ಅಟಲ್‌ ನೆನಪು; ಲತಾ “ಮೇರೆ ವತನ್‌…’ ಅಟಲ್‌ ಕಣ್ಣಂಚು ತೇವಗೊಳಿಸಿತ್ತು…

ವಾಜಪೇಯಿ ಅವರು ಶ್ಯಾಮಲಾ ಭಾವೆ ಅವರನ್ನು ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

Team Udayavani, Aug 16, 2022, 10:56 AM IST

thumb 6 web

ಹಿರಿಯ ರಾಜನೀತಿಜ್ಞ ಮತ್ತು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ನಮ್ಮನ್ನಗಲಿ ಇಂದಿಗೆ 4 ವರ್ಷಗಳಾಯಿತು. ಅಟಲ್‌ ಬಿಹಾರಿ ವಾಜಪೇಯಿ ಅವರು ಓರ್ವ ಮಹಾನ್‌ ಭಾಷಣಕಾರ ಮತ್ತು ಕವಿ ಎನ್ನುವುದು ಎಲ್ಲರಿಗೂ ಗೊತ್ತು. ಅವರು ಓರ್ವ ಉತ್ತಮ ಆಡಳಿತಗಾರರೆನ್ನುವುದನ್ನೂ ಸಾಬೀತುಪಡಿಸಿದ್ದಾರೆ. ತಮ್ಮ ಸತ್ವಯುತ ಭಾಷಣದ ಮೂಲಕ ಅವರು ಲಕ್ಷಾಂತರ ಜನರನ್ನು ಸಮ್ಮೋಹನಗೊಳಸಿದ್ದರು.

ಆದರೆ ಅವರು ಸಂಗೀತದ ಬಗ್ಗೆಯೂ ಅಪಾರ ಒಲವು ಇರಿಸಿಕೊಂಡಿದ್ದರೆಂಬುದು ಅನೇಕರಿಗೆ ಗೊತ್ತಿಲ್ಲ. ಅದೃಷ್ಟವಶಾತ್‌ ಈ ಸತ್ಯವನ್ನು ಹತ್ತಿರದಿಂದ ಬಲ್ಲವನಾಗಿದ್ದೆ. ಅವರ ಜತೆ ನಾನಿದ್ದ ಸಂದರ್ಭದಲ್ಲೇ ಅವರು ಸಂಗೀತ ಕೇಳಬೇಕೆನ್ನುವ ಇಚ್ಚೆ ವ್ಯಕ್ತಪಡಿಸಿದ ಸಂದರ್ಭವನ್ನು ನಾನು ಇಲ್ಲಿ ನಿಮ್ಮ ಮುಂದಿರುಸುತ್ತಿದ್ದೇನೆ.

1982- ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ 3 ದಿನಗಳ ಅಖೀಲ ಭಾರತ ಯುವ ಮೋರ್ಚಾ(ಬಿಜೆಪಿ ಯುವ ಘಟಕ) ಸಮಾವೇಶ ನಡೆದಿತ್ತು. ಆಡ್ವಾಣಿಯವರು ಸಮಾವೇಶ ಉದ್ಘಾಟಿಸಿದರು. ವಾಜಪೇಯಿ ಅವರು ಸಮಾರೋಪ ಭಾಷಣ ಮಾಡುವುದಕ್ಕಾಗಿ ಮೂರನೇ ದಿನ ಬಂದಿದ್ದರು. ಆಗಿನ ಬಿಜೆಪಿ ರಾಜ್ಯಾಧ್ಯಕ್ಷ ಎ.ಕೆ. ಸುಬ್ಬಯ್ಯ ಅವರು ನನಗೆ 500 ರೂ. ನೀಡಿ ಯುವಮೋರ್ಚಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು. ಸಮಾ ರೋಪ ಸಮಾರಂಭಕ್ಕೆ ಸ್ವಲ್ಪ ಮುನ್ನ ಚಹಾ ಸಮಯದಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಓದುತ್ತಿದ್ದ ಹಿಂದಿ ದಿನಪತ್ರಿಕೆಯ ಜಾಹೀರಾತೊಂದರಲ್ಲಿ ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರ ಸಂಗೀತ ಕಚೇರಿ ಅಲಹಾಬಾದ್‌ನಲ್ಲಿ ನಡೆ ಯುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಸಮಾರೋಪ ಸಮಾರಂಭದ ನಂತರ ಆ ಸಂಗೀತ ಕಛೇರಿಯಲ್ಲಿ ಹಾಜರಿರಬೇಕೆಂದು ಅವರು ಸಮಾವೇಶದ ಸಂಘಟಕರಿಗೆ ತಿಳಿಸಿದರು.

