Ayodhya Ram Temple: ದಿವ್ಯ ಮಂದಿರ ಸುತ್ತ ಭವ್ಯ ಸುಂದರ ಸಮುಚ್ಚಯ


Team Udayavani, Jan 22, 2024, 3:36 PM IST

Ayodhya Ram Temple: ದಿವ್ಯ ಮಂದಿರ ಸುತ್ತ ಭವ್ಯ ಸುಂದರ ಸಮುಚ್ಚಯ

ಜಗತ್ತಿನ ಮೂರನೇ ಅತಿ ದೊಡ್ಡ ದೇವಾಲಯ ಸಂಕೀರ್ಣವಾಗಿ ಹೊರಹೊಮ್ಮುತ್ತಿರುವ ಅಯೋಧ್ಯಾ ರಾಮಮಂದಿರ ಆವರಣ ಇಡೀ ಹಿಂದೂ ಪರಂಪರೆಯನ್ನು ಬಿಂಬಿಸುವ ಭಕ್ತಿ ಮತ್ತು ಶ್ರದ್ಧೆಯ ತಾಣವಾಗಿ ನಿರ್ಮಾಣವಾಗಿದೆ, ಸನಾತನ ಹಿಂದೂ ಧರ್ಮದ ಸಂಪ್ರದಾಯ, ನಂಬಿಕೆಗನುಸಾರವಾಗಿ ಪಾರಂಪರಿಕ ಶೈಲಿಯಲ್ಲಿ ದೇಗುಲವನ್ನು ನಿರ್ಮಿಸಲಾಗಿದೆ. ಸಾಂಪ್ರದಾಯಿಕ ದೇವರಾದ ಗಣೇಶ, ಈಶ್ವರ ಲಕ್ಷ್ಮಿಯರ ಜತೆ ರಾಮಾಯಣ ಪರಂಪರೆಯ ಶಬರಿ, ಜಟಾಯುಗೂ ಇಲ್ಲಿ ಗುಡಿಯ ಮಾನ್ಯತೆ ನೀಡಲಾಗಿದೆ. ಶ್ರೀರಾಮ ದೇವಳ ಆವರಣದ ವಾಸ್ತು ವಿನ್ಯಾಸ, ಕೆತ್ತನೆಗಳು, ಗುಡಿಗಳು, ವ್ಯವಸ್ಥೆಗಳು ಮತ್ತು ಸೌಲಭ್ಯಗಳ ಸಹಿತ ದೇಗುಲ ಸಂಕೀರ್ಣದ ಸಂಪೂರ್ಣ ಚಿತ್ರಣ ಇಲ್ಲಿದೆ.

