ಆರ್ಥಿಕ ಹಿಂಜರಿತದ ದವಡೆಯಲ್ಲಿ ಆಸ್ಟ್ರೇಲಿಯ


Team Udayavani, Jun 4, 2020, 11:28 AM IST

ಆರ್ಥಿಕ ಹಿಂಜರಿತದ ದವಡೆಯಲ್ಲಿ ಆಸ್ಟ್ರೇಲಿಯ

ಕ್ಯಾನ್‌ಬೆರ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯ ಆರ್ಥಿಕ ಹಿಂಜರಿತದ ದವಡೆಗೆ ಸಿಲುಗಿದೆ. ಇದಕ್ಕೆ ಕಾರಣವಾಗಿರುವುದು ಕೋವಿಡ್‌ ವೈರಸ್‌ ಮತ್ತು ಕಾಳ್ಗಿಚ್ಚು.

ಮಾರ್ಚ್‌ಗೆ ಅಂತ್ಯವಾದ ತ್ತೈಮಾಸಿಕದಲ್ಲಿ ಆಸ್ಟ್ರೇಲಿಯದ ಆರ್ಥಿಕತೆ ಶೇ. 0.3 ಹಿಂದಕ್ಕೆ ಚಲಿಸಿದೆ. ದೇಶದ ಆರ್ಥಿಕತೆಯ ನಾಗಾಲೋಟಕ್ಕೆ ಕೋವಿಡ್‌ ವೈರಸ್‌ ಭಾರೀ ದೊಡ್ಡ ತಡೆಯನ್ನು ಒಡ್ಡಿದೆ.

ಜಿಡಿಪಿ ಶೇ. 0.3 ಕುಸಿದಿದೆ ಎಂದು ಅಂಕಿಅಂಶ ವಿಭಾಗ ಹೇಳಿದ್ದು, ಇದು ಆರ್ಥಿಕ ಹಿಂಜರಿತದ ಮುನ್ಸೂಚನೆ. ಈ ಹಿಂಜರಿತದಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಹಣಕಾಸು ಸಚಿವ ಜೋಶ್‌ ಫ್ರೈಡೆನ್‌ಬರ್ಗ್‌ ಹೇಳಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಆಸ್ಟ್ರೇಲಿಯದ ಆರ್ಥಿಕತೆ ಶೇ. 1.4 ಮಾತ್ರ ಅಭಿವೃದ್ಧಿ ದಾಖಲಿಸಿದೆ. ಇದು ಜಾಗತಿಕ ಆರ್ಥಿಕ ಹಿಂಜರಿತದ ಬಳಿಕ ದಾಖಲಾಗಿರುವ ಅತಿ ಕನಿಷ್ಠ ಅಭಿವೃದ್ಧಿ ದರ.

ಕೋವಿಡ್‌ ವೈರಸ್‌ ಜತೆಗೆ ಹೋರಾಡುತ್ತಿರುವ ಇತರ ಕೆಲವು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಆಸ್ಟ್ರೇಲಿಯದ ಆರ್ಥಿಕತೆಯ ಮೇಲಾಗಿರುವ ಪರಿಣಾಮ ಕಡಿಮೆಯೇ ಇದೆ. ಆದರೆ “ಕಷ್ಟದ ದಿನಗಳನ್ನು ಎದುರಿಸಲು’ ಸಿದ್ಧರಾಗಿರಬೇಕು. ಜೂನ್‌ ಅಂತ್ಯದ ತ್ತೈಮಾಸಿಕದಲ್ಲಿ ಜಿಡಿಪಿ ದರ ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ ಎಂದು ಫ್ರೈಡೆನ್‌ಬರ್ಗ್‌ ಹೇಳಿದ್ದಾರೆ.

