ಮೊದಲು ವರ್ಗ ಬಳಿಕ ಹುದ್ದೆ ಸೃಷ್ಟಿ !
Team Udayavani, Jul 22, 2019, 5:17 AM IST
ಬೆಂಗಳೂರು: ‘ವರ್ಗಾವಣೆ ಮಾಮೂಲು, ಇದರಲ್ಲೇನೂ ವಿಶೇಷ ಇಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನ ಸಭೆಯಲ್ಲಿ ವರ್ಗಾವಣೆ ಯನ್ನು ಸಮರ್ಥಿಸಿ ಕೊಂಡಿದ್ದಾರೆ. ಆದರೆ, ಸಾರಿಗೆ ನಿಗಮದಲ್ಲಿ ಇತ್ತೀಚೆಗಾದ ವರ್ಗಾ ವಣೆ ಮಾಮೂಲಿ ಆಗಿಲ್ಲ ಹಾಗೂ ವಿಶೇಷವೂ ಆಗಿದೆ!
ಯಾಕೆಂದರೆ, ನಿವೃ ತ್ತಿಗೆ 11 ತಿಂಗಳು ಬಾಕಿ ಇರುವಾಗ ಅಧಿಕಾರಿ ಯೊಬ್ಬರನ್ನು ಬೆಂಗ ಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಯಿಂದ ಸುಮಾರು 500 ಕಿ.ಮೀ. ದೂರದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ. ಹೀಗೆ ಆ ಅಧಿಕಾರಿ ಯನ್ನು ವರ್ಗಗೊಳಿಸಿದ 2 ದಿನಗಳ ಬಳಿಕ ಹುದ್ದೆಯನ್ನು ಸೃಷ್ಟಿಸಲಾಗಿದೆ. ಈ ನಡೆ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಬಿಎಂಟಿಸಿಯ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿಯಾಗಿದ್ದ ಎಲ್. ಜಯಪ್ರಕಾಶ್ ಅವರ ಸೇವಾವಧಿ ಇನ್ನು ಕೇವಲ 11 ತಿಂಗಳು ಇರುವಾಗ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಇಕೆಆರ್‌ಟಿಸಿ)ಕ್ಕೆ ಮುಖ್ಯ ಭದ್ರತಾ, ಜಾಗೃತಾಧಿಕಾರಿಯನ್ನಾಗಿ ಜೂ.8 ರಂದು ವರ್ಗಾವಣೆ ಮಾಡಲಾಗಿದೆ. ಆದರೆ ಈ ನಿಗಮದಲ್ಲಿ ಇಂತಹ ಹುದ್ದೆ ಪ್ರಸ್ತುತ ಇರಲಿಲ್ಲ. ಹಾಗಾಗಿ ಜೂ. 10ರಂದು ಈ ಹುದ್ದೆ ಸೃಷ್ಟಿಸಿ ಆದೇಶ ಹೊರ ಡಿಸಲಾಗಿದೆ. ವಿಚಿತ್ರ ವೆಂದರೆ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಇದೇ ಹುದ್ದೆಗಳು ಈಗಲೂ ಖಾಲಿ ಇವೆ.
ಆಡಳಿತಾತ್ಮಕ ಕಾರಣ
ಎನ್‌ಇಕೆಆರ್‌ಟಿಸಿಯಲ್ಲಿ 2018 ರ ಮೇನಲ್ಲಿ ಆಡಳಿತಾತ್ಮಕ ಕಾರಣಗಳಿಂದ ಆವಶ್ಯಕತೆಗೆ ಅನು ಗುಣವಾಗಿ ಪುನರ್‌ಸ್ಥಾಪಿಸುವ ಷರತ್ತಿಗೊಳಪಟ್ಟು ಈ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಹುದ್ದೆ (ದರ್ಜೆ-1)ಯನ್ನು ರದ್ದು ಗೊಳಿಸಲಾಗಿತ್ತು.
