ಅಯೋಧ್ಯೆ ಪ್ರಕರಣದಲ್ಲಿ ನಿರ್ಮೋಹಿ ಅಖಾಡದ ಪಾತ್ರವೇನು?


Team Udayavani, Nov 9, 2019, 4:49 PM IST

Nirmohi-Akhada-730

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಹೊಸದಿಲ್ಲಿ: ನಿರ್ಮೋಹಿ ಅಖಾಡ ಅಥವಾ ನಿರ್ಮೋಹಿ ಅಖಾರ ಒಂದು ಹಿಂದೂ ಧಾರ್ಮಿಕ ಗುಂಪು. ಶ್ರೀರಾಮನ ಭಕ್ತರು ಹಾಗೂ ಹನುಮಂತನ ಅನುಯಾಯಿಗಳು ಇದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ನಿರ್ಮೋಹ ಎಂದರೆ ಮೋಹವಿಲ್ಲದ ಬಂಧನದ ಬೆಸುಗೆಯುಳ್ಳವರು ಒಟ್ಟಾಗಿ ಇರುವ ಗುಂಪು ಎನ್ನಬಹುದು. ಲೌಕಿಕ ಆಸಕ್ತಿ ಇರದ ಸಾಧು ಸಂತರು ಹೆಚ್ಚಾಗಿ ಈ ಗುಂಪಿನ ಸದಸ್ಯರಾಗಿದ್ದಾರೆ. ಮಹಾಂತ ಭಾಸ್ಕರ್‌ ದಾಸ್‌ ಮುಖ್ಯಸ್ಥರಾಗಿರುವ ವೈಷ್ಣವ ಸಂಪ್ರದಾಯ ಪಾಲಕರಾದ 14 ಅಖಾಡಗಳಲ್ಲಿ ನಿರ್ಮೋಹಿ ಅಖಾಡ ಕೂಡಾ ಒಂದು. ಅಖಿಲ ಭಾರತೀಯ ಅಖಾಡ ಪರಿಷದ್‌ ಇದಕ್ಕೆ ಮುಖ್ಯ ಸಂಸ್ಥೆಯಾಗಿದೆ.

1934 ರಿಂದ 1949ರ ಡಿಸೆಂಬರ್‌ 16ರ ವರೆಗೆ ವಿವಾದಿತ ಸ್ಥಳವು ಸಂಪೂರ್ಣ ನಿಮೋಹಿ ಅಖಾಡದ ಸುಪರ್ದಿಯಲ್ಲಿತ್ತು. ಮುಸ್ಲಿಮರು ವಿವಾದಿತ ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಪ್ರತೀನಿತ್ಯ ಐದು ಬಾರಿ ನಮಾಜ್‌ ಮಾಡುತ್ತಿರಲಿಲ್ಲ. ಶುಕ್ರವಾರ ಮಾತ್ರ ಪೊಲೀಸ್‌ ಭದ್ರತೆಯಲ್ಲಿ ನಮಾಜ್‌ ಮಾಡಲಾಗುತ್ತಿತ್ತು. ಯಾವ ಜಾಗದಲ್ಲಿ ನಿತ್ಯ ಪ್ರಾರ್ಥನೆ ನಡೆಯುವುದಿಲ್ಲವೋ ಅದನ್ನು ಮಸೀದಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನಿರ್ಮೋಹಿ ಅಖಾಡ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಾ ಬಂದಿತ್ತು.

1934ರಿಂದಲೂ ವಿವಾದಿತ 2.77 ಎಕರೆ ಪ್ರದೇಶದ ಮೇಲೆ ನಿರ್ಮೋಹಿ ಅಖಾಡ ಹಕ್ಕು ಪ್ರತಿಪಾದನೆ ಮಾಡುತ್ತಲೇ ಬಂದಿದೆ. ಇದರ ಸಂಪೂರ್ಣ ಸ್ವಾಧೀನ ಹಾಗೂ ನಿರ್ವಹಣೆ ನಮಗೆ ಸೇರಿದ್ದಾಗಿದೆ. 1949ರ ಡಿಸೆಂಬರ್‌ 16ರಂದು ರಾತ್ರಿ ವಿವಾದಿತ ಕಟ್ಟಡದಲ್ಲಿ ರಾಮನ ವಿಗ್ರಹಗಳನ್ನೂ ಸ್ಥಾಪಿಸಲಾಯಿತು. 1960ರ ನಂತರದಲ್ಲಿ ಸುನ್ನಿ ವಕ್ಫ್ ಬೋರ್ಡ್‌ ಆ ಜಾಗದ ಮೇಲೆ ಹಕ್ಕು ಪ್ರತಿಪಾದನೆ ಮಾಡಿತ್ತು, ಎಂದು ನಿರ್ಮೋಹಿ ಅಖಾಡದ ಪರವಾದ ವಕೀಲರು ನ್ಯಾಯಪೀಠಕ್ಕೆ ಮನವರಿಕೆ ಮಾಡುತ್ತಾ ಬಂದಿದ್ದಾರೆ.

2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಅಯೋಧ್ಯೆಯ ವಿವಾದಿತ 2.77 ಎಕರೆ ಪ್ರದೇಶವನ್ನು ನಿರ್ಮೋಹಿ ಅಖಾಡ, ರಾಮ್ ಲಲ್ಲಾ ಟ್ರಸ್ಟ್‌ ಹಾಗೂ ಸುನ್ನಿ ವಕ್ಫ್ ಬೋರ್ಡ್‌ಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹಲವು ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಹೀಗೆ ಅಯೋಧ್ಯೆಯ ರಾಮಜನ್ಮಭೂಮಿ ವಿವಾದದಲ್ಲಿ ನಿರ್ಮೋಹಿ ಅಖಾಡ ಸಹ ಪ್ರಮುಖ ದಾವೇದಾರನಾಗಿ ಗುರುತಿಸಿಕೊಂಡಿದೆ. ಆದರೆ ಇಂದು ಸಪ್ರೀಂಕೋರ್ಟ್ ನ ಸಾಂವಿಧಾನಿಕ ಪೀಠವು ತನ್ನ ತೀರ್ಪಿನಲ್ಲಿ ಈ ವಿವಾದಿತ ಸ್ಥಳದ ಮೇಲೆ ನಿರ್ಮೋಹಿ ಅಖಾಡದ ಹಕ್ಕನ್ನು ನಿರಾಕರಿಸಿ ತೀರ್ಪನ್ನು ನೀಡಿದೆ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.