ಶ್ರೀರಾಮ ಜನ್ಮಸ್ಥಳವು 70 ಎಕರೆಗಳಷ್ಟು ವಿಶಾಲವಾಗಿದೆ. ಇಲ್ಲಿನ ವಿವಿಧ ಭಾಗಗಳು ಪೌರಾಣಿಕವಾಗಿ ಅತ್ಯಂತ ಮಹತ್ವವನ್ನು ಹೊಂದಿವೆ. ಮುಖ್ಯ ದೇಗುಲವು ನೃತ್ಯ, ರಂಗ, ಸಭಾ, ಪ್ರಾರ್ಥನಾ ಮತ್ತು ಕೀರ್ತನಾ ಎಂಬ 5 ಮಂಟಪಗಳನ್ನು ಒಳಗೊಂಡಿದೆ. ಉಳಿದಂತೆ ಯಾಗಶಾಲೆಯಾಗಿರುವ ಶ್ರೀರಾಮ ಕುಂಡ, ಅನುಷ್ಠಾನ ಮಂಟಪವಾಗಿರುವ ಕರ್ಮ ಕ್ಷೇತ್ರ, ವೀರ ಮಾರುತಿಯ ವಿಶಾಲ ಪ್ರತಿಮೆಯುಳ್ಳ ಹನುಮಾನ್‌ ಗಢಿ, ಶ್ರೀ ರಾಮ ಜನ್ಮಭೂಮಿಯ ಪುರಾತತ್ವ ಮತ್ತು ಐತಿಹಾಸಿಕ ವಸ್ತುಗಳು ಮತ್ತು ದಾಖಲೆಗಳ ಸಂಗ್ರಹಾಲಯವಾಗಿರುವ ಶ್ರೀರಾಮಲಲ್ಲಾ ಪುರಾಕಾಲಿಕ್‌ ದರ್ಶನ ಮಂಡಲ, ಸತ್ಸಂಗ್‌ಭವನ್‌ ಸಭಾಗೃಹವಾಗಿರುವ ಶ್ರೀ ಕಮ್ಮ ಕೀರ್ತಿ, ವೇದ, ಪುರಾಣ, ರಾಮಾ  ಯಣ ಮತ್ತು ಸಂಸ್ಕೃತ ಅಧ್ಯಯನ ಹಾಗೂ ಸಂಶೋಧನ ಕೇಂದ್ರವಾಗಿರುವ ಗುರು ವಶಿಷ್ಠ ಪೀಠಿಕಾ, ಭಕ್ತರು ಧ್ಯಾನನಿರತರಾಗಲು ವಿಶೇಷ ಶಾಂತಿ ವಲಯ ಭಕ್ತಿ ತಿಲಾ, ರಾಮಲೀಲಾ ಕೇಂದ್ರ/ ಓಪನ್‌ ಥಿಯೇಟರ್‌ ಆಗಿರುವ ತುಳಸಿ, ಬಹೂಪಯೋಗಿ ಸಮುದಾಯ ಕೇಂದ್ರ ರಾಮ ದರ್ಬಾರ್‌, ಪ್ರದರ್ಶನ ಕೇಂದ್ರ ಮಾತಾ ಕೌಶಲ್ಯ ವಾತ್ಸಲ್ಯ ಮಂಡಲ್‌, ಟಿವಿ/ಸಿನೆಮಾ/ಎವಿ ಆಧರಿತ ಶೋ ಥಿಯೇಟರ್‌ ಆಗಿರುವ ರಾಮಾಂಗಣ, ಗ್ರಂಥಾಲಯ/ಓದುವ ಕೊಠಡಿಯಾಗಿರುವ ರಾಮಾಯಣ, ದಾಖಲೆ, ಸಂಶೋಧನಾ ಕೇಂದ್ರವಾಗಿರುವ ಮಹರ್ಷಿ ವಾಲ್ಮೀಕಿ, ಪರವೂರ ಭಕ್ತರಿಗಾಗಿ ಬೋರ್ಡಿಂಗ್‌ ಪ್ರದೇಶವಾಗಿರುವ ರಾಮಾಶ್ರಯಂ, ಆದರ್ಶ ಗೋ ಶಾಲೆ ಶ್ರೀ ದಶರಥ್‌, ಲಿಲ್ಲಿ ಕೆರೆ ಮತ್ತು ಸಂಗೀತ ಕಾರಂಜಿಯನ್ನು ಹೊಂದಿರುವ
ಲಕ್ಷ್ಮಣ್‌ ವಾಟಿಕಾ, ಮಕ್ಕಳು ಮತ್ತು ಯುವಜನತೆಯ ಚಟುವಟಿಕೆ ಪ್ರದೇಶವಾಗಿರುವ ಲವ-ಕುಶ ನಿಕುಂಜ್‌, ವಿಶೇಷ ಗಣ್ಯರ ವಸತಿ ಪ್ರದೇಶವಾಗಿರುವ ಮರ್ಯಾದಾ ಕುಂಜ್‌, ಬೋಗ್‌/ಪ್ರಸಾದ ವಿತರಣ ಕೇಂದ್ರವಾಗಿರುವ ಭಾರತ್‌-ಪ್ರಸಾದ್‌ ಮಂದಿರ್‌, ಬೃಹತ್‌ ಭೋಜನಶಾಲೆ, ಆಹಾರ ಸಾಮಗ್ರಿಗಳ ದಾಸ್ತಾನು ಕೊಠಡಿ, ಭಕ್ತರಿಗೆ ಕೈತೊಳೆಯುವ ವ್ಯವಸ್ಥೆಯನ್ನು ಒಳಗೊಂಡ ಬೃಹತ್‌ ಮಾತಾ ಸೀತಾ ರಸೋಯಿ ಅನ್ನಕ್ಷೇತ್ರ ಮತ್ತು ಸಿಂಹದ್ವಾರದ ಮುಂಭಾಗದಲ್ಲಿ ದೇಶದಲ್ಲಿಯೇ ಅತೀ ಎತ್ತರದ ಧ್ವಜಸ್ತಂಭವಿದೆ.

ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಕೇವಲ ಬಾಲ ರಘುರಾಮನ ಮೂರ್ತಿಯನ್ನು ಮಾತ್ರವಲ್ಲ, ಇತರೆ ದೇವರನ್ನೂ ಅಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೆಲವೊಂದು ಬಾಲರಾಮನ ಜೊತೆಗೇ ಪ್ರತಿಷ್ಠಾಪಿತಗೊಂಡರೆ, ಇನ್ನು ಕೆಲವು ತಡವಾಗಿ ಪ್ರತಿಷ್ಠಾಪಿತಗೊಳ್ಳಲಿವೆ. ಈ ಆವರಣ ಗೋಡೆಯ ನಾಲ್ಕು ಮೂಲೆಗಳಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ ಭಗವಾನ್‌ ಮತ್ತು ಭಗವಾನ್‌ ಶಿವನ ಗುಡಿಗಳನ್ನು ನಿರ್ಮಿಸಲಾಗಿದೆ. ಇನ್ನು ಉತ್ತರ ದಿಕ್ಕಿನಲ್ಲಿ ಮಾ ಅನುಪಮಾ ಮತ್ತು ದಕ್ಷಿಣ ದಿಕ್ಕಿನಲ್ಲಿ ಹನುಮಾನ್‌ ಮಂದಿರ ವನ್ನು ನಿರ್ಮಿಸಲಾಗಿದೆ.

ಶ್ರೀರಾಮ ಜನ್ಮಭೂಮಿ ಮಂದಿರ ಕಾಂಪ್ಲೆಕ್ಸ್‌ನಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಸಿಷ್ಠ, ಮಹರ್ಷಿ ವಿಶ್ವಾ ಮಿತ್ರ, ಮಹರ್ಷಿ ಅಗಸ್ತ್ಯ, ನಿಶಾದ್‌ ರಜ್ಞಜ್‌ ಮಂದಿರವನ್ನು ನಿರ್ಮಿ ಸಲು ಉದ್ದೇಶಿಸಲಾಗಿದೆ. ಬಾಲ ರಾಮನ ವಿಗ್ರಹ ದೇಗುಲ ನೆಲ ಅಂತಸ್ತಿನಲ್ಲಿ ಪ್ರತಿಷ್ಠಾಪಿಸಲ್ಪಡುತ್ತದೆ. ಶ್ರೀರಾಮನ ಪತ್ನಿ ಸೀತೆ, ನಾಲ್ವರು ಸಹೋದರರು ಮತ್ತು ಪರಮಭಕ್ತ ಹನುಮಂತನ ಮೂರ್ತಿಗಳನ್ನು ದೇಗುಲದ ಮೊದಲ ಅಂತಸ್ತಿನಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಆದರೆ ಈ ಕೆಲಸ ಮುಗಿಯು ವುದಕ್ಕೆ ಬಹುಶಃ ಇನ್ನೂ 7-8 ತಿಂಗಳು ಆಗಬಹುದು. ಮೊದಲ ಅಂತ ಸ್ತಿನಲ್ಲಿ ಶ್ರೀರಾಮನ ದರ್ಬಾರ್‌ ಅಂದರೆ ಆಸ್ಥಾನ ಇರಲಿದೆ. ಅದು ತ್ರೇತಾ ಯುಗದ ರಾಮನ
ಆಡಳಿತ ವಿಧಾನವನ್ನು ನೆನಪಿಗೆ ತರಬಹುದು.

6 ಮುಖ್ಯ ಮಂದಿರಗಳು: ರಾಮಮಂದಿರದ ನಾಲ್ಕು ಮೂಲೆಗಳಲ್ಲಿ ನಾಲ್ಕು ದೇಗುಲಗಳಿಗೆ ವ್ಯವಸ್ಥೆ ಮಾಡಲಾಗಿದೆ. ಸೂರ್ಯ, ದೇವಿ, ಗಣೇಶ, ಶಿವ ಅಲ್ಲಿ ಪೂಜಿಸಲ್ಪಡುತ್ತಾರೆ. ದೇಗುಲದ ಉತ್ತರದಲ್ಲಿ ಅನ್ನಪೂರ್ಣಾ ದೇವಿ, ದಕ್ಷಿಣದಲ್ಲಿ ರಾಮನ ಪರಮಭಕ್ತ,
ಇಡೀ ಭಾರತದಲ್ಲಿ ಎಲ್ಲರ ಪ್ರೀತ್ಯಾದರಕ್ಕೆ ಪಾತ್ರನಾಗಿರುವ ಹನುಮಂತನ ದೇಗುಲಕ್ಕೆ ಜಾಗ ಸಿದ್ಧಮಾಡಲಾಗಿದೆ.

