Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
ತನ್ನದೇ ಮೂಲಗಳಿಂದ ಸೃಷ್ಟಿಯಾಗುವ ಆದಾಯದಲ್ಲಿ ಇಳಿಕೆ, ಆದಾಯ ಗಳಿಕೆಯಲ್ಲಿ ಕರ್ನಾಟಕ್ಕೆ 4ನೇ ಸ್ಥಾನ
Team Udayavani, Nov 17, 2024, 7:10 AM IST
ನವದೆಹಲಿ: ಗ್ರಾಮ ಪಂಚಾಯಿತಿಗಳಿಗೆ ತನ್ನದೇ ಮೂಲಗಳಿಂದ ಸೃಷ್ಟಿಯಾಗುವ ಆದಾಯದ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ಸರ್ಕಾರ ನೀಡಿರುವ ದತ್ತಾಂಶಗಳ ಪ್ರಕಾರ ಪ್ರತಿ ಗ್ರಾಮಪಂಚಾಯಿತಿಯ ಸರಾಸರಿ ಆದಾಯ ಕೇವಲ 59 ರೂ. ಆಗಿದೆ.
2017ರಿಂದ 2022ರವರೆಗೆ 5 ವರ್ಷಗಳಲ್ಲಿ ಗ್ರಾಮ ಪಂಚಾಯತ್‌ಗಳು ಗಳಿಸಿರುವ ಆದಾಯವನ್ನು ಆಧರಿಸಿ ಈ ವರದಿ ತಯಾರಿಸಲಾಗಿದ್ದು, 627.56 ಕೋಟಿ ರೂ. ಆದಾಯ ಗಳಿಸಿರುವ ಕರ್ನಾಟಕ 4ನೇ ಸ್ಥಾನದಲ್ಲಿದೆ. 829.75 ಕೋಟಿ ರೂ. ಆದಾಯ ಗಳಿಸಿರುವ ಗುಜರಾತ್ ಮೊದಲ ಸ್ಥಾನದಲ್ಲಿದ್ದು, ಕೇರಳ (802.72 ಕೋಟಿ), ಆಂಧ್ರಪ್ರದೇಶ (791.93 ಕೋಟಿ) ನಂತರದ 2 ಸ್ಥಾನದಲ್ಲಿವೆ.
ದೇಶದಲ್ಲಿರುವ 2.25 ಲಕ್ಷ ಗ್ರಾಮ ಪಂಚಾಯತ್‌ಗಳು ಈ 5 ವರ್ಷಗಳಲ್ಲಿ ತಲಾ 2.27 ಲಕ್ಷ ರೂ. ಗಳಿಕೆ ಮಾಡಿದ್ದು, ಇವುಗಳ ಒಟ್ಟಾರೆ ಜನಸಂಖ್ಯೆ 86.95 ಕೋಟಿಯಷ್ಟಿದೆ. ಪಂಚಾಯತ್‌ಗಳು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಲು ತೆರಿಗೆಗಳು, ಸುಂಕಗಳು, ಟೋಲ್‌ಗಳು ಮತ್ತು ಶುಲ್ಕಗಳನ್ನು ವಿಧಿಸಲು ಅಧಿಕಾರ ನೀಡಬೇಕು. ಇದು ಸ್ಥಳೀಯ ಸರ್ಕಾರವನ್ನು ಬಲಪಡಿಸಲು ನೆರವಾಗುತ್ತದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.