ಟಿ20 ಸರಣಿ: ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯ ಭರ್ಜರಿ ಜಯ
ಆಸೀಸ್ 4-0 ನಾಗಾಲೋಟ
Team Udayavani, Feb 18, 2022, 9:00 PM IST
ಮೆಲ್ಬರ್ನ್: ವಿಶ್ವ ಚಾಂಪಿಯನ್ ಆಸ್ಟ್ರೇಲಿಯ ಪ್ರವಾಸಿ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಗೆಲುವಿನ ನಾಗಾಲೋಟ ಮುಂದುವರಿಸಿದೆ.
ಶುಕ್ರವಾರದ 4ನೇ ಪಂದ್ಯವನ್ನೂ ಗೆದ್ದು 4-0 ಮುನ್ನಡೆ ಸಾಧಿಸಿದೆ.
ಎಂಸಿಜಿಯಲ್ಲಿ ನಡೆದ ಈ ಸಣ್ಣ ಮೊತ್ತದ ಮುಖಾಮುಖಿಯನ್ನು ಆರನ್ ಫಿಂಚ್ ಪಡೆ 6 ವಿಕೆಟ್‌ಗಳಿಂದ ಗೆದ್ದಿತು. ಶ್ರೀಲಂಕಾ 8 ವಿಕೆಟಿಗೆ 139 ರನ್ ಮಾಡಿದರೆ, ಆಸೀಸ್ 18.1 ಓವರ್‌ಗಳಲ್ಲಿ 4 ವಿಕೆಟಿಗೆ 143 ರನ್ ಬಾರಿಸಿತು.
ಅಜೇಯ 48 ರನ್ ಮಾಡಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರದೇ ಈ ಪಂದ್ಯದ ಸರ್ವಾಧಿಕ ಗಳಿಕೆ. ಜೋಶ್ ಇಂಗ್ಲಿಸ್ 40 ರನ್ ಹೊಡೆದರು. ಶ್ರೀಲಂಕಾ ಸರದಿಯಲ್ಲಿ ಆರಂಭಕಾರ ಪಥುಮ್ ನಿಸ್ಸಂಕ 46 ರನ್ ಮಾಡಿದರು.
ರಿಚರ್ಡ್‌ಸನ್‌ದ್ವರು ತಲಾ 2 ವಿಕೆಟ್ ಕೆಡವಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-8 ವಿಕೆಟಿಗೆ 139 (ನಿಸ್ಸಂಕ 46, ಮೆಂಡಿಸ್ 27, ಅಸಲಂಕ 22, ಜೇ ರಿಚರ್ಡ್‌ಸನ್ 20ಕ್ಕೆ 2, ಕೇನ್ ರಿಚರ್ಡ್‌ಸನ್ 44ಕ್ಕೆ 2). ಆಸ್ಟ್ರೇಲಿಯ-18.1 ಓವರ್‌ಗಳಲ್ಲಿ 4 ವಿಕೆಟಿಗೆ 143 (ಮ್ಯಾಕ್ಸ್‌ವೆಲ್ ಔಟಾಗದೆ 48, ಇಂಗ್ಲಿಸ್ 40, ಅಗರ್ 26, ಲಹಿರು ಕುಮಾರ 22ಕ್ಕೆ 2).
ಪಂದ್ಯಶ್ರೇಷ್ಠ: ಗ್ಲೆನ್ ಮ್ಯಾಕ್ಸ್‌ವೆಲ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.