ಬೆಂಗಳೂರು ಚಿತ್ರೋತ್ಸವ : ಹಲವಾರು ವೈವಿಧ್ಯ-ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ
ಈ ಬಾರಿಯ ಮತ್ತೊಂದು ವಿಶೇಷ ಹಾಗೂ ಬೆಳವಣಿಗೆಯಂದರೆ, ಬಿಫೆಸ್ ಸ್ಕ್ರಿಪ್ಟ್ ಲ್ಯಾಬ್.
Team Udayavani, Feb 26, 2020, 1:12 PM IST
ಉದಯವಾಣಿ ಪ್ರತಿನಿಧಿಯಿಂದ ಬೆಂಗಳೂರು ಫೆ. 26 : ಐಟಿ ರಾಜಧಾನಿ ಬೆಂಗಳೂರು 12 ನೇ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಜ್ಜಾಗಿದೆ. ಇಂದು (ಬುಧವಾರ) ಚಾಲನೆಗೊಳ್ಳುವ ಚಿತ್ರೋತ್ಸವ ಮಾ. 4 ರವರೆಗೂ ನಡೆಯಲಿದೆ. ಈಗಾಗಲೇ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಈ ಚಿತ್ರೋತ್ಸವ ದೇಶೀಯ ಚಿತ್ರ ಸೀಸನ್‌ನ ಕೊನೇ ಚಿತ್ರೋತ್ಸವ.
ಯಶವಂತಪುರ ಬಳಿಯ ಒರಿಯಾನ್ ಮಾಲ್, ಬನಶಂಕರಿಯ ಸುಚಿತ್ರಾ ಫಿಲಂ ಸೊಸೈಟಿ, ರಾಜಾಜಿನಗರದ ನವರಂಗ್ ಥಿಯೇಟರ್ ಹಾಗೂ ಡಾ. ರಾಜ್ ಭವನಕ್ಕೆ ವಿಸ್ತರಣೆಗೊಂಡಿರುವುದು ವಿಶೇಷ. ಸುಮಾರು 60 ದೇಶಗಳ 200 ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಸಿದ್ಧತೆ ಕುರಿತು ವಿವರಿಸಿದ ಚಿತ್ರೋತ್ಸವ ಕಲಾ ನಿರ್ದೇಶಕ ಎನ್। ವಿದ್ಯಾಶಂಕರ್, ‘ಪ್ರತಿನಿಧಿಗಳು ಹಾಗೂ ಸಿನಿಮಾ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಪ್ರತಿನಿಧಿಗಳೂ ಸೇರಿದಂತೆ ಸುಮಾರು 10 ಸಾವಿರ ಮಂದಿ ಈ ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಂಬಂಧ ಪೂರ್ವ ಸಿದ್ಧತೆ ಮುಗಿದಿದೆ’ ಎಂದು ಉದಯವಾಣಿಗೆ ತಿಳಿಸಿದ್ದಾರೆ.
ಈ ಬಾರಿಯ ಉತ್ಸವದ ಥೀಮ್ ‘ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಸಿನಿಮಾ ‘. ಹಾಗಾಗಿ ಈ ಥೀಮ್ ನ್ನು ಚಿತ್ರಿಸುವ ಹಾಗೂ ಆ ಕುರಿತು ಹೇಳುವಂಥ ಹಲವು ಚಿತ್ರಗಳಿಗೆ ಪ್ರಾಮುಖ್ಯ ನೀಡಲಾಗಿದೆ. ವಿವಿಧ ವಿಭಾಗಗಳಲ್ಲಿ ಭಾರತೀಯ ಪಾರಂಪರಿಕ ಸಂಗೀತ ಪ್ರಧಾನ ಚಿತ್ರಗಳನ್ನು ಪ್ರದರ್ಶಿಸಲು ಯೋಜಿಸಲಾಗಿದೆ.
