ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿದೆ ಆಲೂರಿನ ಬಸ್ ನಿಲ್ದಾಣದ ಶೌಚಾಲಯ, ಸಾರ್ವಜನಿಕರ ಅಸಮಾಧಾನ

Team Udayavani, Dec 29, 2021, 5:19 PM IST

ಸ್ವಚ್ಛತೆ ಇಲ್ಲದೇ ಗಬ್ಬು ನಾರುತ್ತಿರುವ ಬಸ್ ನಿಲ್ದಾಣದ ಶೌಚಾಲಯ, ಸಾರ್ವಜನಿಕರ ಅಸಮಾಧಾನ

ಆಲೂರು: ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಸ್ವಚ್ಚತೆ ಕಾಪಾಡಿ ಅಂತ ಹೇಳುವ ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯನಿರ್ವಹಿಸುವ ಸ್ಥಳದಲ್ಲಿಯೇ ಸ್ವಚ್ಚತೆ ಕಾಪಾಡುವಲ್ಲಿ ವಿಫಲವಾಗಿದ್ದು,ಸರ್ಕಾರಿ ಅಧಿಕಾರಿಗಳಿಂದಲೇ ಓಮಿಕ್ರಾನ್ ಸೊಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ. ಹಾಗಿದ್ರೆ, ಎಲ್ಲಿ ಏನು…? ಅಂತೀರಾ ಈ ಸ್ಟೋರಿ ನೋಡಿ…

ಆಲೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಬಂದಿದೆ ದಿನಕ್ಕೆ ಸಾವಿರಾರು ಮಂದಿ ಪ್ರಯಾಣ ಮಾಡುವಂತಹ ನಿಲ್ದಾಣವಾಗಿದ್ದು ಆಲೂರು ಬಸ್ ನಿಲ್ದಾಣದ ಶೌಚಾಲಯದ ಮಲ -ಮೂತ್ರ ಪಿಟ್ ಗುಂಡಿಯು ತುಂಬಿ ಮುಚ್ಚಳ ತೆರೆದು ಗಬ್ಬೆದ್ದು ದುರ್ವಾಸನೆ ಬರುತ್ತಿದ್ದು ಸಾರ್ವಜನಿಕರು ಹಾಗೂ ಪ್ರಯಾಣಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳದೆರಡು ವರ್ಷಗಳಿಂದ ಕೊರೊನಾದಂತಹ ಮಹಾಮಾರಿ ರೋಗದ ಜೊತೆಗೆ ಈಗ ಒಮಿಕ್ರಾನ್ ಹರಡುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳು ಸರಿಯಾಗಿ ಗಮನಿಸದೇ ಇರುವುದರಿಂದ ಶೌಚಾಲಯದ ಸುತ್ತಮುತ್ತ ಪಾಚಿ ಬೆಳದು ಕ್ರಿಮಿಕೀಟಗಳು ಉತ್ಪತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಅವಾಸನ ಕೇಂದ್ರವಾಗಿದ್ದು ಬಾಟಲ್, ತಂಬಾಕು ತಿಂದು ಎಸೆದ ಪ್ಲಾಸ್ಟಿಕ್ ಕವರ್ ಗಳು, ಗುಟ್ಕಾ ಪಾಕೇಟ್, ಸೇರಿದಂತೆ ಮದ್ಯದ ಬಾಟಲಿಗಳು, ಬಿದ್ದಿದ್ದರೂ ಅದನ್ನ ಸ್ವಚ್ಚಗೊಳಿಸುವ ಕಾರ್ಯವನ್ನ ಮಾಡಿಲ್ಲ. ಹೀಗಾಗಿ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದು,ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಶೌಚಾಲಯಕ್ಕೆ ಹೋಗಲು ಹಿಂದು ಮುಂದು ನೋಡುತ್ತಿದ್ದಾರೆ.

ನಿಲ್ದಾಣದ ಹತ್ತಿರ ತಾಲ್ಲೂಕು ಕಛೇರಿ, ಪೊಲೀಸ್‌ ಠಾಣೆ ಹಾಗೂ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಇದ್ದು ವಾಸದ ಮನೆಗಳಿದ್ದು ಸರ್ಕಾರ ಸ್ವಚ್ಛತೆಗಾಗಿ ಕೋಟಿಗಟ್ಟಲೇ ಹಣ ಸುರಿಯುತ್ತಿದೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಧಿಕಾರಿಗಳೇ ಕಣ್ಣು ಮುಚ್ಚಿ ಕುಳಿತಿರುವುದು ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಬಿ.ಧರ್ಮರಾಜ್ ಮಾತನಾಡಿ ಎಲ್ಲಿಯೂ ಬೇಡವಾದ ತಿರಸ್ಕತ ಅಧಿಕಾರಿಗಳು ಆಲೂರು ತಾಲ್ಲೂಕಿನಲ್ಲಿ ಬೀಡು ಬಿಟ್ಟಿದ್ದಾರೆ ಭ್ರಷ್ಟಾ ಅಧಿಕಾರಿಗಳಿಗೆ ಆಶ್ರಯ ತಾಣ ಇಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ ಜನಪ್ರತಿನದಿಗಳು ಕೇವಲ ಸರ್ಕಾರದಿಂದ ಹಣ ಬಿಡುಗಡೆಯಾದರೆ ಸಾಕು ಹಣ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದಾರೆ ಆಲೂರು ತಾಲ್ಲೂಕಿನಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಇಲ್ಲಿನ ಶಾಸಕರು ಹಾಗೂ ಅಧಿಕಾರಿಗಳು ಹಣ ಮಾಡುವ ಸಲುವಾಗಿ ಅಪವಿತ್ರ ಮೈತ್ರಿ ಮಾಡಿಕೊಂಡು ಹಣ ಲೂಟಿ ಹೊಡಯುತ್ತಿದ್ದಾರೆ ಒಮಿಕ್ರೋನ್ ಸೊಂಕು ಹರಡುತ್ತಿದ್ದರು ಬಸ್ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಕಣ್ಮುಚ್ಛಿ ಕುಳಿತಿದ್ದಾರೆ ತಾಲ್ಲೂಕು ಕಛೇರಿಯಲ್ಲಿಯೂ ಇದೆ ಪರಿಸ್ಥಿತಿ ತಕ್ಷಣ ಇಂತಹ ಅಧಿಕಾರಿಗಳನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದರು.