ಈಗ ಅದೇ ‘ಆಡಳಿತಾತ್ಮಕ ಕಾರಣ’ಗಳ ಹಿನ್ನೆಲೆಯಲ್ಲಿ ಮರುಸ್ಥಾಪನೆ ಮಾಡಲಾಗಿದೆ. ವಿಚಿತ್ರವೆಂದರೆ ಅಂದು ಸಾಹಿತಿ ಗಿರೀಶ್ ಕಾರ್ನಾಡ್ ನಿಧನರಾದ ಹಿನ್ನೆಲೆಯಲ್ಲಿ ಸರಕಾರಿ ರಜೆ ಘೋಷಿಸಲಾಗಿತ್ತು. ಇದೇ ದಿನ ಜಯಪ್ರಕಾಶ್ ಅವರಿಗೆ ಬಿಡುಗಡೆ ಆದೇಶ (ರಿಲೀವ್ ಆರ್ಡರ್)ವನ್ನೂ ನೀಡಲಾಗಿದೆ. ಈ ಸಂಬಂಧದ ಆದೇಶ ಪ್ರತಿಗಳು ‘ಉದಯವಾಣಿ’ಗೆ ಲಭ್ಯವಾಗಿವೆ.
ಕೆಲವು ತಿಂಗಳುಗಳ ಹಿಂದೆ ನಿವೃತ್ತಿಗೆ ಮೂರು ತಾಸು ಮುನ್ನ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಿದ್ದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಈಗ ಮತ್ತೂಬ್ಬ ಅಧಿಕಾರಿಯನ್ನು ತರಾತುರಿಯಲ್ಲಿ ವರ್ಗಾವಣೆ ಮಾಡಿದ್ದು ಸಾರಿಗೆ ನಿಗಮಗಳ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಯಪ್ರಕಾಶ್ ತಮ್ಮ ಅಧಿಕಾರಾವಧಿಯಲ್ಲಿ ಕೆಲವು ಅಧಿಕಾರಿಗಳ ಭ್ರಷ್ಟಾಚಾರ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಇದರಿಂದ ಕೆಂಗಣ್ಣಿಗೆ ಗುರಿಯಾಗಿದ್ದರು. ಅದು ಅವರ ದಿಢೀರ್ ವರ್ಗಾವಣೆ ರೂಪದಲ್ಲಿ ಪರಿಣಮಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಿವೃತ್ತಿಗೆ ಎರಡು ವರ್ಷಗಳು ಬಾಕಿ ಇರುವ ಯಾವುದೇ ಅಧಿಕಾರಿಯನ್ನು ವರ್ಗಾವಣೆ ಮಾಡುವಂತಿಲ್ಲ ಎಂಬ ನಿಯಮ ಇದೆ. ಈ ಹಿನ್ನೆಲೆಯಲ್ಲಿ ಜಯಪ್ರಕಾಶ್, ತಮ್ಮ ವರ್ಗಾವಣೆ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆ ಕೂಡ ತಂದಿದ್ದರು ಎಂದೂ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ಇವರಿಗೆ ವರ್ಗಾವಣೆ ವಿನಾಯಿತಿ
ಒಂದೆಡೆ ರದ್ದಾದ ಹುದ್ದೆಯನ್ನು ಮರುಸೃಷ್ಟಿಸಿ ವರ್ಗಾವಣೆ ಮಾಡಲಾಗುತ್ತಿದೆ. ಆದರೆ, ಮತ್ತೂಂದೆಡೆ ಒಂದೂವರೆ ಎರಡು ದಶಕಗಳಿಂದ ಒಂದೇ ಕಡೆ ಬೀಡುಬಿಟ್ಟಿರುವ ಅಧಿಕಾರಿಗಳು/ ಸಿಬಂದಿಗೆ ಮಾತ್ರ ಇದರಿಂದ ವಿನಾಯಿತಿ ನೀಡಲಾಗಿದೆ. ಈ ಅಸಾಮಾಜಿಕ ನ್ಯಾಯ’ವೂ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.