ಕನ್ನಡದ ಸಂಧ್ಯಾರಾಗ, ಹಂಸಗೀತೆ, ಶ್ರೀ ಪುರಂದರ ದಾಸರು, ಮಲಯ ಮಾರುತ, ವಾಣಿ ಸೇರಿದಂತೆ ಹಿಂದಿಯ ತಾನ್‌ಸೇನ್. ಬೈಜು ಬಾವ್ರಾ, ತೆಲುಗಿನ ಶಂಕರಾಭರಣಂ, ಮರಾಠಿಯ ಸಂತ ತುಕಾರಾಂ, ತೆಲುಗಿನ ತ್ಯಾಗಯ್ಯ, ತಮಿಳಿನ ಮೀರಾ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು ವಿದ್ಯಾಶಂಕರ್.
ಈ ಬಾರಿಯ ಮತ್ತೊಂದು ವಿಶೇಷ ಹಾಗೂ ಬೆಳವಣಿಗೆಯಂದರೆ, ಬಿಫೆಸ್ ಸ್ಕ್ರಿಪ್ಟ್ ಲ್ಯಾಬ್. ಎರಡು ವರ್ಷದಿಂದ ಈ ಸ್ಕ್ರಿಪ್ಟ್ ಲ್ಯಾಬ್ ಮಾಡುತ್ತಿದ್ದೆವು. ಇದರಲ್ಲಿ ಹೆಸರಾಂತ ಸಿನಿಮಾ ನಿರ್ದೇಶಕರು ಹೊಸಬರಿಗೆ ಸ್ಕ್ರಿಪ್ಟ್ ಇತ್ಯಾದಿ ಕುರಿತು ಹೇಳುತ್ತಿದ್ದರು. ಹೀಗೆ ತರಬೇತಿಯಲ್ಲಿ ಪಾಲ್ಗೊಂಡ ಐವರು ಈಗ ಸ್ಕ್ರಿಪ್ಟ್ ರಚಿಸಿದ್ದಾರೆ. ಅದರ ಕುರಿತು ಚರ್ಚೆ ಹಾಗೂ ಮಾರ್ಗದರ್ಶನ ಈ ಲ್ಯಾಬ್‌ನಲ್ಲಿ ನಡೆಯಲಿದೆ ಎಂಬುದು ವಿದ್ಯಾಶಂಕರ್ ರ ವಿವರಣೆ.
ಈ ಚಿತ್ರೋತ್ಸವದಲ್ಲಿ ಕ್ಲಾಸಿಕ್ ಚಿತ್ರಗಳ ಮರು ವೀಕ್ಷಣೆ ಮತ್ತೊಂದು ವಿಶೇಷ. ಬೈಸಿಕಲ್ ಥೀವ್ಸ್‌ನಿಂದ ಹಿಡಿದು ದಿ ಜನರಲ್ ಇತ್ಯಾದಿ ಚಿತ್ರಗಳಿವೆ. ಹಲವಾರು ವಿಶ್ವ ಸಿನಿಮಾಗಳ ಭಾರತೀಯ ಪ್ರೀಮಿಯರ್ ಈ ಚಿತ್ರೋತ್ಸವದಲ್ಲಾಗುತ್ತಿದೆ. ಅಕಿರಾ ಕುರಸೋವಾ ಸೇರಿದಂತೆ ಹಲವರ ಚಿತ್ರಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗುತ್ತಿದೆ.
ಮಾಸ್ಟರ್ ಕ್ಲಾಸಸ್, ವಿಚಾರ ಸಂಕಿರಣ ಚಿತ್ರೋತ್ಸವದ ಭಾಗವಾಗಿದೆ. ಸ್ಪರ್ಧೆಗಳ ಪೈಕಿ ಏಷ್ಯನ್ ಚಲನಚಿತ್ರ ವಿಭಾಗ, ಚಿತ್ರ ಭಾರತಿ ಹಾಗೂ ಕನ್ನಡ ಸಿನಿಮಾಗಳ ವಿಭಾಗದಲ್ಲಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.