Baba Siddique Case: ಸಲ್ಮಾನ್‌ಗೆ ನೆರವಾಗುವ ಎಲ್ಲರಿಗೂ ಇದೇ ಗತಿ: ಬಿಷ್ಣೋಯ್ ಗ್ಯಾಂಗ್!
ಎನ್‌ಸಿಪಿ ನಾಯಕ, ಮಾಜಿ ಸಚಿವ ಸಿದ್ದಿಕಿ ಹತ್ಯೆ ಬೆನ್ನಲ್ಲೇ ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆ, ಸಲ್ಮಾನ್, ದಾವೂದ್ ಜತೆ ನಂಟಿರುವವರೇ ನಮ್ಮ ಟಾರ್ಗೆಟ್: ಫೇಸ್‌ಬುಕ್ ಪೋಸ್ಟ್
Team Udayavani, Oct 15, 2024, 7:54 AM IST
ಮುಂಬಯಿ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರ ಮಾಜಿ ಸಚಿವ, ಎನ್‌ಸಿಪಿ ನಾಯಕ ಸಿದ್ದಿಕಿ ಕೊಲೆ ಪ್ರಕರಣದ ಹೊಣೆ ಹೊತ್ತಿರುವುದಷ್ಟೇ ಅಲ್ಲದೆ, “ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಯಾರ್ಯಾರು ಸಹಾಯ ಮಾಡುತ್ತಾರೋ ಅವರೆಲ್ಲರಿಗೂ ಇದೇ ಗತಿ ಕಾಣಿಸುತ್ತೇವೆ’ ಎಂಬ ಬೆದರಿಕೆಯನ್ನೂ ಹಾಕಿದೆ.
“ನಮಗೆ ಯಾರ ಮೇಲೂ ಯಾವುದೇ ದ್ವೇಷವಿಲ್ಲ. ಆದರೆ ಯಾರು ಸಲ್ಮಾನ್ ಮತ್ತು ದಾವೂದ್ ಗ್ಯಾಂಗ್‌ಗೆ ನೆರವಾಗುತ್ತಾರೋ, ಅಂಥವರು ಎಚ್ಚರಿಕೆಯಿಂದಿರಿ. ಸಿದ್ದಿಕಿಗೂ ಕೂಡ ಸಲ್ಮಾನ್, ದಾವೂದ್ ಜತೆ ನಂಟಿತ್ತು. ಅದಕ್ಕಾಗಿಯೇ ಅವರನ್ನು ಹತ್ಯೆಗೈದಿದ್ದೇವೆ. ಸಲ್ಮಾನ್ ಮನೆ ಹೊರಗೆ ಗುಂಡಿನ ದಾಳಿ ನಡೆಸಿದ್ದ ಅನೂಜ್ ಪೊಲೀಸ್ ವಶದಲ್ಲಿರುವಾಗಲೇ ಮೃತಪಟ್ಟಿದ್ದಾನೆ. ಆತನ ಸಾವಿಗೂ ನಾವು ಪ್ರತೀಕಾರ ತೀರಿಸಿದ್ದೇವೆ’ ಎಂದು ಬಿಷ್ಣೋಯ್ ಗ್ಯಾಂಗ್‌ನ ಸದಸ್ಯ ಶುಬು ಲೊಂಕಾರ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾನೆ.
ಇದೇ ವೇಳೆ, ಸಿದ್ದಿಕಿ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಧರ್ಮರಾಜ್ ಕಶ್ಯಪ್ ಅಪ್ರಾಪ್ತ ವಯಸ್ಸಿನವನಲ್ಲ, ಆತನೂ ವಯಸ್ಕ ಎಂಬುದು ಮೂಳೆ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇನ್ನೊಂದೆಡೆ ಪ್ರಕರಣದ ಸಹ ಸಂಚುಕೋರರಲ್ಲಿ ಒಬ್ಬನಾದ ಪ್ರವೀಣ್ ಲೋಂಕಾರ್‌ನನ್ನು ಸೋಮವಾರ ಬಂಧಿಸಲಾಗಿದೆ.