ಸೀತಾ ಕೂಪ, ಮಹರ್ಷಿಗಳಿಗೆ ಜಾಗ: ದೇಗುಲದ ಆವರಣದಲ್ಲೇ ಸೀತಾ ಕೂಪ ಅಂದರೆ ಸೀತೆಯ ಬಾವಿಯೂ ಇದೆ. ದೇಗುಲದ ನೈಋತ್ಯ ಭಾಗದಲ್ಲಿ ಶಿವನ ಒಂದು ಹಳೆಯ ದೇವಸ್ಥಾನವಿದೆ. ಅದನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

ಸಮುಚ್ಚಯದಲ್ಲಿ ಏನೇನಿದೆ?
ಒಳಚರಂಡಿ ಸಂಸ್ಕರಣ ಘಟಕ, ನೀರು ಸಂಸ್ಕರಣ ಘಟಕ, ಅಗ್ನಿ ಸುರಕ್ಷತೆಗಾಗಿ ನೀರು ಪೂರೈಕೆ ವ್ಯವಸ್ಥೆ ಮತ್ತು ಪ್ರತ್ಯೇಕ ವಿದ್ಯುತ್‌ ಕೇಂದ್ರ ಇರಲಿದೆ.
*70 ಎಕರೆ ಸ್ಥಳದ ಶೇ. 70 ಭಾಗದಲ್ಲಿ ಹಸುರು ಉಳಿಸಲು ತೀರ್ಮಾನ
* ಬ್ಯಾಂಕ್‌,ಎಟಿಎಂ, ತುರ್ತು ವೈದ್ಯಕೀಯ ಸೌಲಭ್ಯಗಳು
*25,000 ಯಾತ್ರಿಗಳ ಸಾಮರ್ಥ್ಯ ಇರುವ ಸೇವಾ ಕೇಂದ್ರ. ಯಾತ್ರಿಗಳಿಗೆ ವೈದ್ಯಕೀಯ, ಲಾಕರ್‌ ಸೌಲಭ್ಯ
*ಶೌಚಾಲಯ, ಸ್ನಾನದ ಕೊಠಡಿ,ನಲ್ಲಿ ನೀರಿನ ವ್ಯವಸ್ಥೆ ಹೊಂದಿರುವ ಬ್ಲಾಕ್‌ಗಳು.
* ಹಿರಿಯರಿಗಾಗಿ ದೇಗುಲದ ಮೆಟ್ಟಿಲು ಏರಲು, ಇಳಿಯಲು,ಲಿಫ್ಟ್ ವ್ಯವಸ್ಥೆ

ಜಟಾಯು, ಅಹಲ್ಯೆ, ಶಬರಿಗೂ ಮಂದಿರ
ಶ್ರೀರಾಮನ ಜೀವನದೊಂದಿಗೆ ಬೆಸೆದುಕೊಂಡಿರುವ ಹೆಸರುಗಳು ನೂರಾರು. ಪ್ರತೀ ಪಾತ್ರವೂ ಇಂದು ಭಾರತೀಯರ ಅತ್ಯಾದರಕ್ಕೆ ಪಾತ್ರವಾಗಿದೆ. ರಾವಣನಿಂದ ಸೀತೆಯನ್ನು ಕಾಪಾಡಲು ಪ್ರಾಣಬಿಟ್ಟ ಜಟಾಯು ಪಕ್ಷಿಯ ದೇವಾಲಯೂ ಆವರಣ ದಲ್ಲಿರಲಿದೆ. ರಾಮಾಯಣ ವನ್ನು ರಚಿಸಿ ಸರ್ವಕಾಲಕ್ಕೂ ಸಲ್ಲುವ ಮಹಾಕವಿಯಾಗಿ ರುವ ವಾಲ್ಮೀಕಿಯೂ ಇನ್ನು ಪೂಜಿಸಲ್ಪಡಲಿದ್ದಾರೆ.