ಸಂಗೀತ ಕಛೇರಿ ನಡೆಯುತ್ತಿದ್ದ ಸಂಗೀತ ಸಭಾಗೆ ನಾನು ಕೂಡ ಭೇಟಿ ನೀಡಿದ್ದೆ. ವಾಜಪೇಯಿಯವರಿಂದ ಏನಾದರೂ ವಿಶೇಷ ಮನವಿ ಇದ್ದರೆ ತಿಳಿಸುವಂತೆ ಸಂಘಟಕರು ಸೂಚಿಸಿದಾಗ ವಾಜಪೇಯಿ ಅವರು ಸಣ್ಣ ಚೀಟಿಯಲ್ಲಿ ಏನೋ ಬರೆದು ಉಸ್ತಾದರಿಗೆ ಕಳಿಸಿದರು. ಮೇಘಮಲ್ಹಾರ್‌ ರಾಗದಲ್ಲಿ ಹೆಸರಾಂತ ಗಝಲ್‌ ಗಾಯಕ ಮತ್ತು ಗೀತರಚನಾಕಾರ ಅಕºರ್‌ ಅಲಹಾಬಾದಿ ಅವರ ಯಾವುದೇ ಗೀತೆಯನ್ನು ನುಡಿಸುವಂತೆ ವಾಜಪೇಯಿ ಅವರು ಕೋರಿದ್ದರು. ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರು ನಕ್ಕು 1952ರ ಹಿಂದಿ ಚಲನಚಿತ್ರ ಬೈಜು ಬಾವ್ರದಲ್ಲಿ ಮಹಮ್ಮದ್‌ ರಫಿ ಮತ್ತು ಲತಾ ಮಂಗೇಶ್ಕರ್‌ ಹಾಡಿದ್ದ ಝೂಲೆ ಮೇ ಪವನ್‌ ಕೇ, ಆಯೀ ಬಹಾರ್‌ ಗೀತೆಯನ್ನು ನುಡಿಸಿದರು. ನಂತರ ಅವರು ಅಕ್ಬರ್‌ ಅಲಹಾಬಾದಿ ರಚಿಸಿದ ಹಂಗಾಮ ಹೈ ಕ್ಯೋ ಬರ್ಪಾ, ತೋಡಿ ಸಿ ಜೋ ಪೀಲೀ ಹೈ ಎಂಬ ಇಂಪಾದ ಗೀತೆಯನ್ನು ದರ್ಬಾರಿ ರಾಗದಲ್ಲಿ ನುಡಿಸಿದರು. ಅಮೋಘ ಸಂಗೀತದಿಂದ ಸಂತುಷ್ಟರಾದ ವಾಜಪೇಯಿ ಅವರು ಉಸ್ತಾದರನ್ನು ಅಪ್ಪಿ ಮೆಚ್ಚುಗೆ ವ್ಯಕ್ತಪಡಿಸಿದರು.

1983-ವಾಜಪೇಯಿ ಅವರು ಮದ್ರಾಸ್‌(ಈಗಿನ ಚೆನ್ನೈ)ನಲ್ಲಿ ನಡೆದ ದಕ್ಷಿಣ ವಲಯ ಪದಾಧಿಕಾರಿಗಳ ಸಭೆಯಲ್ಲಿ ಭಾಷಣ ಮಾಡಿ ದ್ದರು. ಸಭೆಯ ಎರಡನೇ ದಿನ ವಾಜಪೇಯಿ ಅವರೊಂದಿಗೆ ಪಕ್ಷದ ಪ್ರಧಾನಕಾರ್ಯದರ್ಶಿ ಜನಾ ಕೃಷ್ಣಮೂರ್ತಿ ಮಾತನಾಡುತ್ತಾ ಮದ್ರಾಸ್‌ನಲ್ಲಿ ಡಾ.ಎಂ.ಎಸ್‌.ಸುಬ್ಬುಲಕ್ಷ್ಮೀ ಅವರ ಸಂಗೀತ ಕಛೇರಿ ನಡೆಯಲಿದ್ದು ಅದರಲ್ಲಿ ಪಾಲ್ಗೊಳ್ಳಲು ತಮಗೇನಾದರೂ ಆಸಕ್ತಿ ಇದೆಯಾ ಎಂದು ಪ್ರಶ್ನಿಸಿದರು.

