Badminton: ಪಿ.ವಿ.ಸಿಂಧು, ಲಕ್ಷ್ಯಸೇನ್, ಟ್ರೀಸಾ-ಗಾಯತ್ರಿ ಚಾಂಪಿಯನ್ಸ್
ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಬ್ಯಾಡ್ಮಿಂಟನ್
Team Udayavani, Dec 2, 2024, 1:36 AM IST
ಲಕ್ನೋ: “ಸಯ್ಯದ್ ಮೋದಿ ಇಂಟರ್‌ನ್ಯಾಶನಲ್ ಸೂಪರ್ 300′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಆತಿಥೇಯ ಭಾರತ ಪ್ರಶಸ್ತಿಗಳ ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ. ವನಿತಾ ಸಿಂಗಲ್ಸ್‌ನಲ್ಲಿ ಪಿ.ವಿ. ಸಿಂಧು, ಪುರುಷರ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್, ವನಿತಾ ಡಬಲ್ಸ್‌ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಆದರೆ ಪುರುಷರ ಡಬಲ್ಸ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್-ಸಾಯಿ ಪ್ರತೀಕ್, ಮಿಶ್ರ ಡಬಲ್ಸ್‌ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ರನ್ನರ್ ಅಪ್‌ಗೆ ಸಮಾಧಾನಪಡಬೇಕಾಯಿತು. ಭಾರತದ ಮೊದಲ ಪ್ರಶಸ್ತಿ ವನಿತಾ ಡಬಲ್ಸ್ ನಲ್ಲಿ ಬಂತು. ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್ ಚೀನದ ಬಾವೊ ಲಿ ಜಿಂಗ್-ಲಿ ಕ್ವಿಯಾನ್ ಅವರನ್ನು 21-18, 21-11 ಅಂತರದಿಂದ ಮಣಿಸಿ ತಮ್ಮ ಮೊದಲ “ಸೂಪರ್ 300′ ಪ್ರಶಸ್ತಿಯನ್ನೆತ್ತಿದರು. 2022ರಲ್ಲಿ ಇವರು ರನ್ನರ್ ಅಪ್ ಆಗಿದ್ದರು.
ನೀಗಿತು ಪ್ರಶಸ್ತಿ ಬರ
ನೆಚ್ಚಿನ ಆಟಗಾರ್ತಿ ಪಿ.ವಿ. ಸಿಂಧು ವಿಶ್ವದ 119ನೇ ರ್‍ಯಾಂಕ್‌ನ ಚೀನೀ ಶಟ್ಲರ್ ವು ಲುವೊ ಯು ಅವರನ್ನು 21-14, 21-16 ಅಂತರದಿಂದ ಮಣಿಸಿದರು. ಇದು ಸಿಂಧು ಗೆದ್ದ 3ನೇ “ಸಯ್ಯದ್ ಮೋದಿ ಇಂಟರ್‌ನ್ಯಾಶನಲ್’ ಪ್ರಶಸ್ತಿ. ಇದಕ್ಕೂ ಮೊದಲು ಅವರು 2017 ಮತ್ತು 2022ರಲ್ಲಿ ಚಾಂಪಿಯನ್ ಆಗಿದ್ದರು.
ಈ ಸಾಧನೆಯೊಂದಿಗೆ ಸಿಂಧು 2 ವರ್ಷಗಳ ಪ್ರಶಸ್ತಿಯ ಬರವನ್ನು ನೀಗಿಸಿಕೊಂಡರು. ಸಿಂಧು ಕೊನೆಯ ಸಲ ಪೋಡಿಯಂ ಏರಿದ್ದು 2022ರಲ್ಲಿ. ಅಂದು ಸಿಂಗಾಪುರ್ ಓಪನ್ ಪ್ರಶಸ್ತಿ ಜಯಿಸಿದ್ದರು. ಈ ವರ್ಷ “ಮಲೇಷ್ಯಾ ಮಾಸ್ಟರ್ ಸೂಪರ್ 500′ ಟೂರ್ನಿಯಲ್ಲಿ ಚಾಂಪಿಯನ್ ಆಗುವ ನಿರೀಕ್ಷೆ ಇತ್ತು. ಆದರೆ ಫೈನಲ್‌ನಲ್ಲಿ ಎಡವಿದರು.
