Bangladesh Unrest: ಹಿಂದೂ ಸಮುದಾಯದ ರಕ್ಷಣೆ: ಬಾಂಗ್ಲಾ ಸರಕಾರ ಬದ್ಧತೆ ತೋರಲಿ


Team Udayavani, Oct 14, 2024, 6:00 AM IST

BAnga

ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿ ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಡೆಯುತ್ತಿರುವ ದಾಳಿಗಳು ಒಂದೇ ಸಮನೆ ಹೆಚ್ಚುತ್ತಲೇ ಸಾಗಿದ್ದು, ಅಲ್ಲಿನ ಅಲ್ಪಸಂಖ್ಯಾತ ಸಮುದಾಯವನ್ನು ಆತಂಕಕ್ಕೀಡು ಮಾಡಿದೆ. ದಂಗೆ ನಡೆಸುವ ಮೂಲಕ ಬಾಂಗ್ಲಾದಲ್ಲಿ ಅಧಿಕಾರದಲ್ಲಿದ್ದ ಶೇಖ್‌ ಹಸೀನಾ ನೇತೃತ್ವದ ಚುನಾಯಿತ ಸರಕಾರ‌ವನ್ನು ಪದಚ್ಯುತಗೊಳಿಸಿದ ಬಳಿಕ ಅಲ್ಲಿನ ಹಿಂದೂಗಳು ಅತಂತ್ರರಾಗಿದ್ದಾರೆ.

ಸದ್ಯ ಬಾಂಗ್ಲಾದೇಶದಲ್ಲಿರುವ ಮಧ್ಯಂತರ ಸರಕಾರ‌ ಹಿಂದೂಗಳಿಗೆ ರಕ್ಷಣೆ ನೀಡುವ ಅಭಯ ನೀಡುತ್ತ ಬಂದಿದ್ದರೂ ಹಿಂದೂಗಳ ದೇಗುಲಗಳು, ಆರಾಧನ ಸ್ಥಳಗಳ ಮೇಲಿನ ದಾಳಿಗಳು ಮುಂದುವರಿಯುತ್ತಲೇ ಇದೆ. ನವರಾತ್ರಿ ಸಂಭ್ರ ಮಾ ಚರಣೆ ಸಂದರ್ಭದಲ್ಲೂ ದುರ್ಗಾಮಾತೆಯ ಪೆಂಡಾಲ್‌ಗ‌ಳ ಮೇಲೆ ಪೆಟ್ರೋಲ್‌ ಬಾಂಬ್‌ಗಳನ್ನು ಎಸೆಯಲಾಗಿದೆಯಲ್ಲದೆ ಹಲವೆಡೆ ದಾಳಿಗಳನ್ನು ನಡೆಸಿ, ದೇವಾಲಯಗಳಲ್ಲಿನ ಚಿನ್ನಾಭರಣಗಳನ್ನು ಲೂಟಿ ಮಾಡಲಾಗಿದೆ. ಈ ಎಲ್ಲ ಘಟನಾವಳಿಗಳು ಬಾಂಗ್ಲಾದಲ್ಲಿನ ಹಿಂದೂಗಳನ್ನು ಅಭದ್ರತೆಯ ಕೂಪಕ್ಕೆ ತಳ್ಳಿವೆ.

ಬಾಂಗ್ಲಾದಲ್ಲಿನ ಪ್ರಜಾಸತ್ತಾತ್ಮಕ ಸರಕಾರ‌ವನ್ನು ದಾಂಧಲೆ ನಡೆಸಿ ಕಿತ್ತೂಗೆ ಯು­ವಲ್ಲಿ ಯಶಸ್ವಿಯಾದ ಅಲ್ಲಿನ ಕೆಲವು ಸಂಘಟನೆಗಳು ಈಗ ದೇಶದಲ್ಲಿನ ಹಿಂದೂ­ಗಳನ್ನು ಗುರಿಯಾಗಿಸಿ ಅವರ ಮೇಲೆ ಅವ್ಯಾಹತವಾಗಿ ದಾಳಿಗಳನ್ನು ನಡೆಸುತ್ತಿವೆ. ದೇಶದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಪುನರ್‌ ಸ್ಥಾಪಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ್ದ ಮಧ್ಯಾಂತರ ಸರಕಾರ‌ ಈ ಕಿಡಿಗೇಡಿಗಳ ದುಷ್ಕೃತ್ಯಗಳಿಗೆ ಮೂಕಪ್ರೇಕ್ಷಕವಾಗಿದೆ.

ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿ ಯಾದಾಗಿ­ನಿಂ­ದಲೂ ಇದರ ಹಿಂದೆ ಭಾರೀ ಷಡ್ಯಂತ್ರ ಅಡಗಿರುವ ಮಾತು ಗಳು ಕೇಳಿ ಬರು­ತ್ತಲೇ ಇವೆಯಾದರೂ ಈ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ವಾಗಲೀ, ವಿಶ್ವಸಂಸೆ­§ಯಾಗಲೀ ತಲೆಕೆಡಿಸಿಕೊಂಡಿಲ್ಲ. ಇದು ಬಾಂಗ್ಲಾದ ಆಂತರಿಕ ವಿಚಾರ ಎಂದು ಇವೆಲ್ಲವೂ ಮೌನಕ್ಕೆ ಶರಣಾಗಿವೆ. ಇದೇ ವೇಳೆ ಬಾಂಗ್ಲಾದಲ್ಲಿನ ಈ ಬೆಳವಣಿಗೆಗಳ ಹಿಂದೆ ವಿಶ್ವದ ಬಲಿಷ್ಠ ರಾಷ್ಟ್ರಗಳ ಕೈವಾಡವೂ ಇದೆ ಎಂಬ ಆರೋ ಪವೂ ಇದ್ದು, ಭಾರತವನ್ನು ಗುರಿಯಾಗಿಸಿಯೇ ಬಾಂಗ್ಲಾದಲ್ಲಿ ಅರಾ ಜಕತೆಯ ವಾತಾ­­ವ­ರಣವನ್ನು ಸೃಷ್ಟಿಸಿ ಹಿಂದೂಗಳನ್ನು ಗುರಿಯಾಗಿಸಿ ದಾಳಿಗಳನ್ನು ನಡೆಸಲಾ­ಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ. ಬಾಂಗ್ಲಾದಲ್ಲಿನ ಪ್ರಸಕ್ತ ಬೆಳವಣಿಗೆಗ­ಳನ್ನು ಗಮನಿಸಿದಾಗ ಈ ಎಲ್ಲ ಅನುಮಾನಗಳಲ್ಲಿ ಹುರುಳಿದ್ದಂತೆ ತೋರುತ್ತಿದೆ.

ಬಾಂಗ್ಲಾದಲ್ಲಿ ಹಿಂದೂ ಸಮುದಾಯದವರ ಮೇಲೆ ನಡೆಯುತ್ತಿರುವ ದಾಳಿಗಳು, ದೌರ್ಜನ್ಯಗಳ ಬಗೆಗೆ ಅಲ್ಲಿನ ಮಧ್ಯಂತರ ಸರಕಾರ‌ದ ಗಮನವನ್ನು ಭಾರತ ಸೆಳೆಯುತ್ತಲೇ ಬಂದಿದ್ದು, ಹಿಂದೂಗಳಿಗೆ ಅಗತ್ಯ ರಕ್ಷಣೆ ಒದಗಿಸುವಂತೆ ಒತ್ತಡ ಹೇರುತ್ತಲೇ ಬಂದಿದೆ. ರಾಜತಾಂತ್ರಿಕ ಮಟ್ಟದಲ್ಲಿ ಮಾತ್ರವಲ್ಲದೆ ಉಭಯ ದೇಶ ಗಳ ನಾಯಕರು ಭೇಟಿಯಾದಾಗಲೆಲ್ಲ ಈ ಬಗ್ಗೆ ಚರ್ಚೆ ನಡೆಸಿ, ಹಿಂದೂಗಳಿಗೆ ಸೂಕ್ತ ಭದ್ರತೆ ನೀಡುವಂತೆ ಆಗ್ರಹಿಸಿದ್ದಾರೆ.