ಅದಕ್ಕೆ ವಾಜಪೇಯಿ, ಓಹ್‌, ಅವರು(ಎಂ.ಎಸ್‌.) ಸಾಕ್ಷಾತ್‌ ಶಾರದಾ ದೇವಿ. ಅವರ ಗಾಯನವನ್ನು ಕೇಳಬೇಕು ಎಂದರು. ನಾವೆಲ್ಲ ಸಂಗೀತ ಕಛೇರಿ ನಡೆಯಲಿದ್ದ ಮದ್ರಾಸ್‌ ಸಂಗೀತ ಅಕಾಡೆಮಿಗೆ ತೆರಳಿದೆವು. ಎಂದಿನಂತೆ ಉಭಯ ಕುಶಲೋಪರಿಯ ನಂತರ ಸಂಗೀತ ಕಛೇರಿ ಆರಂಭವಾ ಯಿತು. ಕಛೇರಿ ನಡೆಯುತ್ತಿದ್ದ ಮಧ್ಯದಲ್ಲಿ ಸಂಘಟಕರು ತಮಗೆ ಯಾವುದಾದರೂ ನಿರ್ದಿಷ್ಟ ಗೀತೆ ಕೇಳಬೇಕೆಂದಿದೆಯೇ ಎಂದು ವಾಜಪೇಯಿ ಅವರನ್ನು ಕೇಳಿದರು. ಅದಕ್ಕೆ
ವಾಜಪೇಯಿ ಅವರು ಯಾವುದೇ ಮೀರಾ ಭಜನೆ ಮತ್ತು ರಾಜಾಜಿ ಎಂದು ಜನಪ್ರಿಯರಾಗಿದ್ದ ಚಕ್ರವರ್ತಿ ರಾಜಗೋಪಾಲಾಚಾರಿ ಅವರ ಯಾವುದೇ ರಚನೆ ಮತ್ತು ಕಂಚಿ ಪರಮಾಚಾರ್ಯರ ಮೈತ್ರೀಂ ಭಜತಾ ಹಾಡುವಂತೆ ಕೋರಿದರು. ಸುಬ್ಬುಲಕ್ಷ್ಮೀ ಅವರು ಹರಿ ತುಂ ಹರೋ ಎಂಬ ಸುಂದರ ಮೀರಾ ಭಜನೆ, ರಾಜಾಜಿ ಅವರ ಕುರೈ ಒಂಡ್ರುಮಿಲ್ಲೆ„ ಮತ್ತು ಕಂಚಿ ಪರಮಾಚಾರ್ಯರ ಮೈತ್ರೀಂ ಭಜತಾ ಗೀತೆಯನ್ನು ಅಂತರಂಗ ತಟ್ಟುವಂತೆ ಹಾಡಿ ಸಂಗೀತದ ರಸದೌತಣ ನೀಡಿದರು. ಕಛೇರಿ ಮುಗಿದು ವಾಜಪೇಯಿ ಅವರು ಸುಬ್ಬುಲಕ್ಷ್ಮೀ ಅವರಿಗೆ ಆನಂದ ಭಾಷ್ಪದೊಂದಿಗೆ ಧನ್ಯವಾದ ಹೇಳಿ ಹೊರಟರು.