ಸೇನ್‌ಗೆ ಸುಲಭ ಜಯ
ಪುರುಷರ ಸಿಂಗಲ್ಸ್ ವಿಭಾಗದ ಫೇವರಿಟ್ ಆಟಗಾರನಾಗಿದ್ದ ಲಕ್ಷ್ಯ ಸೇನ್ ಸಿಂಗಾಪುರದ ಜಿಯ ಹೆಂಗ್ ಜೇಸನ್ ಅವರನ್ನು ಬಹಳ ಸುಲಭದಲ್ಲಿ 21-6, 21-7 ಅಂತರದಿಂದ ಮಣಿಸಿದರು.
ರನ್ನರ್ ಅಪ್
ಪುರುಷರ ಡಬಲ್ಸ್ ಫೈನಲ್‌ನಲ್ಲಿ ಪೃಥ್ವಿ ಕೃಷ್ಣಮೂರ್ತಿ ರಾಯ್-ಸಾಯಿ ಪ್ರತೀಕ್ ಅವರನ್ನು ಚೀನದ ಹುವಾಂಗ್ ಡಿ-ಲಿಯು ಯಾಂಗ್ 21-14, 19-21, 21-17 ಅಂತರದಿಂದ ಹಿಮ್ಮೆಟ್ಟಿಸಿದರು.
ಮಿಶ್ರ ಡಬಲ್ಸ್ ನಲ್ಲಿ ತನಿಷಾ ಕ್ರಾಸ್ಟೊ-ಧ್ರುವ ಕಪಿಲ ಥಾಯ್ಲೆಂಡ್‌ನ ಡೆಚಾಪೋಲ್ ಪುವಾರಾನುಕ್ರೋಹ್-ಸುಪಿಸ್ಸರ ಪೆವ್ಸಂಪ್ರಾನ್ ವಿರುದ್ಧ ಗೆಲುವಿನ ಆರಂಭ ಪಡೆದರೂ ಇದೇ ಲಯದಲ್ಲಿ ಸಾಗಲು ವಿಫಲರಾದರು. ಥಾಯ್ಲೆಂಡ್ ಜೋಡಿ 18-21, 21-14, 21-8ರಿಂದ ಗೆದ್ದು ಬಂದಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಭಾರತದ 21 ಸ್ಪರ್ಧಿಗಳು ಭಾಗಿ
Women’s Ashes Series: ಆಸ್ಟ್ರೇಲಿಯ-ಇಂಗ್ಲೆಂಡ್ ಬಿಗ್ ಫೈಟ್
Jaiswal: ಚಾಂಪಿಯನ್ಸ್ ಟ್ರೋಫಿಗೆ ಯಶಸ್ವಿ ಜೈಸ್ವಾಲ್; ಇಂಗ್ಲೆಂಡ್ ಸರಣಿಯಲ್ಲೇ ಪದಾರ್ಪಣೆ?
Yuzi Chahal: ಡಿವೋರ್ಸ್ ಸುದ್ದಿಯ ನಡುವೆ ಬೇರೆ ಯುವತಿ ಜತೆ ಕಾಣಿಸಿಕೊಂಡ ಚಾಹಲ್; ಯಾರೀಕೆ?
Team India: ಕೆಎಲ್, ಪಾಂಡ್ಯ, ಗಿಲ್ ಅಲ್ಲ.., ಚಾಂಪಿಯನ್ಸ್ ಟ್ರೋಫಿಗೆ ಈತನೇ ಉಪ ನಾಯಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.