ಫಿಂಚ್, ವಾರ್ನರ್ ಅರ್ಧ ಶತಕ: ಆಸೀಸ್ ಗೆ ಗೆಲುವಿನ ಪುಳಕ
ಆಸೀಸ್ ಗೆ ಸುಲಭ ತುತ್ತಾದ ಅಫ್ಘಾನ್
Team Udayavani, Jun 2, 2019, 9:49 AM IST
ಲಂಡನ್: ಏಕದಿನ ವಿಶ್ವ ಕಪ್ ಕೂಟದ ನಾಲ್ಕನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ಥಾನ ತಂಡವನ್ನು ಏಳು ವಿಕೆಟ್ ಗಳಿಂದ ಸೋಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ಅಚ್ಚರಿ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಪ್ರೇಮಿಗಳಿಗೆ ಅಫ್ಘಾನ್ ತಂಡ ನಿರಾಸೆ ಮಾಡಿತು. ಸಾಧಾರಣ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನ ನೀಡಿದ ನೈಬ್ ಹುಡುಗರು ಹಾಲಿ ಚಾಂಪಿಯನ್ ಎದುರು ಸೋತು ಮಕಾಡೆ ಮಲಗಿದರು.
ಬ್ರಿಸ್ಟಲ್ ನ ಕೌಂಟಿ ಗ್ರೌಂಡ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿತು. ಆದರೆ ತಂಡದ ರನ್ ಖಾತೆ ಆರಂಭಕ್ಕೂ ಮೊದಲು ಮೊಹಮ್ಮದ್ ಶೆಹಜಾದ್ ವಿಕೆಟ್ ಕಳೆದುಕೊಂಡಿತು. ರೆಹಮತ್ ಶಾ (43) ಮತ್ತು ನಜೀಬುಲ್ಲಾ ಜದ್ರಾನ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಜದ್ರಾನ್ ತಂಡದ ಪರ ಏಕೈಕ ಅರ್ದಶತಕ ಬಾರಿಸಿ ಸಂಭ್ರಮಿಸಿದರು.
ನಾಯಕ ಗುಲ್ಬದಿನ್ ನೈಬ್ (31 ರನ್) ಮತ್ತು ಕೊನೆಯಲ್ಲಿ ರಶೀದ್ ಖಾನ್ 27 ರನ್ ಗಳಿಸಿ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಲು ಸಹಕರಿಸಿದರು. ಒಟ್ಟಾರೆ 38.2 ಓವರ್ ಗಳಲ್ಲಿ 207 ರನ್ ಗಳಿಗೆ ಅಫ್ಘಾನ್ ಆಲ್ ಔಟ್ ಆಯಿತು.
ಆಸೀಸ್ ಪರ ಕಮಿನ್ಸ್ ಮತ್ತು ಆಡಂ ಜಂಪಾ ತಲಾ ಮೂರು ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊನಿಸ್ ಎರಡು ಮತ್ತು ಸ್ಟಾರ್ಕ್ ಒಂದು ವಿಕೆಟ್ ಪಡೆದು ಮಿಂಚಿದರು.
ವಾರ್ನರ್, ಫಿಂಚ್ ಅರ್ಧಶತಕ
ಅಫ್ಘಾನ್ ನೀಡಿದ 208 ರನ್ ಗಳ ಸುಲಭ ಗುರಿ ಬೆನ್ನತ್ತಿದ್ದ ಆಸೀಸ್ ಗೆ ಆರಂಭಿಕರ ಅತ್ಯುತ್ತಮ ಅಡಿಪಾಯ ದೊರಕಿತು. ನಾಯಕ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅರ್ಧ ಶತಕ ಸಿಡಿಸಿ ಆಸೀಸ್ ಗೆಲುವಿನ ಹಾದಿ ಸುಗಮಗೊಳಿಸಿದರು. ನಾಯಕ ಫಿಂಚ್ ಕೇವಲ 49 ಎಸೆತಗಳಿಂದ 66 ರನ್ ಗಳಿಸಿ ಔಟಾದರು. ಕಡೆಯವರೆಗೂ ಔಟಾಗದೆ ಉಳಿದ ವಾರ್ನರ್ ಅಜೇಯ 89 ರನ್ ಗಳಿಸಿದರು. ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ ಡೇವಿಡ್ ವಾರ್ನರ್ ಗೆ ಒಲಿದು ಬಂತು. ಮೂರು ವಿಕೆಟ್ ಕಳೆದುಕೊಂಡ ಆಸೀಸ್ 34.5 ಓವರ್ ಗಳಲ್ಲಿ 209 ರನ್ ಗಳಿಸಿ ಕೂಟದ ಮೊದಲ ಪಂದ್ಯದ ಸಿಹಿ ಉಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.