ಮೂರು ದಶಕಗಳಲ್ಲಿ ಆರ್ಥಿಕ ಹಿಂಜರಿತವನ್ನು ಎದುರಿಸಿದ ಮೊದಲ ಹಣಕಾಸು ಸಚಿವ ಎಂಬ ಅಪಖ್ಯಾತಿಗೆ ಸ್ವತಃ ಫ್ರೈಡೆನ್‌ಬರ್ಗ್‌ ಅವರೂ ಗುರಿಯಾಗಿದ್ದಾರೆ.

ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಆಸ್ಟ್ರೇಲಿಯ ಕೋವಿಡ್‌ ವೈರಸ್‌ ಪ್ರಸರಣವನ್ನು ಯಶಸ್ವಿಯಾಗಿ ನಿಭಾಯಿಸಿದೆ. ಆದಾಯದ ಬಹುಪಾಲು ಮೊತ್ತವನ್ನು ಆರೋಗ್ಯ ಕ್ಷೇತ್ರದ ಮೇಲೆ ವಿನಿಯೋಗಿಸಿರುವುದರಿಂದ “ಆರ್ಥಿಕ ತಜ್ಞರು ಹೇಳುವ ಅರ್ಮಗಡೆನ್‌’ ವಿಪತ್ತಿನಿಂದ ದೇಶ ಪಾರಾಗಿದೆ. ಜುಲೈಯಲ್ಲಿ ಸರಕಾರ ವಿಸ್ತೃತವಾದ ಆರ್ಥಿಕ ವರದಿಯನ್ನು ಬಹಿರಂಗಗೊಳಿಸಲಿದ್ದು, ಆಗ ಆರ್ಥಿಕತೆಯ ಸಮಗ್ರ ಚಿತ್ರಣ ಜನತೆಗೆ ಸಿಗಲಿದೆ ಎಂದಿದ್ದಾರೆ.

ಉದ್ಯೋಗ ಸಬ್ಸಿಡಿ ಕಡಿತ
ಆಸ್ಟ್ರೇಲಿಯದಲ್ಲಿ ನಿರುದ್ಯೋಗಿಗಳಿಗೆ ನೀಡುವ ಉದ್ಯೋಗ ಸಬ್ಸಿಡಿ ಕಡಿತವಾಗಲಿದೆ. ಉದ್ಯೋಗ ಸಬ್ಸಿಡಿ ಮೊತ್ತವನ್ನು 1,500 ಡಾಲರ್‌ಗೆ ಮಿತಿಗೊಳಿಸುವ ಸಾಧ್ಯತೆಯಿದೆ ಇಲ್ಲವೆ ನೌಕರರ ಆದಾಯವನ್ನು ಪರಿಗಣಿಸಿ ಬೇರೆ ಬೇರೆ ಸ್ತರವನ್ನು ನಿಗದಿಪಡಿಸುವ ಸಾಧ್ಯತೆಯಿದೆ.

ಕಾಳ್ಗಿಚ್ಚಿನ ಬೆನ್ನಿಗೆ ಕೋವಿಡ್‌
ಆಸ್ಟ್ರೇಲಿಯ ಸುಮಾರು ಮೂರು ತಿಂಗಳು ಭೀಕರ ಕಾಳಿYಚ್ಚಿನ ವಿರುದ್ಧ ಹೋರಾಡಿತ್ತು. ಕನಿಷ್ಠ ಮೂರು ರಾಜ್ಯಗಳು ಶತಮಾನದ ಭೀಕರ ಕಾಳ್ಗಿಚ್ಚಿನಿಂದ ಧಗಧಗಿಸಿದ್ದವು. ಬೆಂಕಿ ನಂದಿಸಿ ಮೂಲಸೌಕರ್ಯಗಳನ್ನು ಕಲ್ಪಿಸುವ ಕಾರ್ಯ ನಡೆಯುತ್ತಿರುವಂತೆಯೇ ಕೋವಿಡ್‌ ವಕ್ಕರಿಸಿತು. ಹೀಗಾಗಿ ಎರಡೆರಡು ಹೊಡೆತಗಳನ್ನು ಒಂದೇ ಸಲ ತಾಳಿಕೊಳ್ಳುವ ಅನಿವಾರ್ಯತೆ ದೇಶಕ್ಕೆ ಎದುರಾಗಿದೆ.

