Bangla Crisis: ಮಹಿಳಾ ಟಿ20 ವಿಶ್ವಕಪ್ ಆತಿಥ್ಯವಿಲ್ಲ: ಜಯ್ ಶಾ
ಮುಂದಿನ ವರ್ಷ ನಾವು ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸುತ್ತೇವೆ
Team Udayavani, Aug 15, 2024, 11:00 PM IST
ಮುಂಬಯಿ: ಬಾಂಗ್ಲಾದೇಶದಲ್ಲಿ ಸಂಭವಿಸಿರುವ ಬಿಕ್ಕಟ್ಟಿನಿಂದಾಗಿ ಮುಂಬರುವ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸಲು ಐಸಿಸಿ ಪರ್ಯಾಯ ಸ್ಥಳವನ್ನು ಹುಡುಕುತ್ತಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಈ ಪಂದ್ಯಾವಳಿಗೆ ಭಾರತ ಆತಿಥ್ಯ ವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮವೊಂದರ ಜತೆ ಮಾತನಾಡಿದ ಜಯ್ ಶಾ, “ಮಹಿಳಾ ಟಿ20 ವಿಶ್ವಕಪ್ ಆಯೋಜನೆಗೆ ಐಸಿಸಿ ನಮ್ಮನ್ನು ಸಂಪರ್ಕಿಸಬಹುದು. ಆದರೆ ನಾನು ಇದನ್ನು ನಿರಾಕರಿಸುತ್ತೇನೆ. ಮುಂದಿನ ವರ್ಷ ನಾವು ಮಹಿಳಾ ಏಕದಿನ ವಿಶ್ವಕಪ್ ಆಯೋಜನೆ ಮಾಡುತ್ತಿದ್ದೇವೆ. ಎರಡು ವಿಶ್ವಕಪ್ ಕೂಟಗಳನ್ನೂ ಭಾರತ ನಡೆಸುತ್ತಿದೆ ಎಂಬ ಅಭಿಪ್ರಾಯ ಮೂಡಲು ಬಿಡುವುದಿಲ್ಲ’ ಎಂದರು.
ಕೊಹ್ಲಿ, ರೋಹಿತ್ ಮೇಲೆ ಒತ್ತಡವಿಲ್ಲ
ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ದೇಶಿ ಕ್ರಿಕೆಟ್ ಆಡಿ ಎಂದು ಹೇಳುವ ಮೂಲಕ ಅವರ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹೇರಲು ಬಯಸುವುದಿಲ್ಲ. ಈಗಾಗಲೇ ಅವರು ಸಾಕಷ್ಟು ಒತ್ತಡ ನಿಭಾಯಿಸಿದ್ದಾರೆ ಎಂದು ಜಯ್ ಶಾ ಹೇಳಿದರು.
ಒಲಿಂಪಿಕ್ಸ್ ಪಟುಗಳಿಗೂ ಅವಕಾಶ
ಬೆಂಗಳೂರಿನ ಹೊರವಲಯದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾಗುತ್ತಿರುವ ಎನ್‌ಸಿಎಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೂ ಅವಕಾಶ ಮಾಡಿಕೊಡಲಾಗುತ್ತದೆ. ನೀರಜ್ ಚೋಪ್ರಾರಂತಹ ಆಟಗಾರರು ಇಲ್ಲಿ ತರಬೇತಿ ಪಡೆದುಕೊಳ್ಳಬಹುದು ಎಂದು ಶಾ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.