ಪಟ್ಟಣದ ಬಸ್ ನಿಲ್ದಾಣದಲ್ಲಿರುವ ಶೌಚಾಲಯದ ತೊಟ್ಟಿಗಳು ತುಂಬಿ ಚರಂಡಿಯಲ್ಲಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ನಿಲ್ದಾಣದ ಪಕ್ಕದಲ್ಲಿರುವ ಮನೆಯಲ್ಲಿ ವಾಸಿಸುವ ಸ್ಥಳಿಯರು ನರಕಯಾತನೆ ಅನುಭವಿಸುತ್ತಿದ್ದಾರೆ ಅದ್ದರಿಂದ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.

– ಮಧು, ತಾಲ್ಲೂಕು ಉಸ್ತುವಾರಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಆಲೂರು,

ಒಟ್ಟಾರೆ, ಕೋವಿಡ್ ವೇಳೆಯೇ ತಾಲ್ಲೂಕು ಕಛೇರಿ ಸ್ವಚ್ಚತೆ ಕಾಪಾಡದೇ ಇದರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಇನ್ನಾದ್ರೂ ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳು ಇತ್ತ ಗಮನಹರಿಸಿ ಸ್ವಚ್ಚತೆ ಮಾಡ್ತಾರಾ ಕಾದುನೋಡಬೇಕಿದೆ.

– ಟಿ.ಕೆ.ಕುಮಾರಸ್ವಾಮಿ, ಟಿ.ತಿಮ್ಮನಹಳ್ಳಿ

ಟಾಪ್ ನ್ಯೂಸ್

Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್‌ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!

Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್‌ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

yashasvi jaiswal

INDvsNZ: ಒಂದು ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಸಿಕ್ಸರ್‌ ಬಾರಿಸಿದ ದಾಖಲೆ ಮಾಡಿದ ಜೈಸ್ವಾಲ್

14-katapady

Katapady:ಸೂರ್ಯನ ಶಾಖದಿಂದ ಮರದ ಹಲಗೆಯಲ್ಲಿ ರಚಿಸಿದ ಕಲಾಕೃತಿಗೆ ರಾಷ್ಟ್ರಪತಿಗಳಿಂದ ಮೆಚ್ಚುಗೆ

Hardik Pandya

Hardik Pandya: ಶೀಘ್ರ ದೊಡ್ಡ ವಿಷಯ ಪ್ರಕಟ: ಹಾರ್ದಿಕ್‌ ಪೋಸ್ಟ್‌ ಕುತೂಹಲ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

Desi Swara: ವಾರಾಣಸಿಯಲ್ಲಿನ ಲಾಲ್‌ ಬಹದ್ದೂರ್‌ ಶಾಸ್ತ್ರಿಯವರ ಮನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ

Karnataka: ಬೇಲೆಕೇರಿ ಅದಿರು; ಸತೀಶ್‌ ಸೈಲ್‌ ಸೇರಿ 7 ಮಂದಿಗೆ ಇಂದು ಶಿಕ್ಷೆ ಪ್ರಕಟ

Karnataka: ಬೇಲೆಕೇರಿ ಅದಿರು; ಸತೀಶ್‌ ಸೈಲ್‌ ಸೇರಿ 7 ಮಂದಿಗೆ ಇಂದು ಶಿಕ್ಷೆ ಪ್ರಕಟ

1-aa-nama

By election; 3 ಕ್ಷೇತ್ರ 83 ನಾಮಪತ್ರ

1-aaree

MUDA Case: ಸಿಎಂ ಸಿದ್ದರಾಮಯ್ಯ ಪತ್ನಿ 3 ತಾಸು ಲೋಕಾ ವಿಚಾರಣೆ

MUST WATCH

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

17-

Sagara: ರೈತರು ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ; ಜೆಡಿಎಸ್ ಬೆಂಬಲ

Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್‌ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!

Coldplay, Diljit ಕಾರ್ಯಕ್ರಮದ ನಕಲಿ ಟಿಕೆಟ್‌ ಮಾರಾಟ: ಬೆಂಗಳೂರು ಸೇರಿ ಹಲವೆಡೆ ಇ.ಡಿ ದಾಳಿ!

16-bng

Bengaluru: ಕಟ್ಟಡ ಕುಸಿತಕ್ಕೆ ಗುತ್ತಿಗೆದಾರನೂ ಬಲಿ!

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

Mudhol: ಬಾಕಿ ಹಣ ನೀಡುವಂತೆ ಕಾರ್ಖಾನೆ ಎದುರು ರೈತರ ಧರಣಿ

delhi

ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.