ಭಕ್ತ ಸಾಗರದ ನಡುವೆ ಅವಧೂತ ಶುಕಮುನಿಸ್ವಾಮಿಯವರ ರಥೋತ್ಸವ
ಪಲ್ಲಕ್ಕಿ ನೇರವಾಗಿ ಹಳ್ಳಕ್ಕೆ ಹೊದರೆ ಉತ್ತಮ ಮಳೆ ಬರುತ್ತದೆ ಎಂಬ ನಂಬಿಕೆ...
Team Udayavani, Feb 20, 2023, 10:17 PM IST
ದೋಟಿಹಾಳ: ಗ್ರಾಮದ ಶ್ರೀ ಅವಧೂತ ಶುಕಮುನಿಸ್ವಾಮಿಯವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಸಂಜೆ 6.30 ಗಂಟೆಗೆ ಮಹಾರಥೋತ್ಸವ ಸಾವಿರಾರು ಭಕ್ತರ ಜಯಕಾರದ ಮಧ್ಯೆ ವಿಜೃಂಬಣೆಯಿಂದ ನಡೆಯಿತು.
ಸೋಮವಾರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಕ್ಕೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ನಾನಾ ತರಹದ ಹರಕೆಯನ್ನು ತಾತನಿಗೆ ಭಕ್ತಿಯಿಂದ ಸಮರ್ಪಿಸಿದರು. ಜಾತ್ರೆಯ ಅಂಗವಾಗಿ ಸೋಮವಾರ ಬೆಳಿಗ್ಗೆ ದೇವಾಲಯದಲ್ಲಿ ಪಂಚಾಮೃತಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿದ ಧಾರ್ಮಿಕ ವಿಧಿ ವಿಧಾನಗಳು ಸೇರಿದಂತೆ ಇನ್ನಿತರ ಪೂಜಾ ಕಾರ್ಯಕ್ರಮಗಳನ್ನು ಮಠದಲ್ಲಿ ನಡೆದವು.
ಬೆಳಿಗ್ಗೆ ಕಳೆದ ಏಳು ದಿನಗಳಿಂದ ಆರಂಭವಾದ ಸಪ್ತಭಜನೆ ಇಂದು ಬೆಳಗ್ಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿ ಸಪ್ತಭಜನೆ ಮುಕ್ತಾಯಗೊಳ್ಳಿಸಿದ್ದರು. ನಂತರ ರಥದ ಮುಂದೆ ಹೋಮ ಹವನಗಳು ಹಾಗೂ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ರುದ್ರಮುನಿಸ್ವಾಮಿ ಮತ್ತು ಈಶ್ವರಸ್ವಾಮಿ ದೇವಾಂಗಮಠ ಇವರ ಸಮ್ಮುಖದಲ್ಲಿ ನೆರವೇರಿದವು. ಶುಕಮುನಿಸ್ವಾಮಿಗಳ ಜಾತ್ರೆಯ ನಿಮಿತ್ಯ ಸುತ್ತಮುತ್ತಲಿನ ಗ್ರಾಮದ ಭಕ್ತರು ಉರುಳುಸೇವೆ, ದೀಡ್ ನಮಸ್ಕಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಮಠದ ಆವರಣದಲ್ಲಿ ನಡೆದಿರುವದು ಕಂಡು ಬಂತು.
ಸಂಜೆ ರಥೋತ್ಸವ ಜರುಗುವ ಮೊದಲು ಶುಕಮುನಿ ತಾತನವರ ಪಲ್ಲಕ್ಕಿ ಕೇಸೂರ, ದೋಟಿಹಾಳ ಗ್ರಾಮಗಳಲ್ಲಿ ಸಂಚರಿಸಿ ರಥದ ಬೀದಿಗೆ ಪ್ರವೇಶ ಮಾಡುವಾಗ ಭೂತಾಯಿಗೆ ಭಲಿ ಅನ್ನವನ್ನು ಸಮರ್ಪಣೆ ಮಾಡುವ ಮುಖಾಂತರ ರಥದ ಬೀದಿಯಲ್ಲಿ ಪಲ್ಲಕ್ಕಿಯು ಸಂಚರಿಸಿತು. ನಂತರ ಸಾವಿರಾರು ಭಕ್ತರ ಜಯ ಘೋಷಣೆಗಳೊಂದಿಗೆ ಶ್ರೀ ಅವಧೂತ ಶುಕಮುನಿಸ್ವಾಮಿಗಳ ಮಹಾರಥವನ್ನು ಎಳೆದರು.