ಸಿದ್ದಿಕಿ ಪುತ್ರನೂ ಹಿಟ್‌ಲಿಸ್ಟ್‌ನಲ್ಲಿ!
ಸಿದ್ದಿಕಿ ಮಾತ್ರವಲ್ಲ, ಅವರ ಪುತ್ರ, ಶಾಸಕ ಝೀಶಾನ್ ಸಿದ್ದಿಕಿ ಕೂಡ ಗ್ಯಾಂಗ್‌ಸ್ಟರ್‌ಗಳ ಹಿಟ್‌ಲಿಸ್ಟ್‌ನಲ್ಲಿದ್ದ ಎಂಬ ವಿಚಾರವನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಅಪ್ಪ-ಮಗ ಇಬ್ಬರನ್ನೂ ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು ಎಂದು ಆರೋಪಿ ಹೇಳಿದ್ದಾನೆ. ಜತೆಗೆ ಸಿದ್ದಿಕಿ ಹತ್ಯೆ ವೇಳೆ ಅವರ ಪಕ್ಕದಲ್ಲಿ ಭದ್ರತೆಗೆಂದು ನಿಯೋಜಿಸಲ್ಪಟ್ಟಿದ್ದ ಕಾನ್‌ಸ್ಟೇಬಲ್‌ಗೆ ಖಾರದ ಪುಡಿ ಎರಚಲಾಯಿತು ಎಂದೂ ಆರೋಪಿಗಳು ಹೇಳಿದ್ದಾರೆ.
ಆರೋಪಿಯಿಂದ ಕೆಜಿಎಫ್ ಚಿತ್ರದ ಡೈಲಾಗ್ ಪೋಸ್ಟ್!
ಸಿದ್ದಿಕಿ ಹತ್ಯೆ ಆರೋಪಿಗಳಲ್ಲಿ ಒಬ್ಬನಾದ ಉ.ಪ್ರದೇಶದ ಶಿವಕುಮಾರ್ ಗೌತಮ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದ ಪೋಸ್ಟ್‌ಗಳು ಗಮನ ಸೆಳೆದಿವೆ. ಈತ ಜು.24ರಂದು ಇನ್‌ಸ್ಟಾದಲ್ಲಿ ತನ್ನ ಫೋಟೋ ಹಾಕಿ “ಗೊತ್ತಾ, ನಿನ್ನ ಗೆಳೆಯ ಗ್ಯಾಂಗ್‌ಸ್ಟರ್'(ಯಾರ್ ತೇರಾ ಗ್ಯಾಂಗ್‌ಸ್ಟರ್ ಹೇ ಜಾನಿ) ಎಂದು ಬರೆದಿದ್ದ. ಅದಕ್ಕೂ ಮುನ್ನ, “ಅಪ್ಪ ಒಳ್ಳೆಯವರು, ನಾನಲ್ಲ'(ಶರೀಫ್ ಬಾಪ್ ಹೇ, ಮೇ ನಹೀಂ) ಎಂದೂ ಬರೆದಿದ್ದ.
ಮೇ 26ರಂದು ಕನ್ನಡದ ಯಶ್ ಅಭಿನಯದ ಕೆಜಿಎಫ್ ಚಿತ್ರದ “ಪವರ್‌ಫುಲ್ ಪೀಪಲ್ ಮೇಕ್ ಪ್ಲೇಸಸ್ ಪವರ್‌ಫುಲ್’ ಎಂಬ ಡೈಲಾಗ್ ಅನ್ನು ಅದೇ ಚಿತ್ರದ ಹಿನ್ನೆಲೆ ಸಂಗೀತದೊಂದಿಗೆ ಪೋಸ್ಟ್ ಮಾಡಿದ್ದ. ಈತ ಈಗ ತಲೆಮರೆಸಿಕೊಂಡಿದ್ದು, ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.