1984-ಪುಣೆಯ ಲೋಕಮಾನ್ಯ ಬಾಲಗಂಗಾಧರ್‌ ತಿಲಕ್‌ ಸ್ಮತಿ ಮಂದಿರದಲ್ಲಿ ಬಿಜೆಪಿ ರಾಷ್ಟ್ರೀಯ ಮಂಡಳಿ ಅಧಿವೇಶನ ನಡೆಯಿತು. ಅಧಿವೇಶನದಲ್ಲಿ ಪಾಲ್ಗೊಂಡಿದ್ದ ವಾಜಪೇಯಿ ಅವರು ಯಾವುದಾದರೂ ಉತ್ತಮ ಸಂಗೀತ ಕೇಳಬೇಕಿದೆ ಎಂದು ಸಂಘಟಕರಿಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಅಧಿವೇಶನದ ಸ್ಥಳಕ್ಕೆ ಸಂಗೀತ ಕಾರ್ಯಕ್ರಮ ನೀಡುವುದಕ್ಕಾಗಿ ಎರಡನೇ ದಿನ ಪ್ರಖ್ಯಾತ ಗಾಯಕ ಸುರೇಶ್‌ ವಾಡ್ಕರ್‌ ಆಗಮಿಸಿದರು. ತಮಗಾಗಿ ಯಾವುದಾ ದರೂ ನಿರ್ದಿಷ್ಟ ಹಾಡು ಬೇಕೆಂದರೆ ತಿಳಿಸಿ ಎಂದು ವಾಜಪೇಯಿ ಅವರಿಗೆ ವಾಡ್ಕರ್‌ ಹೇಳಿದರು. ಅದಕ್ಕೆ ವಾಜಪೇಯಿ, ತುಂ ಮುಝೆ ಅಪ್‌ ನೇ ಕ್ಷಿತಿಜ್‌ ಸೆ ಘೇರ್‌ ಕರ್‌ ಬಂಧೀ ಬನಾಲೋ ಹಾಡುವಂತೆ ಕೋರಿದರು. ಆ ಗೀತೆಯನ್ನು ವಾಡ್ಕರ್‌ ಸಂತಸ ದಿಂದಲೇ ಹಾಡಿದರು. ಸಂಗೀತ ಕಛೇರಿ ಮುಗಿಯು ತ್ತಿದ್ದಂತೆ ವಾಜಪೇಯಿ ಅವರ ಮುಖದಲ್ಲಿ ಒಂದು ರೀತಿಯ ಮನಸು ಹಗುರಾದ ಭಾವ ಕಂಡಿತು.

1985- ಇಂದಿರಾ ಗಾಂಧಿ ಅವರ ಹತ್ಯೆ ನಂತರ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋಲನುಭವಿಸಿತ್ತು. ಗ್ವಾಲಿಯರ್‌ನಲ್ಲಿ ಸ್ವತಃ ವಾಜಪೇಯಿ ಅವರೇ ಸೋತಿದ್ದರು. ಪಕ್ಷದ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಸಲುವಾಗಿ ವಾಜಪೇಯಿ ಬೆಂಗಳೂರಿಗೆ ಬಂದಿದ್ದರು. ಆ ಸಮಯದಲ್ಲಿ ಬೆಂಗಳೂರು ನಗರ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದ ರಾಮಚಂದ್ರಗೌಡರು ಚಹಾ ಕೂಟಕ್ಕಾಗಿ ಸಂಜೆ ತಮ್ಮ ಮನೆಗೆ ಆಗಮಿಸುವಂತೆ ವಾಜಪೇಯಿ ಅವರನ್ನು ಆಹ್ವಾನಿಸಿದ್ದರು.

ಅದು ಶೇಷಾದ್ರಿಪುರಂನ ಲಿಂಕ್‌ ರಸ್ತೆಯಲ್ಲಿರುವ ಆಂಜನೇಯ ಬ್ಲಾಕ್‌ ನ ಮೊದಲ ಬೀದಿಯಲ್ಲಿರುವ ಸಾಮಾನ್ಯ ಮನೆಯಾಗಿತ್ತು. ಹೆಸರಾಂತ ಹಿಂದೂಸ್ಥಾನಿ ಗಾಯಕಿ ಶ್ಯಾಮಲಾ ಜಿ. ಭಾವೆ ಅವರು ಕೂಡ ವಾಜಪೇಯಿ ಅವರನ್ನು ಭೇಟಿಯಾಗಲು ಅಲ್ಲಿಗೆ ಬಂದಿದ್ದರು. ಅವರೂ ಓರ್ವ ಹಿಂದೂ ಸ್ಥಾನಿ ಸಂಗೀತದ ಗಾಯಕಿ ಎಂದು ಗೊತ್ತಾಗುತ್ತಲೇ ವಾಜಪೇಯಿ ಅವರು ತಮಗಾಗಿ ಒಂದು ಗೀತೆ ಹಾಡುವಂತೆ ಕೋರಿದರು. ಅವರು ಮಝಾ ದರುಶನ ಧೀರೇ ರಾಮ ಮರಾಠಿ ಅಭಂಗ್‌ವೊಂದನ್ನು ಹಾಡಿದರು. ಇದರಿಂದ ಸಂತುಷ್ಟರಾದ ವಾಜಪೇಯಿ ಅವರು ಶ್ಯಾಮಲಾ ಭಾವೆ ಅವರನ್ನು ದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದರು.