ಮನೆವಾರ್ತೆ ಬಳಕೆಯಲ್ಲಿ ಶೇ. 1.1 ಕುಸಿತವಾಗಿದೆ ಎಂದು ಅಂಕಿಅಂಶಗಳು ತಿಳಿಸುತ್ತಿವೆ. 2008ರಿಂದೀಚೆಗೆ ಗೃಹ ವಾರ್ತೆಯಲ್ಲಿ ಆಗಿರುವ ಮೊದಲ ಕುಸಿತವಿದು. 34 ವರ್ಷಗಳಲ್ಲಿ ತ್ತೈಮಾಸಿಕ ವೊಂದರಲ್ಲಿ ಇಷ್ಟು ದೊಡ್ಡ ಕುಸಿತವಾಗಿರುವುದು ಇದೇ ಮೊದಲು. ಲಾಕ್‌ಡೌನ್‌ ಜಾರಿ ಯಾಗುವ ಸಾಧ್ಯತೆ ಗ್ರಹಿಸಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಆದರೆ ಇತರ ಸೇವಾ ವಲಯಗಳಲ್ಲಿ ಶೇ. 2.4 ಕುಸಿತ ದಾಖಲಾಗಿದೆ. ಸಾಮಾಜಿಕ ಅಂತರ ಪಾಲನೆ, ಪ್ರಯಾಣ ನಿರ್ಬಂಧ ಇತ್ಯಾದಿ ಕಾರಣಗಳಿಂದ ಸಾರಿಗೆ, ಹೋಟೆಲ್‌, ಕೆಫೆ, ರೆಸ್ಟೋರೆಂಟ್‌ ಇತ್ಯಾದಿಗಳಿಗಾಗಿ ಮಾಡುವ ಖರ್ಚಿ ನಲ್ಲಿ ಇಳಿಮುಖವಾಗಿದೆ. ಕೋವಿಡ್‌ ವೈರಸ್‌ನಿಂದಾಗಿ ಗೃಹ ಬಳಕೆಯ ವಸ್ತುಗಳ ಆಮದು ಶೇ. 3.9 ಕುಸಿದಿದೆ. ಇದೇ ವೇಳೆ ಸೇವೆಗಳ ಆಮದಿನಲ್ಲಿ ಶೇ. 13.6 ಕುಸಿತವಾಗಿದೆ. ಸರಕು ರಫ್ತಿನಲ್ಲಿ ಶೇ.0.7 ಮತ್ತು ಸೇವೆಗಳ ರಫ್ತಿನಲ್ಲಿ ಶೇ. 12.8 ಕುಸಿತ ದಾಖಲಾಗಿದೆ.

ಟಾಪ್ ನ್ಯೂಸ್

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Cancer ಔಷಧವನ್ನೇ ಡ್ರಗ್‌ ಆಗಿ ಬಳಸುವ ಯುವಕರು: ಅಶೋಕ್‌

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

Vitla: ಸೂರಿಕುಮೇರು ಜಂಕ್ಷನ್ ನಲ್ಲಿ ಅಪಘಾತ… ಬೈಕ್ ಸವಾರ ಮೃತ್ಯು

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-lasike

Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!

ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

New York: ಅಮೆರಿಕದಲ್ಲಿ ಶೂಟೌಟ್‌: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Moscow: ಕೆಮಿಕಲ್‌ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್‌

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

13

Alankar: ಮನೆಯಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

POlice

Kasaragod: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಎಸೆದು ಘರ್ಷಣೆಗೆ ಯತ್ನ; ಕೇಸು ದಾಖಲು

Brahmavar

Aranthodu: ಅಸೌಖ್ಯ; ಆಟೋ ಚಾಲಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.