ತಾಲೂಕಿನ ರಾಜಕೀಯ ಪಕ್ಷಗಳ ಮುಖಂಡರು ಜಾತ್ರೆಯ ನಿಮಿತ್ಯ ಸೋಮವಾರ ಮಠಕ್ಕೆ ಭೇಟಿ ನೀಡಿ ತಾತನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ರಥೋತ್ಸವ ಸಮಯದಲ್ಲಿ ತಹಶೀಲ್ದಾರ ರಾಘವೇಂದ್ರ ರಾವ್, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಶಾಸಕ ಹಸನಸಾಬ ದೋಟಿಹಾಳ, ಮಾಜಿ ಜಿಪಂ ಸದಸ್ಯರಾದ ಸದಸ್ಯ ಕೆ.ಮಹೇಶ, ಮಾಜಿ ತಾಪಂ ಸದಸ್ಯ ಮಹಾಂತೇಶ ಬಾದಾವಿ, ಯಂಕಪ್ಪ ಚವ್ಹಾಣ, ದೋಟಿಹಾಳ, ಕೇಸೂರ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು, ಪಿಡಿಒ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿಮಠ, ಗ್ರಾಮಲೆಕ್ಕಾಧಿಕಾರಿಗಳು, ಸೇರಿದಂತೆ ಇನ್ನಿತರ ಮುಖಂಡರು, ಉಪಸ್ಥಿತಿರಿದ್ದರು. ಈ ಜಾತ್ರೆಯಲ್ಲಿ ಬಾಗಲಕೋಟಿ, ವಿಜಯಪೂರ, ರಾಯಚೂರ, ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳಿಂದ ಮತ್ತು ಸುತ್ತಮುತ್ತಲಿನ ಇಲಕಲ್, ಹುನಗುಂದ, ಹನಮಸಾಗರ, ಕಂದಗಲ್, ಮುದೇನೂರು, ತಾವರಗೇರಾ ಅಲ್ಲದೆ ಗ್ರಾಮಗಳ ಸುತ್ತಲಿನ ಗ್ರಾಮಗಳಿಂದ 40ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವ ಸಂಧರ್ಭದಲ್ಲಿ ಕುಷ್ಟಗಿ ಸಿಪಿಐಯವರು ಭದ್ರತಾ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಚಿತ್ತ ಬಂದು ಕಡೆ ತಿರುಗು ಮುತ್ಯಾನ ಪಲ್ಲಕ್ಕಿ
ಮಠದಲ್ಲಿ ಜಾತ್ರಾ ಮಹೋತ್ಸವದ ವೇಳೆ ಸಪ್ತಭಜನೆ ಪ್ರಾರಂಭವಾದ ಮೇಲೆ ಏಟು ದಿನಗಳ ಕಾಲ ಗ್ರಾಮದಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಎರಡು ಭಾರಿ ಪಲ್ಲಕ್ಕಿ ಉತ್ಸವ ಪ್ರಾರಂಭವಾಗುತ್ತದೆ. ಆರಂಭವಾದ ದಿನ ಪಲ್ಲಕ್ಕಿ ನೇರವಾಗಿ ಹಳ್ಳಕ್ಕೆ ಹೊದರೆ ಈ ವರ್ಷ ಉತ್ತಮ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿ ಇದೆ.
ಜಿಲ್ಲೆಯಲ್ಲಿ ಅತಿ ದೊಡ್ಡ ಎರಡನೇ ಜಾತ್ರೆ ಎಂಬ ಹೆಗ್ಗಳಿಕೆ ದೋಟಿಹಾಳ ಗ್ರಾಮದು. ಈ ಗ್ರಾಮದಲ್ಲಿ ಸುಮಾರು ಏಟು ದಿನಗಳ ಕಾಲ ನಡೆಯುವ ತಾತನ ಪಲ್ಲಕ್ಕಿ ಮೆರವಣಿಗೆ ನೋಡಿ ಒಂದು ಸೌಭಾಗ್ಯವಾಗಿದೆ ಎಂಬುವದು ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಜನತೆಯ ಆಸೆಯು ಆಗಿದೆ. ಈ ಪಲ್ಲಕ್ಕಿ ನೋಡಲೆಂದೇ ದೂರದ ಬಳ್ಳಾರಿ, ಕೊಪ್ಪಳ, ಬಾಗಲಕೋಟೆ, ರಾಯಚೂರು, ಗದಗ, ಹುಬ್ಬಳ್ಳಿ ಸೇರಿದಂತೆ ಅನೇಕೆ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ತಾತನ ಜಾತ್ರೆ ಆರಂಭಕ್ಕೆ ಏಟು ದಿನ ಮುಂಚಿತವಾಗಿ ತಾತನವರ ಪಲ್ಲಕ್ಕಿ ಉತ್ಸವ ಆರಂಭವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.