ರಘುವಂಶದ ಕುಲಗುರು, ಸಪ್ತರ್ಷಿಗಳಲ್ಲೊಬ್ಬರಾದ ವಸಿಷ್ಠರು, ಬ್ರಹ್ಮರ್ಷಿ, ರಾಮನಿಗೆ ಶಸ್ತ್ರವಿದ್ಯೆಯನ್ನು ಕಲಿಸಿದ ವಿಶ್ವಾಮಿತ್ರ, ಆದಿತ್ಯಹೃದಯವನ್ನು ಉಪದೇಶಿಸಿದ ಅಗಸ್ತ್ಯ, ವನವಾಸದ ಆರಂಭದಲ್ಲಿ ಉಪಚಾರ ಮಾಡಿದ ನಿಷಾದ ರಾಜ, ರಾಮನ ಬರುವಿಗಾಗಿಯೇ ಕಾದುಕುಳಿತ್ತಿದ್ದ ಮಹಾಮಾತೆ ಶಬರಿ, ಶ್ರೀರಾಮನ ಪಾದಸ್ಪರ್ಶದಿಂದ ಹೊಸಜೀವನ ಪಡೆದ ಅಹಲ್ಯೆಗಾಗಿಯೂ ಮಂದಿರದ ಸುತ್ತ ಜಾಗಗಳನ್ನು ಮೀಸ ಲಿಡಲಾಗಿದೆ. ಇವರನ್ನೂ ಭಕ್ತರು ಕಂಡು ಪುನೀತರಾಗಬಹುದು.

ಅಯೋಧ್ಯಾಧಾಮ ರೈಲು ನಿಲ್ದಾಣ
ಅಯೋಧ್ಯಾ ಜಂಕ್ಷನ್‌ ರೈಲು ನಿಲ್ದಾಣವನ್ನು ಸಂಪೂರ್ಣವಾಗಿ ಪುನರ್‌ ನವೀಕರಿಸಿ, ಅಯೋಧ್ಯಾಧಾಮ ರೈಲು ನಿಲ್ದಾಣ ಎಂದು ಪುನರ್‌ ನಾಮಕರಣ ಮಾಡಲಾಗಿದೆ. ಹೊಸ ನಿಲ್ದಾಣವನ್ನು 2 ವರ್ಷಗಳ ಅವಧಿ ಯಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ
240 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾಗಿದೆ. ಮೇಲ್ಭಾಗದಲ್ಲಿ ದೇಗುಲ ಮಾದರಿಯಲ್ಲಿ ಗೋಪುರ ನಿರ್ಮಿಸಲಾಗಿದೆ. ಮುಂಭಾಗದಲ್ಲಿ ಶ್ರೀರಾಮನ ಕಿರೀಟದ ಆಕಾರದ ವಿನ್ಯಾಸ ಮಾಡಲಾಗಿದೆ. 53 ಎಕರೆ ಪ್ರದೇಶದಲ್ಲಿ ಹೊಸ ನಿಲ್ದಾಣ ನಿರ್ಮಾಣವಾಗಿದೆ. ಈ ನಿಲ್ದಾಣ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.

ಆಹಾರ ಮಳಿಗೆ, ವೇಯ್ಟಿಂಗ್‌ ಹಾಲ್‌, ಕ್ಲಾಕ್‌ ರೂಮ್‌, ಮಕ್ಕಳ ಆರೈಕೆ ಕೊಠಡಿ, ಮಾಹಿತಿ ಕೇಂದ್ರ, ಪೂಜಾ ಸಾಮಗ್ರಿಗಳ ಮಾರಾಟ ಮಳಿಗೆ, ಅಗತ್ಯ ವೈದ್ಯಕೀಯ ಸೇವೆ, ಸುವ್ಯವಸ್ಥಿತ ಪಾರ್ಕಿಂಗ್‌, ಲಿಫ್ಟ್, ಎಸ್ಕಲೇಟರ್‌, ಶೌಚಾಲಯಗಳನ್ನು ರೈಲು ನಿಲ್ದಾಣ ಒಳಗೊಂಡಿದೆ.

ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ

ನೂತನವಾಗಿ ನಿರ್ಮಾಣಗೊಂಡಿರುವ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಆಯೋಧ್ಯಾ ಧಾಮ ಎಂದು ನಾಮಕರಣ ಮಾಡಲಾಗಿದೆ. 821 ಎಕರೆ ವಿಶಾಲ ಪ್ರದೇಶದಲ್ಲಿ ನಿಲ್ದಾಣ ನಿರ್ಮಾಣಗೊಳ್ಳಲಿದ್ದು 3
ಹಂತದಲ್ಲಿ ಕಾಮಗಾರಿಗಳು ನಡೆಯಲಿವೆ. ಮೊದಲ ಹಂತದಲ್ಲಿ 1,450 ಕೋಟಿ ರೂ. ವೆಚ್ಚದ ಕಾಮಗಾರಿ ನಡೆಸಲಾದೆ. 2,200 ಮೀ. ಉದ್ದದ ರನ್‌ ವೇ ಹೊಂದಿದೆ. ಟರ್ಮಿನಲ್‌ ಕಟ್ಟಡವು 65 ಸಾವಿರ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

9 ಚೆಕ್‌ಇನ್‌ ಕೌಂಟರ್‌ಗಳನ್ನು ಒಳಗೊಂಡಿದೆ. ವಾರ್ಷಿಕ 10 ಲಕ್ಷ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವಿದೆ. ಅಯೋಧ್ಯೆ ನಗರದಿಂದ 10 ಕಿ.ಮೀ, ಶ್ರೀರಾಮ ಮಂದಿರದಿಂದ 8 ಕಿ.ಮೀ. ದೂರದಲ್ಲಿ ಈ ವಿಮಾನ ನಿಲ್ದಾಣವಿದೆ. ಅಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯ ಗಳು, ಸುರಕ್ಷ ವ್ಯವಸ್ಥೆ ಕಲ್ಪಿಸಲಾಗಿದೆ.

ಘಾಟ್‌ ರಸ್ತೆಗಳಿಗೆ ಈಗ ಹೊಸರೂಪ!
ಸಾದತ್‌ಗಂಜ್‌ನಿಂದ ನಯಾ ಘಾಟ್‌ವರೆಗಿನ ನವೀಕೃತ ರಸ್ತೆಗೆ ರಾಮ ಪಥ, ಅಯೋಧ್ಯೆಯ ಮುಖ್ಯರಸ್ತೆಯಿಂದ ಹನುಮಾನ್‌ ಗಡಿ ಮೂಲಕ ಶ್ರೀರಾಮ ಜನ್ಮಭೂಮಿಗೆ ಸಂಪರ್ಕ ಕಲ್ಪಿಸುವ ನವೀಕೃತ ರಸ್ತೆಗೆ ಭಕ್ತಿ ಪಥ ಹಾಗೂ ರಾಷ್ಟ್ರೀಯ ಹೆದ್ದಾರಿ-27ರಿಂದ ನಯಾ ಘಾಟ್‌ನ ಹಳೇ ಸೇತುವೆವ ರೆಗಿನ ರಸ್ತೆಗೆ ಧರ್ಮ ಪಥವೆಂದು ನಾಮ ಕರಣ ಮಾಡಲಾಗಿದ್ದು ಇವೆಲ್ಲವನ್ನೂ ಈಗಾಗಲೇ ಉದ್ಘಾಟಿಸಲಾಗಿದೆ.

ಇಷ್ಟು ಮಾತ್ರವಲ್ಲದೆ ವಿವಿಧ ರೈಲು ಮಾರ್ಗಗಳ ಅಭಿವೃದ್ಧಿ ಯೋಜನೆ, ರಸ್ತೆಗಳ ಅಭಿವೃದ್ಧಿ , ಮಹರ್ಷಿ ಅರುಂಧತಿ ಪಾರ್ಕಿಂಗ್‌ ಮತ್ತು ವಾಣಿಜ್ಯ ಸಂಕೀರ್ಣ, ಲಕ್ಷ್ಮಣ್‌ ಕುಂಜ್‌ ಸ್ಮಾರ್ಟ್‌ ಪಾರ್ಕಿಂಗ್‌ ಬಹುಮಹಡಿ ಸಂಕೀರ್ಣ, ಘನತ್ಯಾಜ್ಯ ವಿಲೇವಾರಿ ಘಟಕ, ರೈಲ್ವೇ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆಗಳು ಈಗಾಗಲೇ ಉದ್ಘಾಟ ನೆಗೊಂಡಿದ್ದು ಸಾರ್ವಜನಿಕ ಬಳಕೆಗೆ
ಮುಕ್ತವಾಗಿವೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.