ಇದೇ ವೇಳೆ ಬಾಂಗ್ಲಾದಲ್ಲಿ ನಡೆಯು ತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿದೇಶಿ ನಾಯಕರ ಗಮನ ಸೆಳೆಯುವ ಪ್ರಯತ್ನವನ್ನು ಭಾರತ ಮಾಡಿದೆ. ಈ ಎಲ್ಲ ಮನವಿ, ಪ್ರಯತ್ನಗಳ ಹೊರತಾಗಿಯೂ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತ ಅದರಲ್ಲೂ ಹಿಂದೂಗಳನ್ನೇ ಗುರಿಯಾಗಿಸಿ ನಡೆಸ­ಲಾಗುತ್ತಿರುವ ದಾಳಿಗಳ ಹಿಂದೆ ಭಾರೀ ಷಡ್ಯಂತ್ರವಿದೆ ಎಂಬುದರಲ್ಲಿ ಅನು ಮಾ­ನವೇ ಇಲ್ಲ. ಹೀಗಾಗಿ ಭಾರತ ಸರಕಾರ‌ ಈ ಬಗ್ಗೆ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲವಾದ ದನಿ ಎತ್ತಬೇಕಿದೆ.

ಈ ವಿಷಯದಲ್ಲಿ ಭಾರತ ಈಗಾಗಲೇ ಸಾಕಷ್ಟು ತಾಳ್ಮೆ, ಸಂಯಮ ವಹಿಸಿದ್ದು, ಇನ್ನೊಂದಿಷ್ಟು ಏರು ಧ್ವನಿಯಲ್ಲಿ ಬಾಂಗ್ಲಾ ದೇಶಕ್ಕೆ ಸ್ಪಷ್ಟ ಮಾತುಗಳಲ್ಲಿ ಎಚ್ಚರಿಕೆ ನೀಡಬೇಕು. ಅಂತಾ ರಾಷ್ಟ್ರೀಯ ಮಟ್ಟದಲ್ಲಿಯೂ ಬಾಂಗ್ಲಾ­ದಲ್ಲಿನ ಅರಾಜಕತೆ, ಮಾನವಹಕ್ಕುಗಳ ಉಲ್ಲಂಘನೆಯ ವಿಷಯಗಳನ್ನು ಪ್ರಸ್ತಾಪಿಸಿ, ಬಾಂಗ್ಲಾ ಸರಕಾರ‌ದ ಮೇಲಣ ಒತ್ತಡವನ್ನು ಮತ್ತಷ್ಟು ತೀವ್ರಗೊಳಿಸಿ, ಅಲ್ಲಿನ ಹಿಂದೂಗಳಲ್ಲಿ ಸುರಕ್ಷಾ ಭಾವವನ್ನು ಮೂಡಿಸುವ ಪ್ರಯತ್ನಮಾಡಬೇಕು.

ಟಾಪ್ ನ್ಯೂಸ್

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-s-v

ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

Karnataka Govt.,: ಹೈನುಗಾರರ ಅಳಲಿಗೆ ಸರಕಾರ ತತ್‌ಕ್ಷಣ ಸ್ಪಂದಿಸಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

MONEY (2)

Loan; ಅಡಮಾನ ರಹಿತ ಸಾಲ ಹೆಚ್ಚಳ: ಬ್ಯಾಂಕ್‌ಗಳ ಸ್ಪಂದನೆ ಮುಖ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Sheik Hasina

Sheikh Hasina ಅವಧಿಯಲ್ಲಾದ ಅಪಹರಣಗಳಿಗೆ ಭಾರತ ಕುಮ್ಮಕ್ಕು: ಬಾಂಗ್ಲಾ ವರದಿ

19

Team India: ಎಂಸಿಜಿಯಲ್ಲಿ ಟೀಮ್‌ ಇಂಡಿಯಾ ಅಭ್ಯಾಸ

Uddav-2

Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್‌ ಶಿವಸೇನೆ ಇಂಗಿತ!

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

hk-patil

C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್‌.ಕೆ.ಪಾಟೀಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.