1989- ಸಿಯಾನ್‌ ಬಾಂಬೆ(ಈಗಿನ ಮುಂಬೈ)ಯಲ್ಲಿರುವ ಷಣ್ಮುಖಾನಂದ ಸಭಾಂಗಣದಲ್ಲಿ 1989ರ ಜೂನ್‌ನಲ್ಲಿ ಬಿಜೆಪಿ ಪೂರ್ಣಾಧಿವೇಶನ ನಡೆಯಿತು. ಅಧಿವೇಶನಕ್ಕೆ ಬಂದಿದ್ದ ವಾಜಪೇಯಿ ಅವರು ದೇಶದ ಅಪೂರ್ವ ಪ್ರತಿಭೆಯ ಗಾಯಕಿ ಲತಾ ಮಂಗೇಶ್ಕರ್‌ ಅವರನ್ನು ಭೇಟಿಯಾಗುವ ಇಚ್ಚೆ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಪೂರ್ಣಾಧಿವೇಶನದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದ ಪ್ರಮೋದ್‌ ಮಹಾಜನ್‌ ಚರ್ಚ್‌ ಗೇಟ್‌ ಬಳಿಯಲ್ಲಿರುವ ಕೆ.ಸಿ. ಕಾಲೇಜ್‌ ಸಭಾಂಗಣದಲ್ಲಿ
ಸಂಗೀತ ಕಾರ್ಯಕ್ರಮ ಆಯೋಜಿಸಿದರು.

ಈ ಸಂದರ್ಭದಲ್ಲಿ ಲತಾ ಮಂಗೇಶ್ಕರ್‌ ಅವರನ್ನು ಆಲಂಗಿಸಿದ ವಾಜಪೇಯಿ ಅವರು ತಮಗಾಗಿ ಕವಿ ಪ್ರದೀಪ್‌ ರಚಿಸಿ ಕೆ.ರಾಮಚಂದ್ರ ರಾಗಸಂಯೋಜನೆ ಮಾಡಿದ ಆಯೇ ಮೇರೆ ವತನ್‌ ಕೇ ಲೋಗೋ ಮತ್ತು ಮೊಘಲ್‌-ಎ-ಅಝಂನ ಪ್ಯಾರ್‌ ಕಿಯಾತೋಡರ್‌ ನಾ ಕ್ಯಾ ಎಂಬ ಎರಡು ಅಮರಗೀತೆಯಗಳನ್ನು ಹಾಡುವಂತೆ ಕೋರಿಕೊಂಡರು. ಲತಾ ಮಂಗೇಶ್ಕರ್‌ ಅವರು ಆಯೇ ಮೆರೇ ವತನ್‌ ಕೇ ಲೋಗೋ ಹಾಡುವಾಗ ವಾಜಪೇಯಿ ಅವರ ಕಣ್ಣಂಚು ತೇವಗೊಂಡಿತ್ತು.

2002- 2002ರ ಮೇ 10ರಂದು ಪ್ರತಿಭಾವಂತ ಕಲಾವಿದೆ ಶಬನಾ ಅಜ್ಮಿ ಅವರ ತಂದೆ ಕೈಫಿ ಅಜ್ಮಿ ಅವರು ಮುಂಬೈನಲ್ಲಿ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಪ್ರಧಾನಿ ಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿರುವ ಶಬನಾ ಅಜ್ಮಿ ಅವರ ನಿವಾಸಕ್ಕೆ ತೆರಳಿ ಕೈಫಿ ಅಜ್ಮಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಪತ್ರಕರ್ತರು ವಾಜಪೇಯಿ ಅವರಿಗೆ ಕೈಫಿ ಅಜ್ಮಿ ಅವರ ಯಾವ ಗೀತೆ ನಿಮಗೆ ಪ್ರಿಯವಾದದ್ದು ಎಂದು ಪ್ರಶ್ನಿಸಿದಾಗ, ವಾಜಪೇಯಿ ಅವರು ಅರೆಗಣ್ಣು ಮುಚ್ಚಿ ಯಾ ದಿಲ್‌ ಕಿ ಸುನೊ, ದುನಿಯಾವಾಲೋ, ಯಾ ಮುಜ್ಕೋ ಭಿಚ್‌ ಚುಪ್‌ ರೆಹನೇ ದೋ, ಹಮ್ಕೋ ಖುಷೀ ಕೈಸೇ ಕೆಹ್ದೋ ಎಂಬ ಅಮರಗೀತೆಯನ್ನು ನೆನಪಿಸಿದರು. 1966ರ ಅನುಪಮಾ ಎಂಬ ಹಿಂದಿ ಚಲನಚಿತ್ರದ ಈ ಗೀತೆಯ ಬಗ್ಗೆ ಹೇಳುವಾಗ ವಾಜಪೇಯಿ ಅವರ ಕಣ್ಣು ತುಂಬಿ ಬಂದಿತ್ತು.

