪಿ ವಿಭಜನೆ ಬಳಿಕ, ಲೋಕಸಭೆ ಚುನಾವಣೆ ಬಳಿಕ ಚಿತ್ರಣ ಬದಲಾಗಿದೆ. ಎಂವಿಎ ಒಟ್ಟು 21 ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಮಹಾಯುತಿ ಪ್ರಭಾವಳಿ ಕೇವಲ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ವ್ಯಕ್ತವಾಗಿದೆ.
ಬಟೇಂಗೆ ತೊ ಕಟೇಂಗೆ ವಿವಾದ
ನ.20ರ ಮತದಾನಕ್ಕೆ ಇನ್ನು ಹೆಚ್ಚು ದಿನಗಳಿಲ್ಲ. ಆಗಲೇ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ “ಬಟೇಂಗೆ ತೊ ಕಟೇಂಗೆ’ ಎಂಬ ಮಾತು ಎನ್‌ಡಿಎ ಮೈತ್ರಿ ಕೂಟದಲ್ಲಿಯೇ ತಕರಾರು ಸೃಷ್ಟಿಸಿತ್ತು. ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣದ ನಾಯಕ ಅಜಿತ್ ಪವಾರ್ ಅವರೇ “ಉತ್ತರ ಪ್ರದೇಶದ ಮಾತುಗಳು ನಮ್ಮಲ್ಲಿಗೆ ಅನ್ವಯವಾಗುವುದಿಲ್ಲ ಮತ್ತು ಈ ಉದ್ಘೋಷವನ್ನು ನಾವು ಬಳಕೆ ಮಾಡುವುದಿಲ್ಲ’ ಎಂದು ನೇರವಾಗಿಯೇ ಹೇಳಿದ್ದರೆ, ಮಹಾರಾಷ್ಟ್ರ ಬಿಜೆಪಿಯ ನಾಯಕರಾಗಿರುವ ಅಶೋಕ್ ಚವಾಣ್ ಮತ್ತು ಪಂಕಜಾ ಮುಂಢೆ ವಿರೋಧವಾಗಿರುವ ಧ್ವನಿಯಲ್ಲಿ ಮಾತಾಡಿದ್ದಾರೆ. ಬಿಜೆಪಿ ನಾಯಕ ಮತ್ತು ಡಿಸಿಎಂ ದೇವೇಂದ್ರ ಫಡ್ನವೀಸ್, “ಎಂವಿಎ ಪ್ರಚಾರಕ್ಕೆ ಅದು ತಿರುಗೇಟು’ ಎಂದರೂ ಅದು ತೃಪ್ತಿದಾಯಕ ಎಂದು ಅನಿಸಿಲ್ಲ ಎನ್ನುವುದು ಸ್ಪಷ್ಟ.
ಈ ಬಾರಿ 4,136 ಅಭ್ಯರ್ಥಿಗಳು
ಮಹಾರಾಷ್ಟ್ರ ಚುನಾವಣೆಯಲ್ಲಿ ಈ ಬಾರಿ ಸ್ಪರ್ಧಿಸಿರುವವರ ಸಂಖ್ಯೆ 4,136 ಮಂದಿ. 2019ರ ಚುನಾವಣೆಯಲ್ಲಿ ಸ್ಪರ್ಧಿ ಸಿದ್ದವರ ಸಂಖ್ಯೆ 3,239. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ 27.7ರಷ್ಟು ಸ್ಪರ್ಧಿಗಳ ಪ್ರಮಾಣ ಹೆಚ್ಚಾಗಿದೆ. ಅಂದ ಹಾಗೆ 4,136 ಮಂದಿಯ ಪೈಕಿ ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆಯೇ 2,086. 1995ರಲ್ಲಿ 3,196 ಮಂದಿ ಸ್ಪರ್ಧಿಸಿದ್ದೇ ಅಧಿಕವಾಗಿತ್ತು. ಪಕ್ಷೇತರ ಅಭ್ಯರ್ಥಿಗಳ ಜತೆಗೆ ಆಯಾ ಪಕ್ಷಗಳಿಂದ ಟಿಕೆಟ್ ಸಿಗಲಿಲ್ಲವೆಂದು ಬಂಡಾಯ ಎದ್ದು ಕಣಕ್ಕೆ ಇಳಿದಿರುವವರ ಸಂಖ್ಯೆಯೂ ಹೆಚ್ಚಾಗಿದೆ.
ಚುನಾವಣ ವಿಷಯಗಳು
1. ಮರಾಠರಿಗೆ ಮೀಸಲು ನೀಡುವ ಅಂಶ
2. ರಾಜ್ಯದಲ್ಲಿ ಹೆಚ್ಚುತ್ತಿರುವ ಬರ, ರೈತರ ಆತ್ಮಹತ್ಯೆ
3. ಕರ್ನಾಟಕ ಮಾದರಿ ಗ್ಯಾರಂಟಿ ಪ್ರಸ್ತಾಪ
4. ಜಾತಿ ಗಣತಿ ನಡೆಸುವ ವಾಗ್ಧಾನದ ಪ್ರಭಾವ
5. ಶಿವಸೇನೆ, ಎನ್‌ಸಿಪಿ ಪಕ್ಷಗಳ ವಿಭಜನೆ ವಿಚಾರ
– ಸದಾಶಿವ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Mollywood: ಸೂಪರ್ ಸ್ಟಾರ್ ಮೋಹನ್ ಲಾಲ್‌ಗೆ ‘ಆವೇಶಮ್ʼ ನಿರ್ದೇಶಕ ಆ್ಯಕ್ಷನ್ ಕಟ್
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.