Bangladesh Unrest: ಬಂಗಾಳದ ಗಡಿ ಪ್ರವೇಶಿಸಲು ಬಾಂಗ್ಲಾದೇಶಿಯರ ಯತ್ನ
ಭಾರತದ ಗಡಿಯಲ್ಲಿ ಆವಾಮಿ ಲೀಗ್ ಪಕ್ಷದ ಸದಸ್ಯರು, ಹಿಂದೂಗಳೇ ಅಧಿಕ; ತಡೆಯೊಡ್ಡಿದ ಬಿಎಸ್‌ಎಫ್ ಪಡೆ
Team Udayavani, Aug 8, 2024, 9:03 PM IST
ಜಲ್‌ಪೈಗುರಿ (ಕೋಲ್ಕತ್ತ): ಬಾಂಗ್ಲಾದೇಶದಲ್ಲಿ ಉಂಟಾದ ಅಶಾಂತಿ, ಶೇಖ್ ಹಸೀನಾ ನೇತೃತ್ವದ ಸರಕಾರ ಪತನದ ಬಳಿಕ ಉಂಟಾದ ರಾಜಕೀಯ ಅಸ್ಥಿರತೆಯಿಂದ ನೂರಾರು ಬಾಂಗ್ಲಾದೇಶಿಯರು ಭಾರತದ ಗಡಿಯೊಳಗೆ ಪ್ರವೇಶಿಸಿ ಆಶ್ರಯ ಪಡೆಯಲು ಪ್ರಯತ್ನಿಸುತ್ತಿದ್ದು, ಆದರೆ, ಗಡಿ ಭದ್ರತಾ ಪಡೆಗಳು (BSF) ಒಳನುಸುಳುವಿಕೆ ಪ್ರಯತ್ನಗಳ ವಿಫಲಗೊಳಿಸಿದರು.
ಪಶ್ಚಿಮ ಬಂಗಾಳದ ಜಲ್‌ಪೈಗುರಿಯ ಮಾಣಿಕ್‌ಗಂಜ್ ಗಡಿಯಲ್ಲಿ ಗುರುವಾರ 500ಕ್ಕೂ ಹೆಚ್ಚು ಬಾಂಗ್ಲಾದೇಶಿ ಪ್ರಜೆಗಳು ನೆರೆದಿದ್ದರು. ವರದಿಗಳ ಪ್ರಕಾರ, ಜನರನ್ನು ನಿಯಂತ್ರಿಸಲು ಬಿಎಸ್ಎಫ್ ಸಿಬ್ಬಂದಿ ಕೂಡ ಗುಂಡು ಹಾರಿಸಿದರು ಎನ್ನಲಾಗಿದೆ. ಭಾರತದ ಗಡಿಗೆ ನುಸುಳುವವರ ಪೈಕಿ ಹಿಂದೂಗಳು ಹಾಗೂ ಶೇಖ್ ಹಸೀನಾ ಪಕ್ಷವಾದ ಆವಾಮಿ ಲೀಗ್‌ನ ಸದಸ್ಯರು ಬೇಲಿ ಹಾಕದೇ ಇರುವ ಪ್ರದೇಶದ ಗಡಿಯಲ್ಲಿ ಒಳ ನುಸುಳುತ್ತಿದ್ದು, ಹೀಗೆ ಗಡಿ ಉದ್ದಕ್ಕೂ ಹಲವೆಡೆ ಒಳ ನುಸುಳುವಿಕೆ ಪ್ರಯತ್ನಗಳು ನಡೆಯುತ್ತಿವೆ. ಮತ್ತೊಂದು ಗಡಿ ಪ್ರದೇಶದಲ್ಲಿ 6 ಮಂದಿ ಗಡಿ ಪ್ರವೇಶಿಸಲು ಯತ್ನಿಸಿದಾಗ ಬಿಎಸ್‌ಎಫ್ ಸಿಬ್ಬಂದಿ ತಡೆದಿದ್ದಾರೆ.
ಬಾಂಗ್ಲಾದೇಶಿಗಳು ಚಿಲ್ದಂಗಾ ಗ್ರಾಮದ ಝೀರೋ ಪಾಯಿಂಟ್‌ನಲ್ಲಿ ಪ್ರವೇಶಿಸಲು ಪ್ರಯತ್ನಿಸಿದರು ಎಂದು ವರದಿಗಳು ಹೇಳುತ್ತವೆ. ಗಡಿ ದಾಟುವ ಮೊದಲು ಬಿಎಸ್ಎಫ್ ಪಡೆ ಸುಮಾರು 600 ರಿಂದ 1000 ನುಸುಳುಕೋರರನ್ನು ತಡೆದಿದ್ದಾರೆ. ಒಳನುಸುಳುವಿಕೆಯನ್ನು ತಡೆಯಲು ಬಿಎಸ್ಎಫ್ ಸಿಬ್ಬಂದಿ ಹಳ್ಳಿಗಳಿಗೆ ತೆರಳಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದರು.
ಬಿಎಸ್‌ಎಫ್ ಸಿಬ್ಬಂದಿಯಿಂದ ನಿಯಂತ್ರಣ:
ಬಿಎಸ್‌ಎಫ್ ಡಿಐಜಿ (ಉತ್ತರ ಬಂಗಾಳ ಗಡಿ ಪ್ರದೇಶ) ಅಮಿತ್ ಕುಮಾರ್ ತ್ಯಾಗಿ ಮಾತನಾಡಿ “ಬಾಂಗ್ಲಾದ ಗಡಿ ಜಿಲ್ಲೆಯಾದ ಠಾಕೂರ್‌ಗಾಂವ್‌ನ ಕಿಶನ್‌ಗಂಜ್‌ನ ಉತ್ತರ ದಿನಜ್‌ಪುರ್ ಗಡಿ ಪ್ರದೇಶದಲ್ಲಿ 200ಕ್ಕೂ ಹೆಚ್ಚು ಮಂದಿ ಆವಾಮಿ ಲೀಗ್ ಪಕ್ಷದ ಸದಸ್ಯರು ಹಾಗೂ ಹಿಂದೂಗಳು ಸೇರಿದ ಜನರ ಗುಂಪು ಸೇರಿತ್ತು. ಆ ಗುಂಪನ್ನು ಗಾಳಿಯಲ್ಲಿ ಗುಂಡು ಹಾರಿಸಿ ಚದುರಿಸಲಾಯಿತು. ಆ ಗ್ರಾಮಸ್ಥರೆಲ್ಲ ಈಗಲೂ 200ಮೀ. 500ಮೀ. ಅಂತರದಲ್ಲಿದ್ದಾರೆ. ಹಿರಿಯ ಬಿಎಸ್‌ಎಫ್ ಅಧಿಕಾರಿಗಳು ಹಾಗೂ ಬಿಜಿಬಿ (ಬಾಂಗ್ಲಾದೇಶ ಗಡಿ ದಳ) ತಂಡದೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ” ಎಂದು ತ್ಯಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.