1968ರಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರು 1968 ರ ಫೆ.11ರಂದು ಉತ್ತರಪ್ರದೇಶದ ವಾರಾ ಣಸಿ ಹೊರವಲಯದ ಮುಘಲ್‌ ಸರಾಯ್‌ ರೇಲ್ವೇ ನಿಲ್ದಾಣದ ಬಳಿ ನಿಗೂಢವಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಆ ಘಟನೆ ಜನಸಂಘದ ಕಾರ್ಯ ಕರ್ತರಿಗೆ ಭಾರೀ ಆಘಾತ ಉಂಟುಮಾಡಿತ್ತು. ವಾಜಪೇಯಿ ಅವರು ದಿಗ್ಭ್ರಮೆಗೊಂಡು ತಡೆಯಲಸಾಧ್ಯ ದುಃ ಖದಿಂದ ಅಳುತ್ತಿದ್ದರು. ಈ ದುರಂತದ ನಂತರ ವಾಜಪೇಯಿ ಅವರು ನಿರಂತರವಾಗಿ ಮೂರು ಹಾಡುಗಳನ್ನು ಕೇಳುತ್ತಿದ್ದರು. ಒಂದು 1955ರ ಸೀಮಾ ಚಲನಚಿತ್ರಕ್ಕಾಗಿ ಮನ್ನಾಡೇ ಹಾಡಿದ ತು ಪ್ಯಾರ್‌ ಕಾ ಸಾಗರ್‌ ಹೈ ಎಂಬ ಅಮರಗೀತೆ. ಇನ್ನೊಂದು 1962ರ ಬೀಸ್‌ ಸಾಲ್‌ ಬಾದ್‌ ಎಂಬ ಹಿಂದಿ ಚಲನಚಿತ್ರಕ್ಕಾಗಿ ಹೇಮಂತ್‌ ಕುಮಾರ್‌ ಹಾಡಿದ ಬೇಕರಾರ್‌ ಕರ್ಕೇ ಹಮ್ಮೇ, ಹ್ಯೂನ ಜಾಯೀಯೇ, ಆಪ್‌ ಕೋ ಹಮಾರಿ ಕಸಂ, ಲೌಟಾಯೀಯೇ ಮತ್ತು 1959ರ ಹಿಂದಿ ಚಲನಚಿತ್ರ ರಾಣಿ ರೂಪ್‌ ಮತಿಗಾಗಿ ಮುಖೇಶ್‌ ಹಾಡಿದ ಲೌಟ್‌ ಕೆ ಆ, ಲೌಟ್‌ ಕೆ ಆ, ಲೌಟ್‌ ಕೆ ಆಜಾ ಮೆರೇ ಪ್ರೀತ್‌, ತುಜೆ ಮೆರೆ ಗೀತ್‌ ಬುಲಾತೆ ಹೈ. ವಾಜಪೇಯಿ ಅವರು ಸಂಪೂರ್ಣವಾಗಿ ಹೃದಯದ ಆಳದಿಂದಲೇ ಭಾವನಾತ್ಮಕ ವ್ಯಕ್ತಿಯಾಗಿದ್ದರು. ಅವರು ಸಹಜ ವಾಗಿ ಮತ್ತು ಪ್ರಾಮಾಣಿಕವಾಗಿ ಮಾತನಾಡುತ್ತಿದ್ದರು. ಅವ ರನ್ನು ಅತಿ ಹತ್ತಿರದಿಂದ ನಾನು ಬಲ್ಲೆ ಎಂಬುದೇ ನನ್ನ ಹೆಮ್ಮೆಗೆ ಕಾರಣವಾಗಿತ್ತು. ಅಟಲ್‌ ಬಿಹಾರಿ ವಾಜಪೇಯಿ ಅಮರ.

*ಎಸ್‌.ಎ.ಹೇಮಂತ್‌, ಹವ್ಯಾಸಿ ಪತ್ರಕರ್ತ

ಟಾಪ್ ನ್ಯೂಸ್

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya :ಗಂಡ ಗದ್ಯ, ಹೆಂಡತಿ ಪದ್ಯ ಮಕ್ಕಳು ರಗಳೆ: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್‌

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್‌

ravishankar-guruji

World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ

1-dhyan

Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

6

Mangaluru: ಕ್ರಿಸ್ಮಸ್‌ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.